ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಗುಜರಾತ್ ಟೈಟನ್ಸ್ ಬ್ಯಾಟರ್ ಮ್ಯಾಥ್ಯೂ ವೇಡ್‌ಗೆ ಎಚ್ಚರಿಕೆ ನೀಡಲಾಗಿದೆ. ಮ್ಯಾಥ್ಯೂ ವೇಡ್ ನಿನ್ನೆ ನಡೆದ ಪಂದ್ಯದಲ್ಲಿ ಔಟಾದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಹೆಲ್ಮೆಟ್ ಬಿಸಾಡಿ, ಬ್ಯಾಟ್ ಅನ್ನು ನೆಲಕ್ಕೆಸೆದು ಬೇಸರದ ಜೊತೆ ಕೋಪ ಹೊರಹಾಕಿದ್ದರು.
-
#RCBvGT
— Anmol Dixit (@AnmolDi59769126) May 19, 2022 " class="align-text-top noRightClick twitterSection" data="
Matthew Wade reaction in dugout 😳 pic.twitter.com/IRaCB0XJqz
">#RCBvGT
— Anmol Dixit (@AnmolDi59769126) May 19, 2022
Matthew Wade reaction in dugout 😳 pic.twitter.com/IRaCB0XJqz#RCBvGT
— Anmol Dixit (@AnmolDi59769126) May 19, 2022
Matthew Wade reaction in dugout 😳 pic.twitter.com/IRaCB0XJqz
ಆಗಿದ್ದೇನು? ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಲು ಮುಂದಾದ ಗುಜರಾತ್ ಟೈಟನ್ಸ್‌ಗೆ ಆರಂಭಿಕ ಆಘಾತ ಎದುರಾಯಿತು. 3ನೇ ಓವರ್‌ನಲ್ಲಿ ಓಪನರ್ ಶುಭ್ಮನ್ ಗಿಲ್ ಒಂದು ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಗಿಲ್ ವಿಕೆಟ್ ಪತನದ ಬಳಿಕ ಬ್ಯಾಟ್ ಮಾಡಲು ಕ್ರೀಸಿಗಿಳಿದ ಮ್ಯಾಥ್ಯೂ ವೇಡ್ 2 ಬೌಂಡರಿ, ಒಂದು ಸಿಕ್ಸರ್‌ನೊಂದಿಗೆ 16 ರನ್‌ಗಳ ಮೂಲಕ ದೊಡ್ಡ ಸ್ಕೋರ್ ಮಾಡಲು ಮುಂದಾಗಿದ್ದರು. ಆದರೆ, ಪವರ್-ಪ್ಲೇನ ಕೊನೆಯ ಓವರ್‌ನಲ್ಲಿ ಆಫ್ ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತವನ್ನು ವೇಡ್ ಸ್ವೀಪ್ ಮಾಡಲೆತ್ನಿಸಿದರು. ಈ ವೇಳೆ ಚೆಂಡು ವೇಡ್ ಕಾಲ್ಗೆ ಬಡಿದಿತ್ತು.
ಮೇಲ್ನೋಟಕ್ಕೆ ಮ್ಯಾಥ್ಯೂ ವೇಡ್ ಎಲ್‌ಬಿಡಬ್ಲ್ಯು ಆಗಿರುವಂತೆ ಕಂಡರೂ, ಆನ್‌ಫೀಲ್ಡ್ ಅಂಪೈರ್ ನಾಟ್‌ಔಟ್ ಎಂದು ತೀರ್ಪು ಕೊಟ್ಟರು. ಬಳಿಕ ಆರ್‌ಸಿಬಿ ಡಿಆರ್‌ಎಸ್ ತೆಗೆದುಕೊಂಡಿತು. ಟೆಲಿವಿಷನ್ ರೀಪ್ಲೇ ವೇಳೆ ಚೆಂಡು ಬ್ಯಾಟ್ ಸಮೀಪ ಬಂದಾಗ ಅದರ ದಿಕ್ಕು ಬದಲಾದದ್ದು ಕಾಣಿಸುತ್ತಿತ್ತು. ಕೇವಲ ಅದನ್ನೇ ಆಧರಿಸಿ ತೀರ್ಪು ನೀಡಿದ್ದರೆ ನಾಟ್‌ಔಟ್ ಎಂದೇ ಘೋಷಿಸಬೇಕಿತ್ತು. ಆದರೆ, ಅಲ್ಟ್ರ್ರಾ ಎಡ್ಜ್ ತಂತ್ರಜ್ಞಾನ ಬಳಕೆ ಮಾಡಿ ಪರಿಶೀಲಿಸಿದಾಗ ಅಲ್ಲಿ ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂಬಂತೆ ತಿಳಿಯಿತು. ದ್ವಂದ್ವಕ್ಕೆ ಸಿಲುಕದೇ ಇರಲೆಂದು 3ನೇ ಅಂಪೈರ್ ಅಲ್ಟ್ರಾ ಎಡ್ಜ್ ತಂತ್ರಜ್ಞಾನಕ್ಕೆ ಬೆಲೆ ಕೊಟ್ಟು ಆನ್‌ಫೀಲ್ಡ್ ಅಂಪೈರ್ ನೀಡಿದ್ದ ನಾಟ್‌ಔಟ್ ತೀರ್ಪನ್ನು ಬದಲಾಯಿಸಿ ಔಟ್ ನೀಡುವಂತೆ ಸೂಚಿಸಿತು.
ಇದನ್ನೂ ಓದಿ: ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗದಿರುವುದು ನನ್ನನ್ನು ಕಾಡುತ್ತಿದೆ: ಕೊಹ್ಲಿ
ಚೆಂಡು ಬ್ಯಾಟ್‌ಗೆ ತಾಗಿದೆ ಎಂದೇ ಭಾವಿಸಿದ್ದ ಮ್ಯಾಥ್ಯೂ ವೇಡ್ ಔಟ್ ತೀರ್ಪನ್ನು ಕಂಡು ಅಕ್ಷರಶಃ ಅತೀವ ಬೇಸರಕ್ಕೊಳಗಾದರು. ಡ್ರೆಸಿಂಗ್ ರೂಮ್‌ಗೆ ಹಿಂದಿರುಗಿದವರೇ ಹೆಲ್ಮೆಟ್ ಬಿಸಾಡಿ, ಬ್ಯಾಟ್‌ನಿಂದ ಕುರ್ಚಿ ತುಂಡಾಗುವಂತೆ ಬಾರಿಸಿದರು. ಇದರ ವಿಡಿಯೋವನ್ನು ಪಂದ್ಯದ ನೇರ ಪ್ರದರ್ಶನದ ವೇಳೆ ತೋರಿಸಲಾಯಿತು.
-
The ball has changed direction but there is no action in ultra edge, in this entire IPL the umpire has given decisions against the players, BCCI should pay attention to this.#RCBvsGT #umpiring #IPL2022@BCCI #Wade #MatthewWade@IPLpic.twitter.com/paJ1NjGC3Q
— Dinesh Lilawat (@ImDsL45) May 19, 2022 " class="align-text-top noRightClick twitterSection" data="
">The ball has changed direction but there is no action in ultra edge, in this entire IPL the umpire has given decisions against the players, BCCI should pay attention to this.#RCBvsGT #umpiring #IPL2022@BCCI #Wade #MatthewWade@IPLpic.twitter.com/paJ1NjGC3Q
— Dinesh Lilawat (@ImDsL45) May 19, 2022The ball has changed direction but there is no action in ultra edge, in this entire IPL the umpire has given decisions against the players, BCCI should pay attention to this.#RCBvsGT #umpiring #IPL2022@BCCI #Wade #MatthewWade@IPLpic.twitter.com/paJ1NjGC3Q
— Dinesh Lilawat (@ImDsL45) May 19, 2022
ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮ್ಯಾಚ್ ರೆಫ್ರಿ, ಮ್ಯಾಥ್ಯೂ ವೇಡ್ ನಡೆಯನ್ನು ಖಂಡಿಸಿ ಎಚ್ಚರಿಕೆ ನೀಡಿದ್ದಾರೆ. ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.5 ನಿಯಮ ಉಲ್ಲಂಘಿಸಿರುವುದನ್ನು ಮ್ಯಾಥ್ಯೂ ವೇಡ್ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಪಂದ್ಯದ ನಂತರ ಬೇಸರದಲ್ಲಿದ್ದ ಮ್ಯಾಥ್ಯೂ ವೇಡ್ರನ್ನು ಆರ್‌ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸಂತೈಸಿದರು. ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್ ನಡೆಗೆ ಅಭಿಮಾನಿಗಳ ಫಿದಾ ಆದರು.