ETV Bharat / sports

ಗುಜರಾತ್​ ತಂಡದ ಕೇನ್​ ವಿಲಿಯಮ್ಸನ್​ ಐಪಿಎಲ್​ನಿಂದ ಔಟ್ - Indian Premier League

ಚೆನ್ನೈ ತಂಡದ ಎದುರಿನ ಪಂದ್ಯದಲ್ಲಿ ಗಾಯಗೊಂಡಿದ್ದ ಗುಜರಾತ್​ ಟೈಟಾನ್ಸ್​ ತಂಡದ ಆಟಗಾರ ಕೇನ್​ ವಿಲಿಯಮ್ಸನ್​ ಐಪಿಎಲ್​ನಿಂದಲೇ ಹೊರಬಿದ್ದಿದ್ದಾರೆ.

ಕೇನ್​ ವಿಲಿಯಮ್ಸನ್​ ಐಪಿಎಲ್​ನಿಂದ ಔಟ್
ಕೇನ್​ ವಿಲಿಯಮ್ಸನ್​ ಐಪಿಎಲ್​ನಿಂದ ಔಟ್
author img

By

Published : Apr 2, 2023, 1:26 PM IST

ಅಹಮದಾಬಾದ್: ಇಂಡಿಯನ್​ ಪ್ರೀಮಿಯರ್​ ಲೀಗ್​ನ​(ಐಪಿಎಲ್​) ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್​ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೊಣಕಾಲು ಗಾಯಕ್ಕೆ ತುತ್ತಾದ ಬ್ಯಾಟರ್ ಕೇನ್ ವಿಲಿಯಮ್ಸನ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂದು ಫ್ರಾಂಚೈಸಿ ಭಾನುವಾರ ತಿಳಿಸಿದೆ.

"ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದ ವೇಳೆ ಕ್ಯಾಚ್‌ಗೆ ಪ್ರಯತ್ನಿಸುತ್ತಿದ್ದಾಗ ಗಾಯಗೊಂಡಿದ್ದ ವಿಲಿಯಮ್ಸನ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಕೇನ್ ಅವರನ್ನು ತಂಡ ಮಿಸ್​ ಮಾಡಿಕೊಳ್ಳಲಿದೆ. ಇದು ದುಃಖಕರ ಸಂಗತಿಯೂ ಹೌದು. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಶೀಘ್ರದಲ್ಲೇ ಮತ್ತೆ ಮೈದಾನಕ್ಕೆ ಆಗಮಿಸಲಿ" ಎಂದು ಗುಜರಾತ್​ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ತಿಳಿಸಿದ್ದಾರೆ.

ಮೊಣಕಾಲು ಗಾಯ ತೀವ್ರವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಅವರ ಬದಲಿಗೆ ಬದಲಿ ಆಟಗಾರನನ್ನು ಅಂತಿಮಗೊಳಿಸಬೇಕಿದೆ. ಈ ಕುರಿತು ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಾಗುವುದು ಎಂದು ತಂಡ ತಿಳಿಸಿದೆ.

  • We regret to announce, Kane Williamson has been ruled out of the TATA IPL 2023, after sustaining an injury in the season opener against Chennai Super Kings.

    We wish our Titan a speedy recovery and hope for his early return. pic.twitter.com/SVLu73SNpl

    — Gujarat Titans (@gujarat_titans) April 2, 2023 " class="align-text-top noRightClick twitterSection" data=" ">

