ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಸದ್ಯಕ್ಕೆ ಸುದ್ದಿಯಲ್ಲಿರುವುದು ಒಂದೇ ಕಾರಣಕ್ಕಾಗಿ, ಅದು ನಿವೃತ್ತಿ. ಯಶಸ್ವಿ ನಾಯಕನಿಗೆ ಇದು ಕೊನೆಯ ಐಪಿಎಲ್ ಎಂದು ಹೇಳಲಾಗಿದೆ. ಹೀಗಾಗಿಯೇ ಲೀಗ್ ಹಂತದ ಕೊನೆಯ ಪಂದ್ಯದ ಗೆಲುವಿನ ಬಳಿಕ ಮೈದಾನವೆಲ್ಲ ಸುತ್ತಾಡಿ ಧನ್ಯವಾದ ಹೇಳಿದ್ದರು. ಆದರೀಗ "ತಮ್ಮ ನಿವೃತ್ತಿಗೆ ಇನ್ನೂ ಸಮಯವಿದೆ. ಈಗ್ಯಾಕೆ ಚರ್ಚೆ" ಎಂದೇಳುವ ಮೂಲಕ ಅಭಿಮಾನಿಗಳಲ್ಲಿನ ಪ್ರಶ್ನೆಯನ್ನು ಹಾಗೆಯೇ ಉಳಿಸಿದ್ದಾರೆ.
ನಿನ್ನೆ ನಡೆದ ಕ್ವಾಲಿಫೈಯರ್ನಲ್ಲಿ ಗುಜರಾತ್ ಎದುರು ಗೆಲುವು ಸಾಧಿಸುವ ಮೂಲಕ ಚೆನ್ನೈ ನೇರವಾಗಿ ಫೈನಲ್ ಪ್ರವೇಶಿಸಿದೆ. ಪಂದ್ಯದ ಬಳಿಕ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಅವರು ಕೇಳಿದ ನಿವೃತ್ತಿ ಪ್ರಶ್ನೆಗೆ ಉತ್ತರಿಸಿದ ಮಹೇಂದ್ರ ಸಿಂಗ್ ದೋನಿ, ಮುಂದಿನ ಐಪಿಎಲ್ ಹರಾಜಿಗೆ ಇನ್ನೂ 8 ರಿಂದ 9 ತಿಂಗಳ ಬಾಕಿ ಇದೆ. ಆ ಬಳಿಕವಷ್ಟೇ ನಿವೃತ್ತಿಯ ಬಗ್ಗೆ ನೋಡೋಣ ಎಂದು ತೇಲಿಬಿಟ್ಟರು.
-
The Chennai Super Kings Captain - MS Dhoni answers 𝗧𝗛𝗔𝗧 question again 😉#TATAIPL | #Qualifier1 | #GTvCSK | @msdhoni | @ChennaiIPL pic.twitter.com/drlIpcg5Q5
— IndianPremierLeague (@IPL) May 23, 2023 " class="align-text-top noRightClick twitterSection" data="
">The Chennai Super Kings Captain - MS Dhoni answers 𝗧𝗛𝗔𝗧 question again 😉#TATAIPL | #Qualifier1 | #GTvCSK | @msdhoni | @ChennaiIPL pic.twitter.com/drlIpcg5Q5
— IndianPremierLeague (@IPL) May 23, 2023The Chennai Super Kings Captain - MS Dhoni answers 𝗧𝗛𝗔𝗧 question again 😉#TATAIPL | #Qualifier1 | #GTvCSK | @msdhoni | @ChennaiIPL pic.twitter.com/drlIpcg5Q5
— IndianPremierLeague (@IPL) May 23, 2023
2023 ರ ಐಪಿಎಲ್ ದೋನಿಯ ಕೊನೆಯ ಸೀಸನ್ ಎಂಬ ಊಹಾಪೋಹ ಜೋರಾಗಿದೆ. ನೀವು ಮತ್ತೆ ಚೆನ್ನೈಗೆ ಬಂದು ಕ್ರಿಕೆಟ್ ಆಡ್ತೀರಾ ಎಂದು ಬೋಗ್ಲೆ ಅವರು ಕೇಳಿದಾಗ, ಈ ಬಗ್ಗೆ ನನಗೆ ಗೊತ್ತಿಲ್ಲ. ನಿವೃತ್ತಿ ನಿರ್ಧರಿಸಲು ಇನ್ನೂ 8- 9 ತಿಂಗಳುಗಳಿವೆ. ಅಲ್ಲಿಯವರೆಗೆ ಈ ತಲೆನೋವಿನ ಮಾತ್ಯಾಕೆ. ಭವಿಷ್ಯದ ಬಗ್ಗೆ ನಿರ್ಧರಿಸಲು ಯಾವುದೇ ಆತುರವಿಲ್ಲ. ಡಿಸೆಂಬರ್‌ನಲ್ಲಿ ಹರಾಜು ನಡೆಯಲಿದ್ದು, ಸಾಕಷ್ಟು ಸಮಯವಿದೆ. ನಂತರ ನಿರ್ಧರಿಸೋಣ ಎಂದರು.
