ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಯ 11ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ಇಂದು ಮುಖಾಮುಖಿಯಾಗಲಿವೆ. ಸತತ ಸೋಲಿನಿಂದ ಕಂಗೆಟ್ಟಿರುವ ಹೈದರಾಬಾದ್ ಇಂದು ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದೆ.
-
𝗠𝗔𝗧𝗖𝗛𝗗𝗔𝗬 💪#MIvSRH #OrangeOrNothing #OrangeArmy #IPL2021 pic.twitter.com/um4MxtGsF3
— SunRisers Hyderabad (@SunRisers) April 17, 2021 " class="align-text-top noRightClick twitterSection" data="
">𝗠𝗔𝗧𝗖𝗛𝗗𝗔𝗬 💪#MIvSRH #OrangeOrNothing #OrangeArmy #IPL2021 pic.twitter.com/um4MxtGsF3
— SunRisers Hyderabad (@SunRisers) April 17, 2021𝗠𝗔𝗧𝗖𝗛𝗗𝗔𝗬 💪#MIvSRH #OrangeOrNothing #OrangeArmy #IPL2021 pic.twitter.com/um4MxtGsF3
— SunRisers Hyderabad (@SunRisers) April 17, 2021
ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಸತತ ಸೋಲುಂಡ ಡೇವಿಡ್ ವಾರ್ನರ್ ನಾಯಕತ್ವ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡ ಇಂದು ಸಂಜೆ ನಡೆಯಲಿರುವ ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಚಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸವಾರಿ ಮಾಡಲೇಬೇಕಾದ ಒತ್ತಡದಲ್ಲಿದೆ.
ಇದನ್ನೂ ಓದಿ: ಹೈದರಾಬಾದ್ಗೆ ಮಾಡು ಇಲ್ಲವೆ ಮಡಿ ಪಂದ್ಯ... ವಾರ್ನರ್ ಪಡೆಗೆ ಬಲಿಷ್ಠ ಮುಂಬೈ ಸವಾಲು
ಇನ್ನು ಮುಂಬೈ ತಂಡ ಇಲ್ಲಿಯವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದು ಖಾತೆ ತೆರೆದರೆ ಹೈದರಾಬಾದ್ ಆಡಿದ ಎರಡೂ ಪಂದ್ಯದಲ್ಲಿಯೂ ಸೊನ್ನೆ ಸುತ್ತಿದೆ. ಹಾಗಾಗಿ ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಗೆ ತಂದಿಟ್ಟುಕೊಂಡಿದೆ. ಆದರೆ, ರೋಹಿತ್ ಬಳಗ ಇದಕ್ಕೆ ಅವಕಾಶ ಮಾಡಿಕೊತ್ತಾ ಅನ್ನೋದನ್ನು ಕಾದುನೋಡಬೇಕು.
-
Keep the 🔊 on 💯 for this one Paltan! 🔥#OneFamily #MumbaiIndians #MI #KhelTakaTak #IPL2021 #MIvSRH pic.twitter.com/p8jwth4OBX
— Mumbai Indians (@mipaltan) April 16, 2021 " class="align-text-top noRightClick twitterSection" data="
">Keep the 🔊 on 💯 for this one Paltan! 🔥#OneFamily #MumbaiIndians #MI #KhelTakaTak #IPL2021 #MIvSRH pic.twitter.com/p8jwth4OBX
— Mumbai Indians (@mipaltan) April 16, 2021Keep the 🔊 on 💯 for this one Paltan! 🔥#OneFamily #MumbaiIndians #MI #KhelTakaTak #IPL2021 #MIvSRH pic.twitter.com/p8jwth4OBX
— Mumbai Indians (@mipaltan) April 16, 2021
ಇನ್ನು ನ್ಯೂಜಿಲ್ಯಾಂಡ್ ಸ್ಟಾರ್ ಬ್ಯಾಟ್ಸ್ಮನ್ ಕೇನ್ ವಿಲಿಯಮ್ಸನ್ ಫಿಟ್ನೆಸ್ ಸಮಸ್ಯೆಯಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆರಂಭಿಕ ಎರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದು, ಇಂದಿನ ಜಿದ್ದಾಜಿದ್ದಿ ಪಂದ್ಯದ ಕಾಳಗಕ್ಕೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಾಗಿ ಸಹಜವಾಗಿಯೇ ರೋಹಿತ್ ಬಳಗ ಇವರ ಮೇಲೆ ಕಣ್ಣಿಟ್ಟಿದೆ.
ತಂಡದ ಆಟಗಾರರು:
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಆಡಂ ಮಿಲ್ನೆ, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡೂಲ್ಕರ್, ಕ್ರಿಸ್ ಲಿನ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ (ವಿಕೆಟ್ ಕೀಪರ್), ಜೇಮ್ಸ್ ನೀಶಂ, ಜಸ್ಪ್ರೀತ್ ಬುಮ್ರಾ, ಜಯಂತ್ ಪೋಲ್ಡಾರ್ , ಕ್ರುನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಮೊಹ್ಸಿನ್ ಖಾನ್, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಹುಲ್ ಚಹರ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ಯುಧ್ವೀರ್ ಸಿಂಗ್.
ಸನ್‌ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಅಭಿಷೇಕ್ ಶರ್ಮಾ, ಬೆಸಿಲ್ ಥಾಂಪಿ, ಭುವನೇಶ್ವರ್ ಕುಮಾರ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಸ್, ಶಲ್ವಾಡ್ , ಟಿ ನಟರಾಜನ್, ವಿಜಯ್ ಶಂಕರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಜೇಸನ್ ರಾಯ್, ಜೇಸನ್ ಹೋಲ್ಡರ್, ಪ್ರಿಯಮ್ ಗರ್ಗ್, ವಿರಾಟ್ ಸಿಂಗ್, ಕೇದಾರ್ ಜಾಧವ್, ಮುಜೀಬ್ ಉರ್ ರೆಹಮಾನ್, ಜೆ ಸುಚಿತ್.