ಲಕ್ನೋ (ಉತ್ತರ ಪ್ರದೇಶ): ಇಂಡಿಯನ್ ಪ್ರೀಮಿಯರ್ ಲೀಗ್‌ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮುಂಬೈ ತಂಡ ಗೆದ್ದರೆ ಪ್ಲೇ ಆಫ್‌ಗೆ ಅರ್ಹತೆ ಪಡೆದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಲಕ್ನೋ ಸೂಪರ್ ಜೈಂಟ್ಸ್ ಗೆದ್ದಲ್ಲಿ ಪ್ಲೇ ಆಫ್‌ಗೆ ಪ್ರವೇಶಕ್ಕೆ ಒಂದು ಹೆಜ್ಜೆ ಬಾಕಿ ಇರುತ್ತದೆ.
ಸೋಮವಾರ ನಡೆದ ಪಂದ್ಯದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್ ಪ್ಲೇಆಫ್ ಪ್ರವೇಶ ಪಡೆದುಕೊಂಡಿದೆ. ಅತ್ತ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಲೀಗ್ನಿಂದ ಹೊರಬಿದ್ದಿವೆ. ಮಿಕ್ಕ ಏಳು ತಂಡಗಳಲ್ಲಿ ಪ್ಲೇ ಆಫ್ ಪ್ರವೇಶಕ್ಕೆ ಜೋರಿನ ಹಣಾಹಣಿ ನಡೆಯುತ್ತಿದೆ. ಇಂದಿನ ಲಕ್ನೋ ಮುಂಬೈ ಪಂದ್ಯವೂ ಸಹ ಇದೇ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.
-
Our boys train hard in Lucknow ahead of #LSGvMI for crucial 2️⃣ points 💙👉 https://t.co/wc8p5074qI
— Mumbai Indians (@mipaltan) May 16, 2023 " class="align-text-top noRightClick twitterSection" data="
🎥 Enjoy the full episode of #MIDaily on the MI App 📱#OneFamily #MumbaiMeriJaan #MumbaiIndians #TATAIPL #IPL2023 MI TV pic.twitter.com/1rgIOE24yq
">Our boys train hard in Lucknow ahead of #LSGvMI for crucial 2️⃣ points 💙👉 https://t.co/wc8p5074qI
— Mumbai Indians (@mipaltan) May 16, 2023
🎥 Enjoy the full episode of #MIDaily on the MI App 📱#OneFamily #MumbaiMeriJaan #MumbaiIndians #TATAIPL #IPL2023 MI TV pic.twitter.com/1rgIOE24yqOur boys train hard in Lucknow ahead of #LSGvMI for crucial 2️⃣ points 💙👉 https://t.co/wc8p5074qI
— Mumbai Indians (@mipaltan) May 16, 2023
🎥 Enjoy the full episode of #MIDaily on the MI App 📱#OneFamily #MumbaiMeriJaan #MumbaiIndians #TATAIPL #IPL2023 MI TV pic.twitter.com/1rgIOE24yq
ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು 14 ಅಂಕ ಗಳಿಸಿದೆ. ಇಂದಿನ ಪಂದ್ಯವನ್ನು ಗೆದ್ದ ನಂತರ, ಅವರು 16 ಅಂಕಗಳನ್ನು ಹೊಂದಿರುತ್ತಾರೆ ಮತ್ತು ಅವರು ಪ್ಲೇ-ಆಫ್‌ಗೆ ಅರ್ಹತೆ ಪಡೆದ ಎರಡನೇ ತಂಡವಾಗಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಆಡಿರುವ 12 ಪಂದ್ಯದಲ್ಲಿ 6 ರಲ್ಲಿ ಗೆದ್ದಿದ್ದು ಒಂದು ರದ್ದಾದ ಹಿನ್ನೆಲೆ 13 ಅಂಕದಿಂದ ಸದ್ಯ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಲಕ್ನೋ ಸನ್ ರೈಸರ್ಸ್ ಹೈದರಾಬಾದ್ ಭರ್ಜರಿ ಗೆಲುವು ದಾಖಲಿಸಿದ್ದು, ಇಂದು ಅದೇ ಆತ್ಮವಿಶ್ವಾದಲ್ಲಿ ತವರು ಮೈದಾನದಲ್ಲಿ ಕಣಕ್ಕಿಳಿಯುತ್ತಿದೆ. ಮುಂಬೈ ಸಹ ಕಳೆದೆರಡು ಪಂದ್ಯದಲ್ಲಿ ಬೃಹತ್ ಸ್ಕೋರ್ನ್ನ ಉತ್ತಮವಾಗಿ ಬೆನ್ನು ಹತ್ತಿದೆ. ಮುಂಬೈಗೆ ಸೂರ್ಯ ಕುಮಾರ್ ಯಾದವ್ ಕಳೆದೆರಡು ಪಂದ್ಯದಿಂದ ಆಸರೆಯಾಗಿದ್ದು, ಆಂಭದಲ್ಲಿ ಪ್ಲೇ ಸತತ ಸೋಲು ಕಂಡಿದ್ದ ತಂಡ ಪ್ಲೇ ಆಫ್ ಪ್ರವೇಶಕ್ಕೆ ಒಂದು ಗೆಲುವನ್ನು ಎದುರು ನೋಡುತ್ತಿದೆ.
-
Focus only on the 𝐖. 👊🔥 pic.twitter.com/14hm846aSE
— Lucknow Super Giants (@LucknowIPL) May 16, 2023 " class="align-text-top noRightClick twitterSection" data="
">Focus only on the 𝐖. 👊🔥 pic.twitter.com/14hm846aSE
— Lucknow Super Giants (@LucknowIPL) May 16, 2023Focus only on the 𝐖. 👊🔥 pic.twitter.com/14hm846aSE
— Lucknow Super Giants (@LucknowIPL) May 16, 2023
ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ಈವರೆಗೆ ಐಪಿಎಲ್ನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡರಲ್ಲೂ ಲಕ್ನೋ ಗೆದ್ದಿದೆ.
ಸಂಭಾವ್ಯ ತಂಡ ಇಂತಿದೆ..: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಕ್ರಿಸ್ ಜೋರ್ಡಾನ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರೆಂಡಾರ್ಫ್
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ (ನಾಯಕ), ಆಯುಷ್ ಬಡೋನಿ, ಕೆ ಗೌತಮ್, ಯುಧ್ವೀರ್ ಚರಕ್/ಯಶ್ ಠಾಕೂರ್, ರವಿ ಬಿಷ್ಣೋಯ್, ಅಮಿತ್ ಮಿಶ್ರಾ, ಅವೇಶ್ ಖಾನ್
ಇದನ್ನೂ ಓದಿ: ಶುಭ್ಮನ್ ಗಿಲ್ ಶತಕದಾಟ, ಹೈದರಾಬಾದ್ ವಿರುದ್ಧ ಗೆದ್ದ ಟೈಟಾನ್ಸ್ : ಪ್ಲೇ ಆಫ್‌ಗೆ ಪ್ರವೇಶ