ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನ ಡಿಜಿಟಲ್ ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವ ಜಿಯೋ ಸಿನಿಮಾ ದಾಖಲೆಯ ಜಾಹೀರಾತುದಾರರನ್ನು ಮತ್ತು ವೀಕ್ಷಕರನ್ನು ಗಳಿಸಿದೆ. ಇದರಿಂದ ಭರ್ಜರಿ ಆದಾಯಗಳಿಸುತ್ತಿದೆ. ಈವರೆಗಿನ ಕ್ರೀಡಾ ಪ್ರಸಾರದಲ್ಲಿ ಜಿಯೋ ಸಿನಿಮಾ ಅಪ್ಲಿಕೇಶನ್ ಇತಿಹಾಸವನ್ನೇ ನಿರ್ಮಾಣ ಮಾಡಿದೆ.
ಜಿಯೋದ ಉಚಿತ ಯೋಜನೆ ಹೆಚ್ಚಿನ ಪ್ರೇಕ್ಷಕರನ್ನು ತಲುಪಿದೆ. ಎಲ್ಲಾ ಸಿಮ್ ಬಳಕೆದಾರರಿಗೆ ಉಚಿತ ವೀಕ್ಷಣೆಯ ಅವಕಾಶವನ್ನು ಜಿಯೋ ಸಿನಿಮಾ ಮಾಡಿಕೊಟ್ಟಿದೆ. ಅಲ್ಲದೇ ಚಂದಾದಾರಿಕೆಯ ಜೊತೆಗೆ ನೋಂದಣಿ ರಹಿತವಾಗಿ ಪಂದ್ಯ ನೋಡಲು ಸಾಧ್ಯವಿದೆ. ಇದರಿಂದ 2.4 ಕೋಟಿ ವೀಕ್ಷರರು ಪಂದ್ಯವನ್ನು ಒಮ್ಮೆಗೆ ನೋಡಿದ ದಾಖಲೆ ನಿರ್ಮಾಣವಾಗಿದೆ.
ಜಿಯೋ ಸಿನಿಮಾಗೆ ಬರೋಬ್ಬರಿ 26 ಜಾಹೀರಾತುದಾರರು ಹರಿದು ಬಂದಿದ್ದಾರೆ. ಟೂರ್ನಿಯ ಅರ್ಧಕ್ಕೂ ಮೊದಲು 23 ಸ್ಪಾನ್ಸರ್ಗಳು ಬಂದಿದ್ದೇ ದಾಖಲೆಯಾಗಿತ್ತು. ಅದಕ್ಕೆ ಮತ್ತೆ ಮೂವರು ಸೇರಿಕೊಂಡಿದ್ದಾರೆ. ಡಿಜಿಟಲ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಯಾವುದೇ ಕ್ರೀಡಾಕೂಟವನ್ನು ಸ್ವೀಕರಿಸಿದ ಅತಿ ಹೆಚ್ಚು ಪ್ರಾಯೋಜಕರ ಸಂಖ್ಯೆ ಇದಾಗಿದೆ. ಡಿಜಿಟಲ್ ವೇದಿಕೆಯಲ್ಲಿ ಪ್ರೇಕ್ಷಕರ ಪಾಲುದಾರಿಕೆ ಹೆಚ್ಚು ಇರುವುದರಿಂದ ಸ್ಪಾನ್ಸರ್ಗಳು ಈ ಮಾಧ್ಯಮವನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ.
