ಹೈದರಾಬಾದ್: ಕಳೆದ ವರ್ಷ ಐಪಿಎಲ್ 13ನೇ ಆವೃತ್ತಿ ಯುಎಇಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಇದೀಗ ಭಾರತದಲ್ಲಿ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಸಲು ಪೂರ್ವ ತಯಾರಿ ನಡೆಸಲಾಗುತ್ತಿದೆ.
ಯಾವ ಸ್ಥಳಗಳಲ್ಲಿ ಪಂದ್ಯಗಳನ್ನ ನಡೆಸಬೇಕುನ್ನುವ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿ ನಿರ್ಧರಿಸಿಲ್ಲ. ಮೊದಲು ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ, ನಂತರ ಯಾವ ನಗರಗಳಿಗೆ ಐಪಿಎಲ್‌ಗೆ ಆತಿಥ್ಯ ವಹಿಸಬೇಕೆಂಬುದನ್ನ ನಿರ್ಧರಿಸಲಿದೆ.
ಈ ವರ್ಷ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡುವ ಮೊದಲು ಬಿಸಿಸಿಐ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಲಿದೆ ಎನ್ನಲಾಗುತ್ತಿದೆ.
"ಪಂಜಾಬ್ ಅಥವಾ ಹೈದರಾಬಾದ್ ನಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತದೆ ಎನ್ನುವುದು ಎಲ್ಲಾ ಉಹಾಪೋಹ ಮಾತ್ರ. ನಾವು ಶೀಘ್ರದಲ್ಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ವರ್ಷ ಐಪಿಎಲ್ಅನ್ನು ಎಲ್ಲಿ, ಹೇಗೆ ನಡೆಸಬೇಕೆಂಬುದನ್ನ ನಾವು ನಿರ್ಧರಿಸುತ್ತೇವೆ. ಬಿಸಿಸಿಐ ಪಂದ್ಯಗಳನ್ನು ಆಯೋಜಿಸಲು ಅನುಮತಿಸುವ ಮೊದಲು ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆಯಲಿದೆ "ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಓದಿ : ಮೈದಾನದಲ್ಲಿ ಜಾಗಿಂಗ್ ಆರಂಭಿಸಿದ ಜಡೇಜಾ.. ಏಕದಿನ, ಟಿ-20 ಸರಣಿಗೆ ಕಮ್ಬ್ಯಾಕ್?
"ಪಂಜಾಬ್ ನಲ್ಲಿ ಚುನಾವಣೆ ಆರಂಭವಾಗಲಿದ್ದು, ಐಪಿಎಲ್ ಪಂದ್ಯಗಳನ್ನು ನಡೆಸುವುದರಿಂದ ಯಾವುದೇ ಅನಗತ್ಯ ಘಟನೆಗಳು ನಡೆಯುವುದಿಲ್ಲ ಎಂದು ಅಧಿಕಾರಿಗಳು ಬಿಸಿಸಿಐಗೆ ಖಚಿತವಾದ ಭರವಸೆ ನೀಡಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
"ಮುಂಬೈ ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಇರುವ ಕಾರಣ, ಅದು ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಅಲ್ಲಿನ ಸರ್ಕಾರದ ಜೊತೆ ಚರ್ಚಿಸಿ ಮುಂದೆ ನಿರ್ಧರಿಸಲಾಗುತ್ತದೆ ಎಂದು ತಿಳಿದುಬಂದಿದೆ.