ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಟ್ಟಿರುವ ಆಸೀಸ್ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಕಳೆದ ಕೆಲ ವಾರಗಳ ಹಿಂದೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು. ಅವರಿಗೆ ವಿಶೇಷವಾಗಿ ಗೌರವ ಸಲ್ಲಿಕೆ ಮಾಡಲು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ನಿರ್ಧಾರ ಕೈಗೊಂಡಿದೆ.
ಡಿ.ವೈ.ಪಾಟೀಲ್ ಮೈದಾನದಲ್ಲಿ ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕಾಗಿ ರಾಜಸ್ಥಾನ ತಂಡದ ಎಲ್ಲ ಪ್ಲೇಯುರ್ಸ್ ವಿಶೇಷವಾದ ಜರ್ಸಿ ಹಾಕಿಕೊಳ್ಳಲಿದ್ದಾರೆ. ಈ ಮೂಲಕ ಶೇನ್ವಾರ್ನ್ಗೆ ಗೌರವ ಸಲ್ಲಿಸುವ ನಿರ್ಧಾರ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಫ್ರಾಂಚೈಸಿ, ಈಗಾಗಲೇ ತನ್ನ ಅಧಿಕೃತ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
-
A special jersey, to honour a special man. #ForWarnie 💗#RoyalsFamily | #RRvMI pic.twitter.com/fE3WApOHIz
— Rajasthan Royals (@rajasthanroyals) April 29, 2022 " class="align-text-top noRightClick twitterSection" data="
">A special jersey, to honour a special man. #ForWarnie 💗#RoyalsFamily | #RRvMI pic.twitter.com/fE3WApOHIz
— Rajasthan Royals (@rajasthanroyals) April 29, 2022A special jersey, to honour a special man. #ForWarnie 💗#RoyalsFamily | #RRvMI pic.twitter.com/fE3WApOHIz
— Rajasthan Royals (@rajasthanroyals) April 29, 2022
ಈ ಆಚರಣೆಯ ಮುಂದಾಳತ್ವವನ್ನು ರಾಜಸ್ಥಾನ್ ರಾಯಲ್ಸ್ ವಹಿಸಿಕೊಂಡಿದ್ದು, ಬಿಸಿಸಿಐ ಬೆಂಬಲ ನೀಡಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರ ಜರ್ಸಿಯಲ್ಲಿ 'SW23' ಎಂಬ ಸಂಖ್ಯೆಯನ್ನು ಬರೆಯಲಾಗಿದೆ. ಪಂದ್ಯಕ್ಕೆ ಶೇನ್ ವಾರ್ನ್ ಸಹೋದರ ಜಾನ್ಸನ್ ಸಾಕ್ಷಿಯಾಗಲಿದ್ದಾರೆ.
ಇದನ್ನೂ ಓದಿ: ರೋಹಿತ್, ಸಚಿನ್ ದಾಖಲೆ ಸರಿಗಟ್ಟಿದ ಕುಲ್ದೀಪ್; ಡೆಲ್ಲಿಯ ನಾಲ್ಕು ಗೆಲುವಿನಲ್ಲೂ ಪಂದ್ಯಶ್ರೇಷ್ಠ!
2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದ ರಾಜಸ್ಥಾನ ರಾಯಲ್ಸ್ ಐಪಿಎಲ್ನಲ್ಲಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಈ ವೇಳೆ ತಂಡದ ನಾಯಕನಾಗಿ ಶೇನ್ ವಾರ್ನ್ ಇದ್ದರು. 1992ರಿಂದ 2007ರವರೆಗೆ ಕ್ರಿಕೆಟ್ ಆಡಿರುವ ವಾರ್ನ್ 145 ಟೆಸ್ಟ್ನಿಂದ 708 ವಿಕೆಟ್, 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಪಡೆದುಕೊಂಡಿದ್ದಾರೆ.