ಮುಂಬೈ (ಮಹಾರಾಷ್ಟ್ರ): ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡ ತನ್ನ ನಾಯಕ ರೋಹಿತ್ ಶರ್ಮಾಗೆ ವಿಶೇಷ ಉಡುಗೊರೆ ನೀಡಲು ಸಿದ್ಧತೆ ನಡೆಸಿದೆ. ಏಪ್ರಿಲ್ 30 ರಂದು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ನ 42 ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶೇಷ ಸಾಧನೆ ಮಾಡಲಿದ್ದಾರೆ. ಈ ದಿನ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕತ್ವದ 10 ವರ್ಷಗಳನ್ನು ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಕೆಲವು ವಿಶೇಷ ಯೋಜನೆಗಳನ್ನು ಮಾಡುತ್ತಿದೆ.
ಮುಂಬೈ ಇಂಡಿಯನ್ಸ್ ತಂಡವನ್ನು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎಂದು ಕರೆಯಲಾಗುತ್ತದೆ. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ. ಈ ಸಂದರ್ಭದಲ್ಲಿ, ಈ ತಂಡವು ಗೆದ್ದ ಎಲ್ಲಾ 5 ಟ್ರೋಫಿಗಳೊಂದಿಗೆ ರೋಹಿತ್ ಶರ್ಮಾ ಅವರ ಚಿತ್ರವನ್ನು ಹಂಚಿಕೊಂಡಿದೆ.
-
#Hitman10 | 2️⃣4️⃣.0️⃣4️⃣.2️⃣0️⃣1️⃣3️⃣ - Rohit Sharma was appointed as captain of Mumbai Indians
— Mumbai Indians (@mipaltan) April 29, 2023 " class="align-text-top noRightClick twitterSection" data="
🔟 years and 5️⃣ trophies later, we love you 10000, Ro. 💙#OneFamily #MumbaiMeriJaan #MumbaiIndians #TATAIPL #IPL2023 @ImRo45 pic.twitter.com/D1HzAOB3j5
">#Hitman10 | 2️⃣4️⃣.0️⃣4️⃣.2️⃣0️⃣1️⃣3️⃣ - Rohit Sharma was appointed as captain of Mumbai Indians
— Mumbai Indians (@mipaltan) April 29, 2023
🔟 years and 5️⃣ trophies later, we love you 10000, Ro. 💙#OneFamily #MumbaiMeriJaan #MumbaiIndians #TATAIPL #IPL2023 @ImRo45 pic.twitter.com/D1HzAOB3j5#Hitman10 | 2️⃣4️⃣.0️⃣4️⃣.2️⃣0️⃣1️⃣3️⃣ - Rohit Sharma was appointed as captain of Mumbai Indians
— Mumbai Indians (@mipaltan) April 29, 2023
🔟 years and 5️⃣ trophies later, we love you 10000, Ro. 💙#OneFamily #MumbaiMeriJaan #MumbaiIndians #TATAIPL #IPL2023 @ImRo45 pic.twitter.com/D1HzAOB3j5
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ರೋಹಿತ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ರೋಹಿತ್ ಶರ್ಮಾ ನಾಗ್ಪುರದ ನಿವಾಸಿಯಾಗಿದ್ದು, ಬಲಗೈ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಅವರು 2008 ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 2013ರಲ್ಲಿ ಮುಂಬೈ ಇಂಡಿಯನ್ಸ್ನ ನಾಯಕತ್ವ ವಹಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 234 ಪಂದ್ಯಗಳನ್ನು ಆಡಿದ್ದಾರೆ ಮತ್ತು 30.15 ರ ಸರಾಸರಿಯಲ್ಲಿ 6060 ರನ್ ಗಳಿಸಿದ್ದಾರೆ. ಅವರು 1 ಶತಕ ಮತ್ತು 41 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಜೇಯ 109 ಅವರ ಐಪಿಎಲ್ ವೃತ್ತಿ ಜೀವನದ ಗರಿಷ್ಠ ಸ್ಕೋರ್ ಆಗಿದೆ. ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 539 ಬೌಂಡರಿಗಳು ಮತ್ತು 250 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
-
#Hitman10 | 𝐇𝐈𝐓𝐌𝐀𝐍 𝘴𝘪𝘳𝘧 𝘯𝘢𝘢𝘮 𝘯𝘢𝘩𝘪 𝘩𝘢𝘪, 𝐄𝐌𝐎𝐓𝐈𝐎𝐍 𝘩𝘢𝘪 𝘥𝘦𝘴𝘩 𝘬𝘢 🇮🇳💙
