ಹೈದರಾಬಾದ್ : ಭಾರತದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಆಟಗಾರರು, ಸಿಬ್ಬಂದಿ ವರ್ಗಕ್ಕೆ ಕೊರೊನಾ ಸೋಂಕು ತಗುಲಿರುವ ಕಾರಣ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಬಿಸಿಸಿಐ ರದ್ದು ಮಾಡಿ ಅನಿರ್ದಿಷ್ಟಾವಧಿಗೆ ಮೂಂದೂಡಿದೆ.
ಈ ಹಿನ್ನೆಲೆಯಲ್ಲಿ ಬಹುತೇಕ ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಕೂಡ ಮಾಲ್ಡೀವ್ಸ್‌ನಲ್ಲಿದ್ದಾರೆ.
ಪೀಟರ್ಸನ್ ತಮ್ಮ ಟ್ವಿಟರ್ನಲ್ಲಿ ಹಿಂದಿಯಲ್ಲಿ ಟ್ವೀಟ್ ಮಾಡಿ ಭಾರತ ಜನರು ಸುರಕ್ಷಿತವಾಗಿ ಇರಿ, ನಿಮಗೆ ಯಾವುದೇ ತೊಂದರೆ ಆಗದಂತೆ ನಾನು ಪ್ರಾರ್ಥಿಸುತ್ತೇನೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
"ನಾನು ಭಾರತವನ್ನು ತೊರೆದಿರಬಹುದು. ಆದರೆ, ನನಗೆ ತುಂಬಾ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಿದ ದೇಶದ ಬಗ್ಗೆ ನಾನು ಇನ್ನೂ ಯೋಚಿಸುತ್ತಿದ್ದೇನೆ. ಅಲ್ಲಿನ ಜನರು ಸುರಕ್ಷಿತವಾಗಿರಬೇಕು. ಈ ಸ್ಥಿತಿ ಕಳೆದು ಹೋಗಲಿದೆ. ಆದರೆ, ಜನರು ಎಚ್ಚರವಾಗಿರಬೇಕು" ಎಂದು ಟ್ವೀಟ್ ಮಾಡಿದ್ದಾರೆ.
-
मैंने भारत छोड़ दिया हो सकता है, लेकिन मैं अभी भी ऐसे देश के बारे में सोच रहा हूँ जिसने मुझे बहुत प्यार और स्नेह दिया है। कृपया लोग सुरक्षित रहें। यह समय बीत जाएगा लेकिन आपको सावधान रहना होगा। 🙏🏽
— Kevin Pietersen🦏 (@KP24) May 11, 2021 " class="align-text-top noRightClick twitterSection" data="
">मैंने भारत छोड़ दिया हो सकता है, लेकिन मैं अभी भी ऐसे देश के बारे में सोच रहा हूँ जिसने मुझे बहुत प्यार और स्नेह दिया है। कृपया लोग सुरक्षित रहें। यह समय बीत जाएगा लेकिन आपको सावधान रहना होगा। 🙏🏽
— Kevin Pietersen🦏 (@KP24) May 11, 2021मैंने भारत छोड़ दिया हो सकता है, लेकिन मैं अभी भी ऐसे देश के बारे में सोच रहा हूँ जिसने मुझे बहुत प्यार और स्नेह दिया है। कृपया लोग सुरक्षित रहें। यह समय बीत जाएगा लेकिन आपको सावधान रहना होगा। 🙏🏽
— Kevin Pietersen🦏 (@KP24) May 11, 2021