ಮುಂಬೈ: ಮಿಚೆಲ್ ಮಾರ್ಷ್ ಆಕರ್ಷಕ ಅರ್ಧಶತಕ ಹಾಗೂ ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಪಂಜಾಬ್ ವಿರುದ್ಧ 17ರನ್ಗಳ ಅಂತರದ ಗೆಲುವಿನ ನಗೆ ಬೀರಿರುವ ಡೆಲ್ಲಿ ಕ್ಯಾಪಿಟಲ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಮಹತ್ವದ ಪಂದ್ಯದಲ್ಲಿ ಸೋಲು ಕಂಡಿರುವ ಮಯಾಂಕ್ ಅಗರವಾಲ್ ಪಡೆ ಐಪಿಎಲ್ನಲ್ಲಿ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ.
-
That's that from Match 64@DelhiCapitals win by 17 runs and add two crucial points to their tally.
— IndianPremierLeague (@IPL) May 16, 2022 " class="align-text-top noRightClick twitterSection" data="
Scorecard - https://t.co/twuPEouUzK #PBKSvDC #TATAIPL pic.twitter.com/Szbwuradwo
">That's that from Match 64@DelhiCapitals win by 17 runs and add two crucial points to their tally.
— IndianPremierLeague (@IPL) May 16, 2022
Scorecard - https://t.co/twuPEouUzK #PBKSvDC #TATAIPL pic.twitter.com/SzbwuradwoThat's that from Match 64@DelhiCapitals win by 17 runs and add two crucial points to their tally.
— IndianPremierLeague (@IPL) May 16, 2022
Scorecard - https://t.co/twuPEouUzK #PBKSvDC #TATAIPL pic.twitter.com/Szbwuradwo
ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಲಿವಿಂಗ್ಸ್ಟೋನ್ ಸ್ಪಿನ್ ಮೋಡಿ ನಡುವೆ ಕೂಡ ಮಿಚೆಲ್ ಮಾರ್ಷ್(63) ಅಮೋಘ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 159ರನ್ಗಳಿಕೆ ಮಾಡಿತು.
160ರನ್ಗುರಿ ಬೆನ್ನತ್ತಿದ ಪಂಜಾಬ್ ಆರಂಭ ಉತ್ತಮವಾಗಿತ್ತು. ಆದರೆ, 28ರನ್ಗಳಿಕೆ ಮಾಡಿದ್ದ ವೇಳೆ ಬೈರ್ಸ್ಟೋ ವಿಕೆಟ್ ಪತನಗೊಳ್ಳುತ್ತಿದ್ದಂತೆ ತಂಡದ ಪೆವಲಿಯನ್ ಪರೇಡ್ ಶುರುವಾಯಿತು. ರಾಜಪಕ್ಸೆ ಕೂಡ 4ರನ್ಗಳಿಸಿ ನಿರಾಸೆ ಮೂಡಿಸಿದರು. ಧವನ್ ಕೂಡ 19ರನ್ಗಳಿಸಿ ಔಟಾದರು.ಇದರ ಬೆನ್ನಲ್ಲೇ ಲಿವಿಂಗ್ಸ್ಟೋನ್(4), ಕ್ಯಾಪ್ಟನ್ ಅಗವಾಲ್(0), ಹರ್ಪ್ರಿತ್ ಬ್ರಾರ್(1) ರಿಷಿ ಧವನ್(4) ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ ಶರ್ಮಾ-ಚಹರ್: ಒಂದರ ಹಿಂದೆ ಮತ್ತೊಂದರಂತೆ ವಿಕೆಟ್ ಕಳೆದುಕೊಳ್ಳುತ್ತಿದ್ದ ವೇಳೆ ಮಧ್ಯಮ ಕ್ರಮಾಂಕದಲ್ಲಿ ಒಂದಾದ ಜಿತೇಶ್ ಶರ್ಮಾ(44) ಹಾಗೂ ರಾಹುಲ್ ಚಹರ್(25) ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ, 44ರನ್ಗಳಿಸಿದ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶರ್ಮಾ ವಿಕೆಟ್ ಒಪ್ಪಿಸುತ್ತಿದ್ದಂತೆ ತಂಡದ ಗೆಲುವಿನ ಆಸೆ ಕಮರಿತು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 9ವಿಕೆಟ್ ಕಳೆದುಕೊಂಡು 142ರನ್ ಮಾತ್ರ ಗಳಿಸಲು ಶಕ್ತವಾಯಿತು.
ಡೆಲ್ಲಿ ಪರ ಮಿಂಚಿದ ಶಾರ್ದೂಲ್ ಠಾಕೂರ್ 4ವಿಕೆಟ್, ಅಕ್ಸರ್, ಕುಲ್ದೀಪ್ ತಲಾ 2ವಿಕೆಟ್ ಪಡೆದರೆ, ನೋರ್ಟ್ಜೆ ತಲಾ 1ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ ಸರ್ಫರಾಜ್ ಖಾನ್(32), ಮಿಚೆಲ್ ಮಾರ್ಷ್(63) ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ಗೆಲುವಿಗೆ 160 ರನ್ಗಳ ಗುರಿ ನೀಡಿತ್ತು. ಡಿವೈ ಪಾಟೀಲ್ ಮೈದಾನದಲ್ಲಿ ಆರಂಭಗೊಂಡಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಆರಂಭದಲ್ಲೇ ವಾರ್ನರ್(0) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ಸರ್ಫರಾಜ್(32ರನ್) ಮಿಚೆಲ್ ಮಾರ್ಷ್(63) ಉತ್ತಮ ಜೊತೆಯಾಟವಾಡಿದರು. ಸರ್ಫರಾಜ್ ವಿಕೆಟ್ ಪತದನ ಬಳಿಕ ಬಂದ ಲಲಿತ್ ಯಾದವ್(24) ತಂಡಕ್ಕೆ ಆಸರೆಯಾದರು.
ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್ ಪಂತ್(7), ಪೊವೆಲ್(2), ಠಾಕೂರ್(3) ನಿರಾಸೆ ಮೂಡಿಸಿದರು. ಅಕ್ಸರ್ ಪಟೇಲ್ 17ರನ್ಗಳಿಸಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 159ರನ್ಗಳಿಕೆ ಮಾಡಿತು. ಪಂಜಾಬ್ ಪರ ಲಿವಿಂಗ್ಸ್ಟೋನ್, ಅರ್ಷದೀಪ್ ಸಿಂಗ್ ತಲಾ 3 ವಿಕೆಟ್ ಪಡೆದರೆ, ರಬಾಡಾ 1 ವಿಕೆಟ್ ಕಿತ್ತರು.
ಇಂಡಿಯನ್ ಪ್ರೀಮಿಯರ್ ಲೀಗ್ನ 64ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮಯಾಂಕ್ ಅಗರವಾಲ್ ಪಡೆ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಇಂದಿನ ಪಂದ್ಯ ಎರಡು ತಂಡಗಳಿಗೆ ಮಹತ್ವದಾಗಿತ್ತು.
ಪಂಜಾಬ್ ಕಿಂಗ್ಸ್ : ಬೈರ್ಸ್ಟೋ, ಶಿಖರ್ ಧವನ್, ರಾಜಪಕ್ಸೆ, ಲಿವಿಂಗ್ಸ್ಟೋನ್, ಮಯಾಂಕ್ ಅಗರವಾಲ್(ಕ್ಯಾಪ್ಟನ್), ಜಿತೇಶ್ ಶರ್ಮಾ(ವಿ,ಕೀ), ಹರ್ಮಪ್ರಿತ್ ಬ್ರಾರ್, ರಿಷಿ ಧವನ್, ಕಾಗಿಸೋ ರಬಾಡಾ, ರಾಹುಲ್ ಚಹರ್, ಅರ್ಷದೀಪ್ ಸಿಂಗ್
ಡೆಲ್ಲಿ ಕ್ಯಾಪಿಟಲ್ಸ್ : ಡೇವಿಡ್ ವಾರ್ನರ್, ಸರ್ಫರಾಜ್ ಖಾನ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ಕ್ಯಾಪ್ಟನ್, ವಿ,ಕೀ), ಲಲಿತ್ ಯಾದವ್, ರೊಮನ್ ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಸಿಂಗ್, ಖಲೀಲ್ ಅಹ್ಮದ್, ನೊರ್ಟ್ಜೆ
-
#PBKS have won the toss and they will bowl first against #DelhiCapitals
— IndianPremierLeague (@IPL) May 16, 2022 " class="align-text-top noRightClick twitterSection" data="
Live - https://t.co/twuPEouUzK #PBKSvDC #TATAIPL pic.twitter.com/MQSAmcr4o0
">#PBKS have won the toss and they will bowl first against #DelhiCapitals
— IndianPremierLeague (@IPL) May 16, 2022
Live - https://t.co/twuPEouUzK #PBKSvDC #TATAIPL pic.twitter.com/MQSAmcr4o0#PBKS have won the toss and they will bowl first against #DelhiCapitals
— IndianPremierLeague (@IPL) May 16, 2022
Live - https://t.co/twuPEouUzK #PBKSvDC #TATAIPL pic.twitter.com/MQSAmcr4o0
ಇಂದು ಮುಖಾಮುಖಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳ ಪೈಕಿ 6ರಲ್ಲಿ ಜಯ, 6ರಲ್ಲಿ ಸೋಲು ಕಂಡು 12 ಪಾಯಿಂಟ್ಗಳೊಂದಿಗೆ 5ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಕೂಡ ಇಷ್ಟೇ ಪಂದ್ಯಗಳಿಂದ 12 ಪಾಯಿಂಟ್ಗಳಿಸಿ, 7ನೇ ಸ್ಥಾನದಲ್ಲಿದೆ. ರನ್ರೇಟ್ ಚೆನ್ನಾಗಿರುವ ಕಾರಣ ಇಂದಿನ ಪಂದ್ಯದಲ್ಲಿ ಜಯ ದಾಖಲಿಸುವ ತಂಡ ನೇರವಾಗಿ 4ನೇ ಸ್ಥಾನಕ್ಕೆ ಜಿಗಿಯಲಿದೆ. ಸೋಲುವ ತಂಡ ಪ್ಲೇ-ಆಫ್ ರೇಸ್ನಿಂದ ಹೊರಬೀಳಲಿದೆ. ಇದರ ಜೊತೆಗೆ ಆರ್ಸಿಬಿ 5ನೇ ಸ್ಥಾನಕ್ಕೆ ಕುಸಿತ ಕಾಣಲಿದೆ.
ಐಪಿಎಲ್ನಲ್ಲಿ ಉಭಯ ತಂಡಗಳು ಈವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಪಂಜಾಬ್ 14 ಹಾಗೂ ಡೆಲ್ಲಿ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. 2018ರಿಂದ ಉಭಯ ತಂಡಗಳು 9 ಪಂದ್ಯಗಳಲ್ಲಿ ಎದುರಾಗಿವೆ. ಈ ಪೈಕಿ ಪಂಜಾಬ್ 5ರಲ್ಲಿ ಗೆದ್ದಿದೆ. ಈ ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡ ಆರ್ಸಿಬಿ ವಿರುದ್ಧ ಗೆಲುವಿನ ನಗೆ ಬೀರಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದೆ.