ಮುಂಬೈ (ಮಹಾರಾಷ್ಟ್ರ): ಕಳೆದ ಮೂರು ಪಂದ್ಯಗಳಿಂದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ವಾಂಖೆಡೆಯಲ್ಲಿ ಗುಜರಾತ್ ವಿರುದ್ಧವೂ ಅಬ್ಬರಿಸಿದ್ದಾರೆ. ಗೋಲ್ಡನ್ ಫಾರ್ಮ್ ಮುಂದುವರೆಸಿರುವ ಸೂರ್ಯಕುಮಾರ್ ಭರ್ಜರಿ ಶತಕದ (103, 49 ಎಸೆತ) ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ಗೆ 219 ರನ್ ಗೆಲುವಿನ ಗುರಿ ನೀಡಿದೆ. 20 ಓವರ್ನ ಅಂತ್ಯಕ್ಕೆ ರೋಹಿತ್ ಪಡೆ 5 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ 61 ರನ್ ಆರಂಭಿಕ ಜೊತೆಯಾಟ ನೀಡಿದರು. ಆದರೆ ಹಿಟ್ಮ್ಯಾನ್ ಬೃಹತ್ ಮೊತ್ತ (29) ಗಳಿಸುವಲ್ಲಿ ವಿಫಲರಾದರು. ನಂತರ ಕ್ರೀಸ್ಗೆ ಬಂದ ಸೂರ್ಯ ಕಿಶನ್ಗೆ ಜೊತೆಯಾದರು. ಆದರೆ 5 ರನ್ ಅಂತರದಲ್ಲೇ ಇಶಾನ್ ಕಿಶನ್ (31) ಕೂಡ ಪೆವಿಲಿಯನ್ ಸೇರಿಕೊಂಡರು.
-
.@surya_14kumar's blistering maiden IPL century powered @mipaltan to 218/5 👊
— IndianPremierLeague (@IPL) May 12, 2023 " class="align-text-top noRightClick twitterSection" data="
Can the @gujarat_titans chase this down? 🤔
Chase starts 🔜
Follow the Match: https://t.co/o61rmJX1rD #TATAIPL | #MIvGT pic.twitter.com/8a6TswHTZa
">.@surya_14kumar's blistering maiden IPL century powered @mipaltan to 218/5 👊
— IndianPremierLeague (@IPL) May 12, 2023
Can the @gujarat_titans chase this down? 🤔
Chase starts 🔜
Follow the Match: https://t.co/o61rmJX1rD #TATAIPL | #MIvGT pic.twitter.com/8a6TswHTZa.@surya_14kumar's blistering maiden IPL century powered @mipaltan to 218/5 👊
— IndianPremierLeague (@IPL) May 12, 2023
Can the @gujarat_titans chase this down? 🤔
Chase starts 🔜
Follow the Match: https://t.co/o61rmJX1rD #TATAIPL | #MIvGT pic.twitter.com/8a6TswHTZa
ಕಿಶಾನ್ ನಂತರ ಬಂದ ಯುವ ಪ್ರತಿಭೆ ನೆಹಾಲ್ ವಧೇರಾ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ವಧೇರಾ ಕೇವಲ 7 ಬಾಲ್ಗೆ 15 ರನ್ ಬಾರಿ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟಿಂಗ್ ಬಂದ ವಿಷ್ಣು ವಿನೋದ್ ಅವರು ಸೂರ್ಯಗೆ ತಕ್ಕ ಸಾಥ್ ನೀಡಿದ್ದು, ಈ ಜೋಡಿ 65 ರನ್ ಜೊತೆಯಾಟ ಆಡಿತು. ವಿಷ್ಣು ವಿನೋದ್ 20 ಬಾಲ್ನಲ್ಲಿ 30 ರನ್ ಗಳಿಸಿ ಔಟಾದರೆ, ಬಲಗೈ ದಾಂಡಿದ ಟಿಮ್ ಡೇವಿಡ್ (5) ಕೂಡ ಅಬ್ಬರಿಸುವಲ್ಲಿ ವಿಫಲರಾದರು.
ಚೊಚ್ಚಲ ಐಪಿಎಲ್ ಶತಕ ಗಳಿಸಿದ ಸೂರ್ಯ: ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸೂರ್ಯಕುಮಾರ್ ಏಕಾಂಗಿಯಾಗಿ ಅಬ್ಬರದ ಆಟ ಮುಂದುವರೆಸಿದರು. ಡೇವಿಡ್ ವಿಕೆಟ್ ನಂತರ ಬಂದ ಕ್ಯಾಮರೂನ್ ಗ್ರೀನ್ ಜೊತೆ 54 ರನ್ ಜೊತೆಯಾಟ ಆಡಿದರು. ಆದರೆ ಇದರಲ್ಲಿ ಗ್ರೀನ್ ಎದುರಿಸಿದ್ದು ಕೇವಲ ಮೂರು ಬಾಲ್ ಮಾತ್ರ. ಡೇವಿಡ್ 16.6ನೇ ಬಾಲ್ಗೆ ವಿಕೆಟ್ ಒಪ್ಪಿಸುವಾಗ ಸೂರ್ಯ ಅವರ ಸ್ಕೋರ್ 53 ಆಗಿತ್ತು. ನಂತರ ಸೂರ್ಯ ಹಾಗೂ ಗ್ರೀನ್ ಜೋಡಿ ಮೂರು ಓವರ್ನಲ್ಲಿ ಬರೋಬ್ಬರಿ 54 ರನ್ ಚಚ್ಚಿದರು. ಇದರಲ್ಲಿ ಸೂರ್ಯ ಅವರ ಬ್ಯಾಟ್ನಿಂದಲೇ 50 ರನ್ ಮೂಡಿಬಂದಿದೆ.
ಕೊನೆಯ ಆ ಮೂರು ಓವರ್: 18ನೇ ಓವರ್ ಮಾಡಿದ ಮೋಹಿತ್ ಶರ್ಮಾಗೆ 20 ರನ್, 19ನೇ ಓವರ್ನಲ್ಲಿ 17 ಹಾಗೂ ಅಲ್ಜಾರಿ ಜೋಸೆಫ್ ಎಸೆದ 20ನೇ ಓವರ್ನಲ್ಲಿ 17 ರನ್ ಬಾರಿಸಿದರು. ಮೊದಲ 53 ರನ್ ಗಳಿಸಲು 34 ಬಾಲ್ ಆಡಿದ್ದ ಸೂರ್ಯ, ನಂತರದ 50 ರನ್ಗಳನ್ನು ಕೇವಲ 15 ಎಸೆತಗಳಲ್ಲೇ ಬಾರಿಸಿದರು. ಗುಜರಾತ್ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ 53, ಅಲ್ಜಾರಿ ಜೋಸೆಫ್ 52 ಮತ್ತು ಮೋಹಿತ್ ಶರ್ಮಾ 43 ರನ್ ಬಿಟ್ಟುಕೊಟ್ಟು ದುಬಾರಿಯಾದರು. ರಶೀದ್ ಖಾನ್ ಮಾತ್ರ 4 ವಿಕೆಟ್ ಕಬಳಿಸಿ ಮಿಂಚಿದರು.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಚೇತರಿಸಿಕೊಳ್ಳಲಿದ್ದಾರೆ ಉನಾದ್ಕತ್: ವರದಿ