ETV Bharat / sports

ಮಹತ್ವದ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದ ಕೋಲ್ಕತ್ತಾ... ಪ್ಲೇ-ಆಫ್​ ಆಸೆ ಜೀವಂತ - ಮುಂಬೈ ವರ್ಸಸ್ ಕೋಲ್ಕತ್ತಾ

ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಮಹತ್ವ ಪಡೆದುಕೊಂಡಿದ್ದ ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್ 52ರನ್​​ಗಳ ಗೆಲುವಿನ ನಗೆ ಬೀರಿದೆ.

Kolkata Knight Riders beat Mumbai Indians

author img

By

Published : May 9, 2022, 11:07 PM IST

ಮುಂಬೈ: ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 52ರನ್​​ಗಳ ಅಂತರದ​​ ಗೆಲುವು ದಾಖಲು ಮಾಡುವ ಮೂಲಕ ಪ್ಲೇ-ಆಫ್​ ರೇಸ್​ನಲ್ಲಿ ಜೀವಂತವಾಗಿ ಉಳಿದುಕೊಂಡಿದೆ. ಇಂದಿನ ಪಂದ್ಯದಲ್ಲಿ ರೋಹಿತ್​ ಬಳಗ ಮತ್ತೊಂದು ಸೋಲಿನ ರುಚಿ ಕಂಡಿದೆ.

ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್​ ರೈಡರ್ಸ್​​ ವೆಂಕಟೇಶ್​ ಅಯ್ಯರ್​ 43ರನ್​, ನಿತೀಶ್ ರಾಣಾ 43ರನ್​ಗಳ ನೆರವಿನಿಂದ ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 165ರನ್​​ಗಳಿಕೆ ಮಾಡಿ, ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಮುಂಬೈ ಪರ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ 4 ಓವರ್​ಗಳಲ್ಲಿ ಕೇವಲ 10ರನ್​ ನೀಡಿ, ಐದು ವಿಕೆಟ್ ಪಡೆದು ಮಿಂಚಿದರು.

ಐದು ವಿಕೆಟ್ ಪಡೆದು ಮಿಂಚಿದ ಜಸ್ಪ್ರೀತ್ ಬುಮ್ರಾ

166ರನ್​ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತಕ್ಕೊಳಗಾಯಿತು. ತಂಡದ ಪರ ಇನ್ನಿಂಗ್ಸ್​ ಆರಂಭಿಸಲು ಕಣಕ್ಕಿಳಿದ ರೋಹಿತ್ ಶರ್ಮಾ(2ರನ್) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಬಂದ ತಿಲಕ್​ ವರ್ಮಾ ಕೂಡ ಕೇವಲ 6ರನ್​​ಗಳಿಸಿ ಔಟಾದರು. ಕೊನೆಯದಾಗಿ ತಂಡ 17.3 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 113ರನ್​ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.

ತಂಡದ ಪರ ಇಶಾನ್ ಕಿಶನ್​ 51ರನ್​ಗಳಿಕೆ ಮಾಡಿ, ಉತ್ತಮವಾಗಿ ಆಡ್ತಿದ್ದ ವೇಳೆ ಕಮ್ಮಿನ್ಸ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ರಮಣದೀಪ್​​ ಸಿಂಗ್​ 12ರನ್​, ಟಿಮ್ ಡೇವಿಡ್​​ 13ರನ್​​, ಸ್ಯಾಮ್ಸ್​​​ 1ರನ್​​ಗಳಿಕೆ ಮಾಡಿ ಔಟಾದರು. ಗೆಲುವಿನ ಭರವಸೆ ಮೂಡಿಸಿದ್ದ ಪೋಲಾರ್ಡ್ ಕೂಡ 14ರನ್​​ಗಳಿಕೆ ಮಾಡಿ ಔಟಾದರು.

ಕೋಲ್ಕತ್ತಾ ಪರ ಕಮ್ಮಿನ್ಸ್ 3 ವಿಕೆಟ್​, ರಸೆಲ್ 2 ವಿಕೆಟ್ ಪಡೆದರೆ, ಸೌಥಿ, ಜಾಕ್ಸನ್​​, ವರುಣ್​ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.