16ನೇ ಆವೃತ್ತಿಯ ಜಾಹೀರಾತು ವೆಚ್ಚ ಸಿಂಹಪಾಲು ಗಳಿಕೆ ಜಿಯೋ ಸಿನಿಮಾದ್ದಾಗಿದೆ. ಶೇಕಡಾವರು 70 ಪ್ರತಿಶತವನ್ನು ಜಿಯೋ ಸಿನಿಮಾ ತನ್ನ ತಕ್ಕೆಗೆ ತೆಗೆದುಕೊಂಡಿದೆ. ಇದರಲ್ಲಿ ಪ್ರವಾಸೋದ್ಯಮ, ಆಡಿಯೋ ಸ್ಟ್ರೀಮಿಂಗ್, ಬಿಎಫ್‌ಎಸ್‌ಐ ಸೇರಿದಂತೆ ಈ ವರ್ಷ ಡಿಜಿಟಲ್‌ನೊಂದಿಗೆ ಪ್ರಾಯೋಜಕರ ಕೆಲವು ಹೊಸ ವಿಭಾಗಗಳು ಸೇರಿಕೊಂಡಿವೆ.
ವೀಕ್ಷಕರ ಮತ್ತು ಅಪ್ಲಿಕೇಶನ್ ಡೌನ್‌ಲೋಡ್‌ಗಳ ವಿಷಯದಲ್ಲಿಯೂ, ಜಿಯೋ ಸಿನಿಮಾ ಹಿಂದಿನ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿದೆ. ಏಕಕಾಲೀನ ವೀಕ್ಷಕರ ಸಂಖ್ಯೆ ಈಗಾಗಲೇ 2.4 ಕೋಟಿ ತಲುಪಿ ಗರಿಷ್ಠ ವೀಕ್ಷಣೆ ಪಡೆದಿದೆ. ಜಿಯೋ ಸಿನಿಮಾ ಜಾಗತಿಕವಾಗಿ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.
ಮಲ್ಟಿ-ಕ್ಯಾಮ್, 4K, ಹೈಪ್ ಮೋಡ್‌ನಂತಹ ವೈಶಿಷ್ಟ್ಯಗಳು ಪ್ರೇಕ್ಷಕರನ್ನು ಹೆಚ್ಚು ಡಿಜಿಟಲ್ ಮಾದ್ಯಮದತ್ತ ಸೆಳೆಯುತ್ತಿದೆ. ಇನ್ನಷ್ಟು ಹೊಸ ಫೀಚರ್ಗಳು ತಂತ್ರಾಂಶಕ್ಕೆ ಮುಂದಿನ ದಿನಗಳಲ್ಲಿ ಬರಲಿದ್ದು ನೋಡುಗರಿಗೆ ಹೆಚ್ಚಿನ ಮನರಂಜನೆ ಸಿಗಲಿದೆ. ಪ್ರತಿ ಪಂದ್ಯದಲ್ಲಿ 57 ನಿಮಿಷ ಸರಾಸರಿ ವೀಕ್ಷಕರನ್ನು ಜಿಯೋ ಸಿನಿಮಾ ದಾಖಲಿಸುತ್ತಿದ್ದು, ಇದು ಕಳೆದ ಆವೃತ್ತಿಯ ಐಪಿಎಲ್ಕ್ಕಿಂತ ಶೇ 60 ದಷ್ಟು ಹೆಚ್ಚಿನದ್ದಾಗಿದೆ.
ಮೊದಲ ದಿನ ದಾಖಲೆ: ಐಪಿಎಲ್ 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಂದು ಅತೀ ಹೆಚ್ಚು ವೀಕ್ಷಣೆ ಗಳಿಸಿ ಜಿಯೋಸಿನಿಮಾ ದಾಖಲೆ ಬರೆದಿತ್ತು. ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ವೇಳೆ 1.6 ಕೋಟಿ ವೀಕ್ಷಣೆ ಪಡೆದುಕೊಂಡಿತ್ತು. 2.5 ಕೋಟಿ ಜನ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಆರ್ಸಿಬಿ ಮತ್ತು ಚೆನ್ನೈ ಪಂದ್ಯದ ಕೊನೆಯ ಓವರ್ನ ವೀಕ್ಷಣೆ 2.4 ಕೋಟಿ ತಲುಪಿದ್ದು ಈವರೆಗಿನ ದಾಖಲೆಯಾಗಿದೆ.
ಇದನ್ನೂ ಓದಿ: RCB vs LSG: ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ಕೆ, ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು?