ಮುಂಬೈ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್(7ರನ್) ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೈದಾನಕ್ಕಿಳಿದು ಅಬ್ಬರಿಸಿದ ಆರ್ ಅಶ್ವಿನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಾವು ಎದುರಿಸಿದ 38 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಸಮೇತ 50ರನ್ಗಳಿಕೆ ಮಾಡಿದರು.ಈ ವೇಳೆ ಉತ್ತಮವಾಗಿ ಆಡ್ತಿದ್ದ ಜೈಸ್ವಾಲ್ 19ರನ್ಗಳಿಸಿ ಮಿಚೆಲ್ ಮಾರ್ಷ್ 19ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ಅಶ್ವಿನ್-ಪಡಿಕ್ಕಲ್ ಉತ್ತಮ ಜೊತೆಯಾಟ: 54ರನ್ಗಳಿಕೆ ಮಾಡುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡ ರಾಜಸ್ಥಾನ ತಂಡಕ್ಕೆ ಅಶ್ವಿನ್-ಪಡಿಕ್ಕಲ್ ಜೋಡಿ ಉತ್ತಮ ಬುನಾದಿ ಹಾಕಿತು. ಎದುರಾಳಿ ಬೌಲರ್ಗಳನ್ನ ಸುಲಭವಾಗಿ ದಂಡಿಸಿದರು. 50ರನ್ಗಳಿಕೆ ಮಾಡಿದ ವೇಳೆ ಅಶ್ವಿನ್ ಮಿಚೆಲ್ ಮಾರ್ಷ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರೆ, ಪಡಿಕ್ಕಲ್ 48ರನ್ಗಳಿಸಿ ಔಟಾದರು.
ನಿರಾಸೆ ಮೂಡಿಸಿದ ಸ್ಯಾಮ್ಸನ್-ಪರಾಗ್: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ ಕ್ಯಾಪ್ಟನ್ ಕೇವಲ 6ರನ್ ಹಾಗೂ ಪರಾಗ್ 9ರನ್ಗಳಿಕೆ ಮಾಡಿ ಔಟಾದರು. ಇದರ ಬೆನ್ನಲ್ಲೇ ಬಂದ ಡುಸೆನ್ ಅಜೇಯ 12ರನ್ಗಳಿಕೆ ಮಾಡಿದರು. ಕೊನೆಯದಾಗಿ ತಂಡ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 160ರನ್ಗಳಿಕೆ ಮಾಡಿತು.
ಡೆಲ್ಲಿ ತಂಡದ ಪರ ಚೇತನ್ ಸಕಾರಿಯಾ, ಅನ್ರಿಚ್ ನಾರ್ಟ್ಜೆ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರು.
ಇಂಡಿಯನ್ ಪ್ರೀಮಿಯರ್ ಲೀಗ್ ಇಂದಿನ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಪ್ಲೇ-ಆಫ್ ಪ್ರವೇಶದ ದೃಷ್ಟಿಕೋನದಿಂದ ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿದೆ.
-
#DelhiCapitals have won the toss and they will bowl first against #RR
— IndianPremierLeague (@IPL) May 11, 2022 " class="align-text-top noRightClick twitterSection" data="
Live - https://t.co/EA3RTz0tWQ #RRvDC #TATAIPL pic.twitter.com/CzGkzHNGvV
">#DelhiCapitals have won the toss and they will bowl first against #RR
— IndianPremierLeague (@IPL) May 11, 2022
Live - https://t.co/EA3RTz0tWQ #RRvDC #TATAIPL pic.twitter.com/CzGkzHNGvV#DelhiCapitals have won the toss and they will bowl first against #RR
— IndianPremierLeague (@IPL) May 11, 2022
Live - https://t.co/EA3RTz0tWQ #RRvDC #TATAIPL pic.twitter.com/CzGkzHNGvV
ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಕ್ಷೇತ್ರ ರಕ್ಷಣೆ ನಿರ್ಧಾರ ಕೈಗೊಂಡಿದ್ದಾರೆ. ಮಹತ್ವದ ಪಂದ್ಯದಲ್ಲಿ ಡೆಲ್ಲಿ ಎರಡು ಬದಲಾವಣೆ ಮಾಡಿದ್ದು, ಲಲಿತ್ ಯಾದವ್ ಹಾಗೂ ಚೇತನ್ ಸಕಾರಿಯಾ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇತ್ತ ಡೆಲ್ಲಿ ತಂಡದಲ್ಲಿ ಹೆಟ್ಮಾಯರ್ ಸ್ಥಾನಕ್ಕೆ ಡುಸೆನ್ಗೆ ಅವಕಾಶ ನೀಡಲಾಗಿದೆ.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ, ಕ್ಯಾಪ್ಟನ್), ದೇವದತ್ ಪಡಿಕ್ಕಲ್, ಡುಸ್ಸೆನ್, ರಿಯಾಗ್ ಪರಾಗ್, ಆರ್.ಅಶ್ವಿನ್, ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಲ್, ಕುಲ್ದೀಪ್ ಸೇನ್
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಶ್ರೀಕಾರ್ ಭರತ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ವಿ.ಕೀ, ಕ್ಯಾಪ್ಟನ್), ಲಲಿತ್ ಯಾದವ್, ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಚೇತನ್ ಸಕಾರಿಯಾ, ಕುಲ್ದೀಪ್ ಯಾದವ್, ಅನ್ರಿಚ್ ನಾರ್ಟ್ಜೆ
ಸದ್ಯ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 11 ಪಂದ್ಯಗಳ ಪೈಕಿ 7ರಲ್ಲಿ ಗೆದ್ದು 14 ಪಾಯಿಂಟ್ ಕಲೆ ಹಾಕಿದೆ. ಐದನೇ ಸ್ಥಾನದಲ್ಲಿರುವ ಡೆಲ್ಲಿ 11 ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಸಾಧಿಸಿ 10 ಅಂಕಗಳಿಕೆ ಮಾಡಿದೆ. ಈ ಎರಡು ತಂಡಗಳ ನಡುವೆ ಈ ಹಿಂದೆ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನ ನಗೆ ಬೀರಿದೆ.
ಐಪಿಎಲ್ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ರಾಜಸ್ಥಾನ 13 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.