ನವದೆಹಲಿ: ಐಪಿಎಲ್ 2023ರ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದ ವೇಳೆ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಡೆಲ್ಲಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ನಡುವೆ ಮಾತಿನ ಚಕಮಕಿ ನಡೆಯಿತು. ಪಂದ್ಯದಲ್ಲಿ ಸಿರಾಜ್ ಬೌಲಿಂಗ್ ಮಾಡುತ್ತಿದ್ದರು. ಪವರ್ ಪ್ಲೇ ಓವರ್ನಲ್ಲಿ ಸಾಲ್ಟ್ ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಈ ವೇಳೆ ಕೋಪಗೊಂಡ ಸಿರಾಜ್ ಸಾಲ್ಟ್ ಮೇಲೆ ಮಾತಿನ ಚಕಮಕಿಗೆ ಇಳಿದು ಬೆರಳು ಗುರಿಮಾಡಿ ಮಾತನಾಡಿರು.
ಸಿರಾಜ್ ಅವರು ಅಗ್ರೆಸಿವ್ ಆಗಿ ಮೈದಾನದಲ್ಲಿ ನಡೆದುಕೊಂಡರು. ಈ ವೇಳೆ ವಾರ್ನರ್ ನಡುವೆ ಬಂದರೂ ಸಿರಾಜ್ ಕೋಪದಿಂದಲೇ ಉತ್ತರ ನೀಡಿದರು. ನಂತರ ಫಿಲ್ಡ್ ಅಂಪೈರ್ ಬಂದು ಸಿರಾಜ್ ಅವರನ್ನು ಬೌಲಿಂಗ್ ಮಾಡುವಂತೆ ಸೂಚಿಸಿದರು. ಈ ವಿಡಿಯೋ ಟ್ವಿಟರ್ ಹ್ಯಾಂಡಲ್ನಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಪಂದ್ಯದ ವೇಳೆ ಈ ಘಟನೆ ನಂತರ ಸಿರಾಜ್ ಹೆಸರು ಟ್ವಿಟರ್ನಲ್ಲಿ ಟ್ರಂಡಿಂಗ್ನಲ್ಲಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಸಿರಾಜ್ 2 ಓವರ್ ಬೌಲ್ ಮಾಡಿ ವಿಕೆಟ್ ಪಡೆಯದೆ 28 ರನ್ ನೀಡಿದರು. ಇದರಿಂದ ಸಿರಾಜ್ ನೊಂದುಕೊಳ್ಳಲು ಆರಂಭಿಸಿದ್ದು, ತಾಳ್ಮೆ ಕಳೆದುಕೊಂಡ ಸಿರಾಜ್ ಕೋಪದಲ್ಲೇ ಇದ್ದರು. ಇದೇ ವೇಳೆ ಸಿರಾಜ್ ಎಸೆತದಲ್ಲಿ ಫಿಲ್ ಸಾಲ್ಟ್ ಸತತ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಇದಾದ ಬಳಿಕ ಸಿರಾಜ್ ಬೌಲ್ ಮಾಡಿದಾಗ ಅಂಪೈರ್ ಅದನ್ನು ವೈಡ್ ಬಾಲ್ ಎಂದು ಕರೆದರು.
-
That's really unnecessary attitude from Siraj| #RCBvDC #MohammedSiraj pic.twitter.com/8tuxy2tIJR
— Shubhankar Mishra (@shubhankrmishra) May 6, 2023 " class="align-text-top noRightClick twitterSection" data="
">That's really unnecessary attitude from Siraj| #RCBvDC #MohammedSiraj pic.twitter.com/8tuxy2tIJR
— Shubhankar Mishra (@shubhankrmishra) May 6, 2023That's really unnecessary attitude from Siraj| #RCBvDC #MohammedSiraj pic.twitter.com/8tuxy2tIJR
— Shubhankar Mishra (@shubhankrmishra) May 6, 2023
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಹೀರೋ ಆದ ಸಾಲ್ಟ್: ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಫಿಲಿಫ್ ಸಾಲ್ಟ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಹೀರೋ ಆದರು. ಸಾಲ್ಟ್ 45 ಎಸೆತಗಳಲ್ಲಿ 87 ರನ್ ಗಳಿಸಿ ಬಿರುಸಿನ ಆಟವಾಡಿದರು. ಅವರ ಇನ್ನಿಂಗ್ಸ್ 193.33 ಸ್ಟ್ರೈಕ್ ರೇಟ್‌ನಲ್ಲಿತ್ತು. ಸಾಲ್ಟ್ ನಿನ್ನೆಯ ಪಂದ್ಯದಲ್ಲಿ ಇಬ್ಬನಿಯಿಂದ ಲಾಭ ಪಡೆದು ಬೌಲರ್ಗಳನ್ನು ದಂಡಿಸಿದರು. ಅವರ ಬ್ಯಾಟ್ನಿಂದ 8 ಬೌಂಡರಿ ಮತ್ತು 6 ಸಿಕ್ಸರ್‌ಗಳು ಪಂದ್ಯದಲ್ಲಿ ಬಂದಿದ್ದವು. ಈ ಅದ್ಭುತ ಇನ್ನಿಂಗ್ಸ್ಗೆ ಸಾಲ್ಟ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿ ವಿರುದ್ಧ 20 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಜಯ ಸಾಧಿಸಿತು. ಪಂದ್ಯ ಮುಕ್ತಾಯದ ನಂತರ ಮೊಹಮ್ಮದ್ ಸಿರಾಜ್ ಫಿಲಿಫ್ ಸಾಲ್ಟ್ ಅನ್ನು ಅಪ್ಪಿಕೊಂಡು ಬ್ಯಾಟಿಂಗ್ಗೆ ಪ್ರಶಂಸಿಸಿದರು. ಸಿರಾಜ್ ಪಂದ್ಯದದ ನಂತರ ಮೆರೆದ ಕ್ರೀಡಾ ಸ್ಪೂರ್ತಿಯಿಂದ ಇಬ್ಬರ ನಡುವಿನ ಮಾತಿನ ಚಕಮಕಿಗೆ ಅಂತ್ಯ ಕಂಡಿತು. ಕೊನೆಗೆ ಮನೆರಂಜಯ ಮೂಲಕ ಕ್ರಿಕೆಟ್ ಗೆದ್ದಿತು ಎಂದರೆ ತಪ್ಪಾಗದು.
ಇದನ್ನೂ ಓದಿ: IPL 2023: ಗುಜರಾತ್ ವಿರುದ್ಧ ಟಾಸ್ ಗೆದ್ದ ಲಕ್ನೋ ಬೌಲಿಂಗ್ ಆಯ್ಕೆ