ಇದನ್ನೂ ಓದಿ: IPL ನಲ್ಲಿ ಇಂದು: ಮುಂಬೈ- ಲಖನೌ ಸೆಣಸಾಟದಲ್ಲಿ ಎಲಿಮಿನೇಟ್ ಆಗೋರ್ಯಾರು?
ನಾನು ಎಂದಿಗೂ ಸಿಎಸ್‌ಕೆ ಜೊತೆಗೆ ಇರುತ್ತೇನೆ. ಈ ಸೀಸನ್ಗಾಗಿ ಜನವರಿಯಿಂದ ಮನೆಯಿಂದ ಹೊರಗಿದ್ದೇನೆ. ಮಾರ್ಚ್‌ನಿಂದ ಅಭ್ಯಾಸ ಆರಂಭಿಸಿದ್ದೆವು. ಈಗ ನಾವು ಫೈನಲ್ ಪ್ರವೇಶಿಸಿದ್ದೇವೆ. ಈ ಬಗ್ಗೆ ಮಾತ್ರ ಯೋಚಿಸೋಣ. 10 ತಂಡಗಳನ್ನು ಎದುರಿಸಿ ಇಲ್ಲಿಗೆ ಬಂದಿದ್ದೇವೆ. 2 ತಿಂಗಳಿಗಿಂತ ಕಠಿಣ ಶ್ರಮ ಹಾಕಿದ್ದೇವೆ. ಆಟಗಾರರೆಲ್ಲರೂ ಕೊಡುಗೆ ನೀಡಿದ್ದಾರೆ ಎಂದರು.
ನಾನು ಕಿರಿಕಿರಿ ನಾಯಕ: ನಾನು ತುಸು 'ಕಿರಿಕಿರಿ' ಮಾಡುವ ನಾಯಕರಾಗಬಹುದು. ಏಕೆಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬೌಲರ್ ಮತ್ತು ಫೀಲ್ಡರ್‌ಗಳನ್ನು ಬದಲಾಯಿಸುತ್ತಲೇ ಇರುವೆ. ಆಟಗಾರ, ಫೀಲ್ಡಿಂಗ್, ಬೌಲರ್ ಮತ್ತು ಪರಿಸ್ಥಿತಿಯನ್ನು ಆಧರಿಸಿ ಮೈದಾನವನ್ನು ಸೆಟ್ ಮಾಡಬೇಕು. ಹೀಗಾಗಿ ಇದರಲ್ಲಿ ನಾನು ಇತರರಿಗೆ ಕಿರಿಕಿರಿ ಉಂಟು ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ತಂತ್ರದ ಭಾಗವಾಗಿ ನಾನು ಮೈದಾನದಲ್ಲಿ ಫೀಲ್ಡರ್‌ಗಳನ್ನು ಪ್ರತಿ ಸಾರಿ ಬದಲಿಸುವೆ. ಅದಕ್ಕಾಗಿಯೇ ಫೀಲ್ಡರ್‌ಗಳಿಗೆ ನನ್ನ ಮೇಲೆ ಕಣ್ಣಿಡಲು ಹೇಳುತ್ತಿರುತ್ತೇನೆ. ವೇಗದ ಬೌಲಿಂಗ್ ಬಗ್ಗೆ ಮಾತನಾಡಿ, ತಂಡದ ವೇಗಿಗಳು ಅನುಭವಿಗಳಲ್ಲದ ಕಾರಣ, ತಪ್ಪುಗಳಾಗುತ್ತವೆ. ಅವರನ್ನು ಹುರಿದುಂಬಿಸಲು ಸಪೋರ್ಟಿಂಗ್ ಸಿಬ್ಬಂದಿ ಇದ್ದಾರೆ, ಡ್ವೇನ್ ಬ್ರಾವೋ ಮತ್ತು ಎರಿಕ್ ಇದ್ದಾರೆ ಎಂದರು.
ಇದನ್ನೂ ಓದಿ: IPL ಪ್ಲೇಆಫ್‌ನ ಪ್ರತಿ ಡಾಟ್ ಬಾಲ್ಗೆ 500 ಸಸಿ: ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಮಹತ್ವದ ಯೋಜನೆ