ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 163 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದ್ರೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಜವಾಬ್ದಾರಿ ಆಟಕ್ಕೆ ಗುಜರಾತ್ ತಂಡ ಸೋಲು ಕಂಡಿತು.
-
Nicholas Pooran hits the winnings runs as @SunRisers win by 8 wickets against #GujaratTitans
— IndianPremierLeague (@IPL) April 11, 2022 " class="align-text-top noRightClick twitterSection" data="
Scorecard - https://t.co/phXicAbLCE #SRHvGT #TATAIPL pic.twitter.com/F5o01VSEHv
">Nicholas Pooran hits the winnings runs as @SunRisers win by 8 wickets against #GujaratTitans
— IndianPremierLeague (@IPL) April 11, 2022
Scorecard - https://t.co/phXicAbLCE #SRHvGT #TATAIPL pic.twitter.com/F5o01VSEHvNicholas Pooran hits the winnings runs as @SunRisers win by 8 wickets against #GujaratTitans
— IndianPremierLeague (@IPL) April 11, 2022
Scorecard - https://t.co/phXicAbLCE #SRHvGT #TATAIPL pic.twitter.com/F5o01VSEHv
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಶುಬ್ಮನ್ ಗಿಲ್(7), ಸಾಯಿ ಸುದರ್ಶನ್(11) ವಿಕೆಟ್ ಬೇಗ ಕಳೆದುಕೊಂಡಿತು. ಮ್ಯಾಥ್ಯೂ ವೇಡ್ ಕೂಡ 19 ರನ್ಗಳಿಸಿ 8 ಓವರ್ಗಳ ಒಳಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದಂತಹ ಡೇವಿಡ್ ಮಿಲ್ಲರ್ ಕ್ರೀಸ್ನಲ್ಲೇ ಸಮಯ ಕಳೆದರೇ ವಿನಃ ರನ್ಗಳಿಸುವಲ್ಲಿ ವಿಫಲರಾದರು. ಅವರು 15 ಎಸೆತಗಳಲ್ಲಿ ಕೇವಲ 12 ರನ್ಗಳಿಸಿದರು. ಈ ಹಂತದಲ್ಲಿ ನಾಯಕ ಹಾರ್ದಿಕ್ ಜೊತೆಗೂಡಿದ ಕರ್ನಾಟಕದ ಬ್ಯಾಟರ್ ಅಭಿನವ್ ಮನೋಹರ್ 5ನೇ ವಿಕೆಟ್ಗೆ 50 ರನ್ಗಳ ಜೊತೆಯಾಟವಾಡಿದರು. ಅವರು 21 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 35 ರನ್ಗಳಿಸಿದರು. ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 50 ರನ್ಗಳಿಸಿದರು.
ಓದಿ: ಐಪಿಎಲ್ನಲ್ಲಿ ಕಾಣಿಸಿಕೊಂಡ್ಲು ಹೊಸ 'ಮಿಸ್ಟರಿ ಹುಡುಗಿ': ಸಾಮಾಜಿಕ ಜಾಲತಾಣದಲ್ಲಿ ವೈರಲ್
ಗುಜರಾತ್ ತಂಡ ನಿಗದಿತ 20 ಓವರ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡು 162 ರನ್ಗಳ ಕಲೆ ಹಾಕಿ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಸನ್ರೈಸರ್ಸ್ ಹೈದರಾಬಾದ್ ಪರ ಟಿ. ನಟರಾಜನ್ 34ಕ್ಕೆ2, ಭುವನೇಶ್ವರ್ ಕುಮಾರ್ 37ಕ್ಕೆ 2 ಹಾಗೂ ಉಮರ್ ಮಲಿಕ್ ಮತ್ತು ಮಾರ್ಕೊ ಜಾನ್ಸನ್ ತಲಾ ಒಂದು ವಿಕೆಟ್ ಪಡೆದರು.
ಸನ್ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ಗುಜರಾತ್ ನೀಡಿದ ಗುರಿಯನ್ನು ಬೆನ್ನತ್ತಿದ್ದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ಸಾಯಿತು. ನಿಧಾನವಾಗಿಯೇ ಗುಜರಾತ್ ತಂಡದ ಬೌಲರ್ಗಳ ಬೆವರಿಳಿಸುತ್ತ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ಅಭಿಷೇಕ್ ಶರ್ಮಾ ಶ್ರಮವಹಿಸಿದರು.
ಮೊದಲನೇ ವಿಕೆಟ್ಗೆ ಹೈದರಾಬಾದ್ ತಂಡ 64 ಕಲೆ ಹಾಕಿತು. 32 ಎಸೆತಕ್ಕೆ 6 ಬೌಂಡರಿಗಳ ನೆರವಿನಿಂದ 42 ಕಲೆ ಹಾಕಿದ್ದ ಅಭಿಷೇಕ್ ಶರ್ಮಾ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಾಹುಲ್ ತ್ರಿಪಾಠಿ ನಾಯಕನಿಗೆ ಸಾಥ್ ನೀಡಿದರು. ಹೆಚ್ಚು ಕ್ರೀಸ್ನಲ್ಲಿ ನಿಲ್ಲದೇ 11 ಎಸೆತಗಳಿಗೆ 17 ರನ್ ಕಲೆ ಹಾಕಿದ್ದ ತ್ರಿಪಾಠಿ ರಿಟೈರ್ಡ್ಹರ್ಟ್ ಆದರು. ಬಳಿಕ ಬಂದ ನಿಕೋಲಸ್ ಪೂರನ್ ಜೊತೆ ನಾಯಕ ವಿಲಿಯಮ್ಸನ್ ತಮ್ಮ ಆಟ ಮುಂದುವರಿಸಿದರು.
ಓದಿ: ಪ್ರತಿಭಾನ್ವೇಷಣೆಗೆ ವೇದಿಕೆಯಾದ IPL: ರಾಯಲ್ಸ್ ಗೆಲುವಿನ 'ಸೇನಾ'ನಾಯಕ ಒಬ್ಬ ಬಡ ಕ್ಷೌರಿಕನ ಸುಪುತ್ರ!
46 ಎಸೆತಗಳನ್ನು ಎದುರಿಸಿದ್ದ ನಾಯಕ ಕೇನ್ ವಿಲಿಯಮ್ಸನ್ 57 ರನ್ ಗಳಿಸಿ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಐಡೆನ್ ಮಾರ್ಕ್ರಾಮ್ ಜೊತೆ ಪೂರನ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಐಡೆನ್ ಮಾರ್ಕ್ರಾಮ್ 8 ಎಸೆತಗಳಲ್ಲಿ 12 ಕಲೆ ಹಾಕಿದ್ರೆ, ನಿಕೋಲಸ್ ಪೂರನ್ 18 ಎಸೆತಗಳಲ್ಲಿ 34 ರನ್ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು.
ಒಟ್ನಲ್ಲಿ ಗುಜರಾತ್ ಟೈಟನ್ಸ್ ನೀಡಿದ ಗುರಿಯನ್ನು ಹೈದರಾಬಾದ್ ತಂಡ 19.1 ಓವರ್ಗಳಿಗೆ 2 ವಿಕೆಟ್ಗಳ ನಷ್ಟಕ್ಕೆ 168 ರನ್ಗಳು ಕಲೆ ಹಾಕುವ ಮೂಲಕ ಭರ್ಜರಿ ಜಯ ಸಾಧಿಸಿದರು. ಗುಜರಾತ್ ಪರ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಇಂದು ಸಂಜೆ 7.30ಕ್ಕೆ ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಬಿಗ್ ಫೈಟ್ ನಡೆಯಲಿದೆ.