ETV Bharat / sports

IPL 2023: ಟಿವಿಯಲ್ಲಿ ಐಪಿಎಲ್‌ ವೀಕ್ಷಕರ ಸಂಖ್ಯೆ ಕುಸಿತ, ಡಿಜಿಟಲ್‌ನಲ್ಲಿ ಭಾರಿ ಹೆಚ್ಚಳ - ಡಿಜಿಟಲ್ ವೀಕ್ಷಕರ ಸಂಖ್ಯೆ ಭಾರಿ ಹೆಚ್ಚಳ

ಟಿವಿಯಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ನೋಡುವ ಕ್ರೇಜ್ ಇತ್ತೀಚೆಗೆ ಕಡಿಮೆಯಾಗುತ್ತಿದೆ.

Sharp drop in TV viewership for IPL 2023 opener; digital viewership on rise; report

author img

By

Published : Apr 7, 2023, 2:56 PM IST

ನವದೆಹಲಿ : ಈ ಬಾರಿಯ ಐಪಿಎಲ್-2023​ ಓಪನಿಂಗ್ ಮ್ಯಾಚ್​ ಸಂದರ್ಭದಲ್ಲಿ ಅದರ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ. ಆದರೆ ಇದೇ ವೇಳೆ ಈ ಮ್ಯಾಚನ್ನು ಡಿಜಿಟಲ್ ಮಾಧ್ಯಮದಲ್ಲಿ ನೋಡಿದವರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ, ಪಂದ್ಯಾವಳಿಯ ಅಧಿಕೃತ ಪ್ರಸಾರಕನಾದ ಸ್ಟಾರ್ ಸ್ಪೋರ್ಟ್ಸ್ ಆರಂಭಿಕ ಪಂದ್ಯಕ್ಕಾಗಿ 7.29 ರ ಟಿವಿಆರ್ ದಾಖಲಿಸಿದೆ. ಇದು 2021 ರ ಆವೃತ್ತಿಯ 8.25 ಮತ್ತು 2020ರ ಆವೃತ್ತಿಯ 10.36 ಗಿಂತ ಬಹಳ ಕಡಿಮೆಯಾಗಿದೆ.

2023ರ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಶೇ 33 ರಷ್ಟು ವೀಕ್ಷಕರು ಟಿವಿಯಲ್ಲಿ ನೋಡಿದ್ದಾರೆ. ಇದು ಕಳೆದ 6 ಐಪಿಎಲ್​ ಸೀಸನ್​ಗಳಲ್ಲಿ ಅತಿ ಕಡಿಮೆ ಪ್ರಮಾಣವಾಗಿದೆ. ಬಾರ್ಕ್ (BARC) ಅಂಕಿ ಅಂಶಗಳನ್ನು ನೋಡುವುದಾದರೆ, ಕಳೆದ ವರ್ಷ ಇದ್ದ ಶೇ 23.1 ವೀಕ್ಷಕರ ಪ್ರಮಾಣಕ್ಕೆ ಹೋಲಿಸಿದರೆ ಅದು ಈ ಬಾರಿ ಶೇ 22 ಆಗಿದೆ. ಡಿಜಿಟಲ್ ವೀಕ್ಷಕರ ಸಂಖ್ಯೆಯನ್ನು ನೋಡುವುದಾದರೆ, ಈ ಬಾರಿ ಜಿಯೊಸಿನಿಮಾ ಐಪಿಎಲ್ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಡಿಸ್ನಿ ಹಾಟ್​ಸ್ಟಾರ್ ಪಂದ್ಯಾವಳಿಯನ್ನು ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರ ಮಾಡಿತ್ತು. ಆದರೆ ಜಿಯೊಸಿನೆಮಾ ಈ ಬಾರಿ ಡಿಸ್ನಿ ಹಾಟ್​ಸ್ಟಾರ್ ವೀಕ್ಷಕರ ಸಂಖ್ಯೆಯನ್ನು ಮೀರಿಸಿದೆ. ಪಂದ್ಯಾವಳಿ ಆರಂಭವಾದ ಮೊದಲ ವಾರದಿಂದಲೇ ಜಿಯೊ ಸಿನೆಮಾ ಡಿಸ್ನಿ ಹಾಟ್​ಸ್ಟಾರ್ ಗಿಂತ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ.

ಜಿಯೊಸಿನೆಮಾದಲ್ಲಿ ಪ್ರಸಾರವಾದ ಟಾಟಾ ಐಪಿಎಲ್​ನ ಉದ್ಘಾಟನಾ ಮ್ಯಾಚ್​ ದಾಖಲೆ ಸಂಖ್ಯೆಯ ಜನರಿಂದ ವೀಕ್ಷಿಸಲ್ಪಟ್ಟಿದೆ. ಪಂದ್ಯಾವಳಿಯ ಪ್ರಥಮ ದಿನೇ ಜಿಯೊಸಿನೆಮಾ ವೀಕ್ಷಕರ ಸಂಖ್ಯೆ 50 ಕೋಟಿ ದಾಟಿದೆ. ಒಂದೇ ದಿನದಲ್ಲಿ 2.5 ಕೋಟಿ ಬಾರಿ ಜಿಯೊ ಸಿನೆಮಾ ಆ್ಯಪ್ ಡೌನ್ಲೋಡ್ ಮಾಡಲಾಗಿದ್ದು, ಒಂದು ದಿನದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇನ್​ಸ್ಟಾಲ್ ಆದ ಆ್ಯಪ್​ ಎಂದು ದಾಖಲೆ ಬರೆದಿದೆ. ಅಲ್ಲದೆ ಗುಜರಾತ್ ಟೈಟನ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ಮ್ಯಾಚ್​ ಅನ್ನು ಜಿಯೊ ಸಿನೆಮಾ ಮೇಲೆ ಒಟ್ಟು 6 ಕೋಟಿ ಜನ ವೀಕ್ಷಿಸಿದ್ದಾರೆ. ಒಂದೇ ಬಾರಿಗೆ ಅತ್ಯಧಿಕ 1.6 ಕೋಟಿ ಜನ ಈ ಮ್ಯಾಚ್ ನೋಡಿದ್ದಾರೆ.

ಇಲ್ಲಿಯವರೆಗೆ ಡಿಸ್ನಿ ಹಾಟ್‌ಸ್ಟಾರ್ ಭಾರತದಲ್ಲಿ ಐಪಿಎಲ್ ಅನ್ನು ಸ್ಟ್ರೀಮ್ ಮಾಡುತ್ತಿತ್ತು ಮತ್ತು ಚಂದಾದಾರಿಕೆಗೆ ಪಾವತಿಸಿದವರು ಮಾತ್ರ ಪಂದ್ಯಗಳನ್ನು ವೀಕ್ಷಿಸಬಹುದಾಗಿತ್ತು. FIFA ವಿಶ್ವಕಪ್ 2022ರ ಮಲ್ಟಿ ಕ್ಯಾಮ್ ವೈಶಿಷ್ಟ್ಯದ ರೀತಿಯಲ್ಲಿಯೇ ಜಿಯೊ ಸಿನೆಮಾ ಕೂಡ ಬಳಕೆದಾರರಿಗೆ ಎಲ್ಲಾ 74 ಪಂದ್ಯಗಳಿಗೆ ಬಹು ಕ್ಯಾಮೆರಾ ಕೋನಗಳನ್ನು ಬದಲಾಯಿಸುವ ಅವಕಾಶ ನೀಡುತ್ತಿದೆ. ಜಿಯೊ ಫೀಚರ್ ಫೋನ್ ಈಗಾಗಲೇ ಜಿಯೊ ಸಿನೆಮಾವನ್ನು ಸಪೋರ್ಟ್​ ಮಾಡುವುದರಿಂದ ಜಿಯೊ ಫೋನ್ ಬಳಕೆದಾರರು ಐಪಿಎಲ್ 2023 ಅನ್ನು ಉಚಿತವಾಗಿ ಸ್ಟ್ರೀಮ್ ಮಾಡಬಹುದು.

ಇದನ್ನೂ ಓದಿ : ತಮಿಳುನಾಡಲ್ಲೂ ಆರ್​ಸಿಬಿ ಫ್ಯಾನ್ಸ್​​​: ಅಭಿಮಾನಿಗಳಿಂದ "ಈ ಸಲ ಕಪ್​ ನಮ್ದೆ" ಎಂದು ದೇವರಿಗೆ ಹರಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.