ಪ್ರಸಕ್ತ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್‌ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ವಿಲಿಯಮ್ಸನ್ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್​ ಬಾರಿಸಿದ ಚೆಂಡನ್ನು ಬೌಂಡರಿ ಗೆರೆಯಲ್ಲಿ ಜಿಗಿದು ಹಿಡಿಯುವಾಗ ಆಯತಪ್ಪಿ ಬಿದ್ದಿದ್ದರು. ಚೆಂಡು ಸಿಕ್ಸರ್​ ಆಗುವುದನ್ನು ತಡೆದ ವಿಲಿಯಮ್ಸನ್​ ನೆಲಕ್ಕೆ ಕಾಲನ್ನು ಬಲವಾಗಿ ಬಡಿಸಿಕೊಂಡು, ನೋವಿನಿಂದ ಒದ್ದಾಡಿದರು. ತಕ್ಷಣವೇ ಧಾವಿಸಿದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದರೂ, ನೋವು ಹೆಚ್ಚಾದ ಕಾರಣ 13 ನೇ ಓವರ್​ನಲ್ಲಿ ಅವರು ಮೈದಾನದಿಂದ ಹೊರನಡೆದಿದ್ದರು.

2 ಕೋಟಿ ರೂ.ಗೆ ಖರೀದಿ: ನ್ಯೂಜಿಲೆಂಡ್‌ ತಂಡದ ಕೇನ್ ವಿಲಿಯಮ್ಸನ್ ಕಳೆದ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ಹೈದರಾಬಾದ್ ತಂಡದ ನಾಯಕರಾಗಿದ್ದರು. ಆಟಗಾರರ ಹರಾಜಿನ ವೇಳೆ ತಂಡ ಅವರನ್ನು ಬಿಡುಗಡೆ ಮಾಡಿತ್ತು. 32 ವರ್ಷದ ಕೇನ್ ವಿಲಿಯಮ್ಸನ್ಸ್‌ರನ್ನು ಗುಜರಾತ್ ಟೈಟಾನ್ಸ್ 2 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಆದರೆ, ಈಗ ಅವರು ಈ ಬಾರಿಯ ಐಪಿಎಲ್‌ನಿಂದ ಹೊರಬಿದ್ದಿದ್ದು, ತಂಡಕ್ಕೆ ಹಿನ್ನಡೆ ಉಂಟಾಗಿದೆ.

ಕೇನ್​ ಬದಲಾಗಿ ಸಾಯಿ ಸುದರ್ಶನ್ ಬದಲಿ ಫೀಲ್ಡರ್ ಆಗಿ ಮೈದಾನಕ್ಕೆ ಇಳಿದರು. ಬಳಿಕ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಡಿಯಲ್ಲಿ ಬ್ಯಾಟಿಂಗ್​ ಕೂಡ ಮಾಡಿದ್ದರು. ಆದರೆ, ದೊಡ್ಡ ಮೊತ್ತ ಗಳಿಸುವಲ್ಲಿ ಅವರು ವಿಫಲರಾಗಿದ್ದರು. ಪಂದ್ಯದಲ್ಲಿ ಗುಜರಾತ್​ ತಂಡ, ಸಿಎಸ್​ಕೆ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.

ಮಹೇಂದ್ರ ಸಿಂಗ್​ ಧೋನಿಗೂ ಗಾಯ: ಇನ್ನು ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಗಾಯಗೊಂಡಿರುವ ವಿಡಿಯೋ ವೈರಲ್​ ಆಗಿದೆ. ಪಂದ್ಯದಲ್ಲಿ ಕ್ಯಾಚ್​ ವೇಳೆ ಡೈವ್ ಹಾಕುವಾಗ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ನೋವಿನಿಂದ ಕಾಲು ಹಿಡಿದುಕೊಂಡು ಕುಳಿತ ಧೋನಿಗೆ ಫಿಸಿಯೋಗಳು ಚಿಕಿತ್ಸೆ ನೀಡಿದರು. ಧೋನಿಗೆ ಆದ ಗಾಯದ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಡಗೌಟ್​ನಲ್ಲಿ ರಿಷಬ್​ ಪಂತ್​ ಜೆರ್ಸಿ: ಪಂದ್ಯ ಸೋತು ಅಭಿಮಾನಿಗಳ ಮನಸ್ಸು ಗೆದ್ದ ಡೆಲ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.