ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಸಂಘಟಿತ ಬೌಲಿಂಗ್ ಪ್ರದರ್ಶನದ ಮುಂದೆ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಕೂಡ 2022ರ ಐಪಿಎಲ್ನ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ಗಳ ಅಂತರದ ಗೆಲುವು ದಾಖಲು ಮಾಡಿದೆ.
-
#MumbaiIndians register their third win of the season!
— IndianPremierLeague (@IPL) May 12, 2022 " class="align-text-top noRightClick twitterSection" data="
The Rohit Sharma -led unit beat #CSK by 5 wickets to bag two more points. 👏 👏
Scorecard ▶️ https://t.co/c5Cs6DHILi #TATAIPL #CSKvMI pic.twitter.com/gqV7iL5f4I
">#MumbaiIndians register their third win of the season!
— IndianPremierLeague (@IPL) May 12, 2022
The Rohit Sharma -led unit beat #CSK by 5 wickets to bag two more points. 👏 👏
Scorecard ▶️ https://t.co/c5Cs6DHILi #TATAIPL #CSKvMI pic.twitter.com/gqV7iL5f4I#MumbaiIndians register their third win of the season!
— IndianPremierLeague (@IPL) May 12, 2022
The Rohit Sharma -led unit beat #CSK by 5 wickets to bag two more points. 👏 👏
Scorecard ▶️ https://t.co/c5Cs6DHILi #TATAIPL #CSKvMI pic.twitter.com/gqV7iL5f4I
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಮೊದಲ ಓವರ್ನಲ್ಲೇ ಕಾನ್ವೆ ವಿಕೆಟ್ ಕಳೆದು ಕೊಂಡಿತು. ಇದರ ಬೆನ್ನಲ್ಲೇ ಮೊಯಿನ್ ಅಲಿ(0), ಗಾಯಕವಾಡ್(7) ರಾಬಿನ್ ಉತ್ತಪ್ಪ(1) ಹಾಗೂ ರಾಯುಡು(10)ನಿರಾಸೆ ಮೂಡಿಸಿದರು. ಹೀಗಾಗಿ, ಕೇವಲ 29 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಬಳಿಕ ಮೈದಾನಕ್ಕಿಳಿದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕೊನೆಯವರೆಗೆ ಬ್ಯಾಟ್ ಬೀಸಿದರು. ಇವರಿಗೆ ಇನ್ನೊಂದು ತುದಿಯಿಂದ ಉತ್ತಮ ಬೆಂಬಲ ನೀಡದ ಶಿವಂ ದುಬೆ(10) ಹಾಗೂ ಬ್ರಾವೋ ಕೂಡ (12) ಔಟ್ ಆದರು. ಅಂತಿಮವಾಗಿ ತಂಡ 15.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 97ರನ್ಗಳಿಗೆ ಆಲೌಟ್ ಆಯಿತು. ಅಜೇಯರಾಗಿ ಉಳಿದ ಧೋನಿ 36ರನ್ಗಳಿಸಿದರು.
ಮುಂಬೈ ಪರ ಡ್ಯಾನಿಯಲ್ ಸ್ಯಾಮ್ಸ್ 3 ವಿಕೆಟ್, ಮೆರ್ಡಿತ್, ಕಾರ್ತಿಕೇಯ ತಲಾ 2 ವಿಕೆಟ್ ಪಡೆದರೆ, ಬುಮ್ರಾ, ಸಿಂಗ್ ತಲಾ 1 ವಿಕೆಟ್ ಕಿತ್ತರು.
ಚೆನ್ನೈ ನೀಡಿದ್ದ 98ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಕೂಡ ಆರಂಭದಲ್ಲೇ ಆಘಾತ ಅನುಭವಿಸಿತು. ಕೇವಲ 33 ರನ್ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಈ ವೇಳೆ, ಒಂದಾದ ತಿಲಕ್ ವರ್ಮಾ ಹಾಗೂ ಹೃತಿಕ್ ಉತ್ತಮ ಜೊತೆಯಾಟ ಆಡಿದರು. ತಿಲಕ್ ವರ್ಮಾ ಅಜೇಯ 34ರನ್ಗಳಿಸಿದರೆ, ಹೃತಿಕ್ 18ರನ್ಗಳಿಸಿ ಔಟಾದರು. ಈ ವೇಳೆ ಮೈದಾನಕ್ಕೆ ಬಂದ ಟಿಮ್ ಡೇವಿಡ್ ಎರಡು ಸಿಕ್ಸರ್ ಸೇರಿದಂತೆ ಅಜೇಯ 16ರನ್ಗಳಿಸಿ ತಂಡಕ್ಕೆ ಜಯ ತಂದಿಟ್ಟರು. ಕೊನೆಯದಾಗಿ ತಂಡ 14.5 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 103 ರನ್ಗಳಿಸಿ, ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು.
ಇದನ್ನೂ ಓದಿ: IPLನಲ್ಲಿ ಮತ್ತೊಂದು ಕಳಪೆ ಸ್ಕೋರ್ ಮಾಡಿದ ಸಿಎಸ್ಕೆ.. ಈ ಪಂದ್ಯದಲ್ಲೂ ಧೋನಿ ರೆಕಾರ್ಡ್!
ಚೆನ್ನೈ ಪರ ಚೌಧರಿ 3 ವಿಕೆಟ್ ಪಡೆದರೆ, ಸಿಂಗ್ ಹಾಗೂ ಅಲಿ ತಲಾ 1 ವಿಕೆಟ್ ಪಡೆದರು. ಮುಂಬೈ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಡೆನಿಯಲ್ ಸ್ಯಾಮ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.