ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಯಿಂದ ಹೊರ ಬಿದ್ದಿರುವ ಭಾರತ ತಂಡ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ ನಟರಾಜನ್ ಮಂಗಳವಾರ ಯಶಸ್ವಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಎಸ್ಆರ್ಹೆಚ್ ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಕಳೆದ ವಾರ ಗಾಯದ ಕಾರಣ 2021ರ ಐಪಿಎಲ್ನಿಂದ ಹೊರ ಬಿದ್ದಿದ್ದರು. ಅವರಿಗೆ ಈ ಗಾಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಆಗಿತ್ತಾದರೂ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ಆದರೆ, ಕಳೆದ ವಾರ ನೋವು ಹೆಚ್ಚಾಗಿದ್ದರಿಂದ ಟೂರ್ನಿಯಿಂದ ಹೊರ ಹೋಗಿದ್ದರು.
-
Today, I underwent knee surgery- and am grateful for the expertise, attention and kindness of the medical team, surgeons, doctors, nurses and staff. I’m grateful to @bcci and to all that have wished well for me. pic.twitter.com/Z6pmqzfaFj
— Natarajan (@Natarajan_91) April 27, 2021 " class="align-text-top noRightClick twitterSection" data="
">Today, I underwent knee surgery- and am grateful for the expertise, attention and kindness of the medical team, surgeons, doctors, nurses and staff. I’m grateful to @bcci and to all that have wished well for me. pic.twitter.com/Z6pmqzfaFj
— Natarajan (@Natarajan_91) April 27, 2021Today, I underwent knee surgery- and am grateful for the expertise, attention and kindness of the medical team, surgeons, doctors, nurses and staff. I’m grateful to @bcci and to all that have wished well for me. pic.twitter.com/Z6pmqzfaFj
— Natarajan (@Natarajan_91) April 27, 2021
ಇದೀಗ ಮಂಗಳವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ತಮಗೆ ನೆರವಾದ ಬಿಸಿಸಿಐ ಮತ್ತು ವೈದ್ಯಕೀಯ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
"ಇಂದು ನಾನು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಈ ಸಂದರ್ಭದಲ್ಲಿ ನನ್ನ ಮೇಲೆ ಗಮನ ಮತ್ತು ದಯೆ ತೋರಿದ ವೈದ್ಯಕೀಯ ತಂಡ, ಶಸ್ತ್ರಚಿಕಿತ್ಸಕರು, ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ನಾನು ಆಭಾರಿಯಾಗಿದ್ದೇನೆ. ಬಿಸಿಸಿಐಗೆ ಮತ್ತು ಈ ಸಂದರ್ಭದಲ್ಲಿ ನನ್ನ ಚೇತರಿಕೆಗೆ ಶುಭಕೋರಿದ ಎಲ್ಲರಿಗೂ ಕೃತಜ್ಞನಾಗಿರುತ್ತೇನೆ" ಎಂದು ನಟರಾಜನ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ತನ್ನ ಯಾರ್ಕರ್ಗಳ ಮೂಲಕ ವಿಶ್ವ ಕ್ರಿಕೆಟ್ನ ಗಮನ ಸೆಳಿದಿದ್ದ 30 ವರ್ಷದ ವೇಗಿ ಯುಎಇನಲ್ಲಿ ನಡೆದಿದ್ದ ಟೂರ್ನಿಯಲ್ಲಿ 16 ವಿಕೆಟ್ ಪಡೆದಿದ್ದರು. ಈ ಅದ್ಭುತ ಪ್ರದರ್ಶನದ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಸ್ವರೂಪದ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಇದನ್ನು ಓದಿ: ಪಾಂಡೆ ಅವರನ್ನು ತಂಡದಿಂದ ಕೈಬಿಟ್ಟಿದ್ದು ನಾನಲ್ಲ, ಅವರು: ಡೇವಿಡ್ ವಾರ್ನರ್