ETV Bharat / sports

ಕಿಂಗ್ಸ್​ ನಾಯಕನ ಆಟಕ್ಕೆ ಮಣಿದ ಕೆಕೆಆರ್‌; ಪಂಜಾಬ್‌ ಪ್ಲೇ ಆಫ್‌ ಆಸೆ ಜೀವಂತ! - ಪಂಜಾಬ್‌ ಕಿಂಗ್ಸ್‌

ನಾಯಕ ಕೆ.ಎಲ್‌.ರಾಹುಲ್‌ ತಾಳ್ಮೆಯ ಅರ್ಧ ಶತಕದ ನೆರವಿನಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.

IPL 2021: Punjab Kings won by 5 wkts
ನಾಯಕನ ಆಟಕ್ಕೆ ಒಲಿದ ಗೆಲುವು; ನಿರ್ಣಾಯಕ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಗೆದ್ದ ಪಂಜಾಬ್‌
author img

By

Published : Oct 2, 2021, 12:27 AM IST

Updated : Oct 2, 2021, 6:21 AM IST

ದುಬೈ: ಕೆಕೆಆರ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ 5 ವಿಕೆಟ್‌ಗಳ ರೋಚಕ ಗೆಲವು ಸಾಧಿಸಿದೆ. ನಾಯಕ ಕೆ.ಎಲ್‌ ರಾಹುಲ್‌ ಅರ್ಧ ಶತಕದ ನೆರವಿನಿಂದ 19.3 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಕೋಲ್ಕತ್ತ ನೀಡಿದ್ದ 166ರನ್‌ಗಳ ಗುರಿ ತಲುಪಿತು.

ಆರಂಭಿಕ ರಾಹುಲ್‌ 55 ಎಸೆತಗಳಿಂದ 4 ಬೌಂಡರಿ, 2 ಸಿಕ್ಸರ್‌ ಸಹಿತ 67ರನ್‌ ಗಳಿಸಿ ಕೊನೆಯ ಓವರ್‌ನಲ್ಲಿ ವೆಂಕಟೇಶ್‌ ಅಯ್ಯರ್‌ಗೆ ವಿಕೆಟ್‌ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ, ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ 27 ಎಸೆತಗಳಲ್ಲಿ 3 ಬೌಂಡರಿ, 3 ಭರ್ಜರಿ ಸಿಕ್ಸರ್‌ ಸಹಿತ 40 ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮುರಿಯದೆ ಮೊದಲ ವಿಕೆಟ್‌ಗೆ 70 ರನ್‌ ಗಳಿಸಿತು.

ನಂತರ ಬಂದ ಪೂರನ್‌ 12, ಏಡನ್ ಮಾರ್ಕ್ರಮ್ 18, ದೀಪಕ್‌ ಹೂಡ 3ರನ್‌ ಗಳಿಸಿದರು. ಶಾರೂಕ್‌ ಖಾನ್‌ ಔಟಾಗದೆ 9 ಎಸೆತಗಳಿಂದ 1 ಬೌಂಡರಿ 2 ಸಿಕ್ಸರ್‌ ಸಹಿತಿ 22 ರನ್‌ಗಳೊಂದಿಗೆ ಕೊನೆಯಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೆಕೆಆರ್‌ ಪರ ವರುಣ್‌ ಚಕ್ರವರ್ತಿ 2 ವಿಕೆಟ್‌ ಗಳಿಸಿದರು. ಶಿವಂ ಮಾವಿ, ಸುನೀಲ್‌ ನರೇನ್‌, ವೆಂಕಟೇಶ್‌ ಅಯ್ಯರ್‌ ತಲಾ 1 ವಿಕೆಟ್‌ ಪಡೆದರು. ಮಾರ್ಗನ್‌ ಪಡೆ ವಿರುದ್ಧದ ಗೆಲುವಿನ ಬಳಿಕ ಪಂಜಾಬ್‌ 12 ಪಂದ್ಯಗಳಲ್ಲಿ 5ರಲ್ಲಿ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಇದೆ.

ಮಿಂಚಿದ ವೆಂಕಟೇಶ್‌ ಅಯ್ಯರ್‌

ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್‌ ಆರಂಭಿಕ ಆಘಾತ ಅನುಭವಿಸಿತು. ಕೇವಲ 18 ರನ್‌ ಗಳಿಸುವಷ್ಟರಲ್ಲಿ ಶುಭ್ಮನ್‌ ಗಿಲ್‌(7) ವಿಕೆಟ್‌ ಕಳೆದುಕೊಂಡಿತು. ಮತ್ತೊಂದು ಬದಿಯಲ್ಲಿದ್ದ ವೆಂಕಟೇಶ್‌ ಅಯ್ಯರ್‌ ಉತ್ತಮ ಬ್ಯಾಟಿಂಗ್‌ ಮೂಲಕ ಆಕರ್ಷಕ ಅರ್ಧ ಶತಕ ಸಿಡಿಸಿ ತಂಡದ ಮೊತ್ತ 150ರ ಗಡಿ ದಾಡುವಂತೆ ಮಾಡಿದರು.

ಅಯ್ಯರ್‌ 49 ಎಸೆತಗಳಿಂದ 9 ಬೌಂಡರಿ, 1 ಸಿಕ್ಸರ್‌ ಸೇರಿ 67ನ್‌ ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ದೀಪ್‌ ಹೂಡಗೆ ಕ್ಯಾಚಿತ್ತು ನಿರ್ಮಿಸಿದರು. ಅಯ್ಯರ್‌ ಜೊತೆಗೂಡಿದ್ದ ತ್ರಿಪಾಠಿ 26 ಎಸೆತಗಳಿಂದ 3 ಬೌಂಡರಿ 1 ಸಿಕ್ಸರ್‌ ನೊಂದಿಗೆ 34 ರನ್‌ಗಳಿಸಿದರು. ನಿತೀಶ್‌ ರಾಣಾ 18 ಎಸೆತಗಳಿಂದ 2 ಬೌಂಡರಿ, 2 ಸಿಕ್ಸರ್‌ ಒಳಗೊಂಡಂತೆ 31ನ್‌ ಸಿಡಿಸಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು.

ನಾಯಕ ಮಾರ್ಗನ್‌ 2, ದಿನೇಶ್‌ ಕಾರ್ತಿಕ್‌ 11, ಸೀಫರ್ಟ್ 2, ಸುನೀಲ್‌ ನರೇನ್‌ ಔಟಾಗದೆ 3 ರನ್‌ ಗಳಿಸಿದರು. ಆ ಮೂಲಕ ನಿಗದಿ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತು. ಪಂಜಾಬ್‌ ಪರ ಅರ್ಷದೀಪ್‌ ಸಿಂಗ್‌ 3 ವಿಕೆಟ್‌ ಪಡೆದರೆ, ರವಿ ಬಿಷ್ಣೋಯಿ 2 ಹಾಗೂ ಶಮಿ 1 ವಿಕೆಟ್‌ ಉರುಳಿಸಿದರು.

Last Updated : Oct 2, 2021, 6:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.