— Mumbai Indians (@mipaltan) April 29, 2023 " class="align-text-top noRightClick twitterSection" data="
🎶 credits: Naresh Medtiya#OneFamily #MumbaiMeriJaan #MumbaiIndians #IPL2023 #TATAIPL @ImRo45 pic.twitter.com/fzUjTlJ9cY
">#Hitman10 | 𝐇𝐈𝐓𝐌𝐀𝐍 𝘴𝘪𝘳𝘧 𝘯𝘢𝘢𝘮 𝘯𝘢𝘩𝘪 𝘩𝘢𝘪, 𝐄𝐌𝐎𝐓𝐈𝐎𝐍 𝘩𝘢𝘪 𝘥𝘦𝘴𝘩 𝘬𝘢 🇮🇳💙
— Mumbai Indians (@mipaltan) April 29, 2023
🎶 credits: Naresh Medtiya#OneFamily #MumbaiMeriJaan #MumbaiIndians #IPL2023 #TATAIPL @ImRo45 pic.twitter.com/fzUjTlJ9cY#Hitman10 | 𝐇𝐈𝐓𝐌𝐀𝐍 𝘴𝘪𝘳𝘧 𝘯𝘢𝘢𝘮 𝘯𝘢𝘩𝘪 𝘩𝘢𝘪, 𝐄𝐌𝐎𝐓𝐈𝐎𝐍 𝘩𝘢𝘪 𝘥𝘦𝘴𝘩 𝘬𝘢 🇮🇳💙
— Mumbai Indians (@mipaltan) April 29, 2023
🎶 credits: Naresh Medtiya#OneFamily #MumbaiMeriJaan #MumbaiIndians #IPL2023 #TATAIPL @ImRo45 pic.twitter.com/fzUjTlJ9cY
2023 ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು 16.00 ಕೋಟಿ ರೂ.ಗೆ ಖರೀದಿಸಿದೆ. ಈ ವರ್ಷ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೊಚ್ಚಲ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಹೀಗಾಗಿ ರೋಹಿತ್ ನಾಯಕತ್ವದಲ್ಲಿ ಈ ವರ್ಷ ಆರನೇ ಕಪ್ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
-
#Hitman10 | 🔟 years of Ro’s Skipper era, 🔟 years of believing in miracles 💙🏆
— Mumbai Indians (@mipaltan) April 29, 2023 " class="align-text-top noRightClick twitterSection" data="
Paltan, #MIvRR will be dedicated to this decade of @ImRo45’s captaincy. See you at Wankhede on April 30 🤩#OneFamily #MumbaiIndians #MumbaiMeriJaan #IPL2023 pic.twitter.com/djI258prid
">#Hitman10 | 🔟 years of Ro’s Skipper era, 🔟 years of believing in miracles 💙🏆
— Mumbai Indians (@mipaltan) April 29, 2023
Paltan, #MIvRR will be dedicated to this decade of @ImRo45’s captaincy. See you at Wankhede on April 30 🤩#OneFamily #MumbaiIndians #MumbaiMeriJaan #IPL2023 pic.twitter.com/djI258prid#Hitman10 | 🔟 years of Ro’s Skipper era, 🔟 years of believing in miracles 💙🏆
— Mumbai Indians (@mipaltan) April 29, 2023
Paltan, #MIvRR will be dedicated to this decade of @ImRo45’s captaincy. See you at Wankhede on April 30 🤩#OneFamily #MumbaiIndians #MumbaiMeriJaan #IPL2023 pic.twitter.com/djI258prid
ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಆರಂಭ ಕಂಡಿತು. ಮೊದಲ ಎರಡು ಪಂದ್ಯಗಳನ್ನು ಸೋತು ತನ್ನ ಈ ವರ್ಷದ ಅಭಿಯಾನವನ್ನು ಆರಂಭಿಸಿತು. ನಂತರ ಮೂರು ಪಂದ್ಯಗಳನ್ನು ಗೆದ್ದು ಮತ್ತೆ ಎರಡರಲ್ಲಿ ಸೋಲು ಕಂಡಿದೆ. ನಾಳೆ ಸಂಜೆ ರಾಜಸ್ಥಾನದ ವಿರುದ್ಧ ತವರಿನಲ್ಲಿ ಸೆಣಸಾಡುತ್ತಿದ್ದು, ಗೆಲುವು ಮುಂಬೈಗೆ ಅಗತ್ಯವಾಗಿದೆ. ಈವರೆಗೆ ಆಡಿರುವ 7 ಪಂದ್ಯದಲ್ಲಿ ಕೇವಲ ಮೂರನ್ನು ಮಾತ್ರ ಗೆದ್ದಿದ್ದು, 6 ಅಂಕದಿಂದ ಪಾಯಿಂಟ್ ಟೇಬಲ್ನಲ್ಲಿ 8ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: IPLನಲ್ಲಿ ಇಂದು: ಹ್ಯಾಟ್ರಿಕ್ ಗೆಲುವಿಗೆ ಡೆಲ್ಲಿ ಪ್ರಯತ್ನ.. 3 ಸೋಲಿನ ನಡುವೆ ಜಯದ ಹುಡುಕಾಟದಲ್ಲಿ ಹೈದರಾಬಾದ್