ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಬೈರ್ಸ್ಟೋ 66 ರನ್ ಹಾಗೂ ಲಿವಿಂಗ್ಸ್ಟೋನ್ 70 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209ರನ್ ಗಳಿಸಿತು. ಪಂಜಾಬ್ ನೀಡಿದ ಮೊತ್ತವನ್ನು ಬೆನ್ನತ್ತುವ ಭರದಲ್ಲಿ ಆರ್ಸಿಬಿ ತಂಡ ಎಡವಿದ್ದು, ಕೇವಲ 155 ರನ್ ಗಳಿಸಿ ಸೋಲನ್ನೊಪ್ಪಿಕೊಂಡಿತು.
ಪಂಜಾಬ್ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋ-ಶಿಖರ್ ಧವನ್ ಮೊದಲ ವಿಕೆಟ್ನಷ್ಟಕ್ಕೆ 60ರನ್ಗಳಿಕೆ ಮಾಡಿತು. ಆರ್ಸಿಬಿ ಬೌಲರ್ಗಳನ್ನ ಯದ್ವಾತದ್ವಾ ದಂಡಿಸಿದ ಬೈರ್ಸ್ಟೋ ತಾವು ಎದುರಿಸಿದ 29 ಎಸೆತಗಳಲ್ಲಿ 7 ಸಿಕ್ಸರ್, 4 ಬೌಂಡರಿ ಸಮೇತ 66 ರನ್ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡಿದ ಧವನ್ ಕೂಡ 15 ಎಸೆತಗಳಲ್ಲಿ 21ರನ್ಗಳಿಕೆ ಮಾಡಿ ಮ್ಯಾಕ್ಸವೆಲ್ ಓವರ್ನಲ್ಲಿ ಔಟಾದರು. ಇದರ ಬೆನ್ನಲ್ಲೇ ಬಂದ ರಾಜಪಕ್ಸೆ 1 ರನ್ಗಳಿಸಿ ಹಸರಂಗ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಆರ್ಸಿಬಿ ಬೌಲರ್ಗಳ ಮೇಲೆ ದಾಳಿ ನಡೆಸಿದ ಮಧ್ಯಮ ಕ್ರಮಾಂಕದ ಲಿವಿಂಗ್ಸ್ಟೋನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೈರ್ ಸ್ಟೋ 66ರನ್ಗಳಿಕೆ ಮಾಡಿದರೆ, ಲಿವಿಂಗ್ಸ್ಟೋನ್ 42 ಎಸೆತಗಳಲ್ಲಿ 4 ಸಿಕ್ಸರ್, 5 ಬೌಂಡರಿ ಸಮೇತ 70 ರನ್ಗಳಿಸಿದರು. ಬಳಿಕ ಬಂದ ಆಟಗಾರರು ತಂಡದ ಪರ ಕ್ಯಾಪ್ಟನ್ ಮಯಾಂಕ್ 19 ರನ್, ಶರ್ಮಾ 9 ರನ್, ಬ್ರಾರ್ 7 ರನ್, ರಿಷಿ ಧವನ್ 7 ರನ್ಗಳಿಸಿದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 209ರನ್ಗಳಿಕೆ ಮಾಡಿತು. ಆರ್ಸಿಬಿ ಪರ ಹರ್ಷಲ್ ಪಟೇಲ್ 4 ವಿಕೆಟ್, ಹಸರಂಗ ತಲಾ 2 ವಿಕೆಟ್ ಪಡೆದರೆ, ಮ್ಯಾಕ್ಸವೆಲ್, ಅಹ್ಮದ್ ತಲಾ 1 ವಿಕೆಟ್ ಕಿತ್ತರು.
ಓದಿ: U19 ಮಾಜಿ ಬ್ಯಾಟರ್ ಬಗ್ಗೆ ಗುಣಗಾನ.. ಆದಷ್ಟು ಬೇಗ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದ ರೋಹಿತ್
ಆರ್ಸಿಬಿ ಇನ್ನಿಂಗ್ಸ್: ಪಂಜಾಬ್ ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಆರ್ಸಿಬಿಗೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕರಾದ ವಿರಾಟ್ ಕೊಹ್ಲಿ 20 ರನ್, ನಾಯಕ ಫಾಫ್ ಡು ಪ್ಲೆಸಿಸ್ 10 ರನ್ ಮತ್ತು ಮಹಿಪಾಲ್ 6 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಪವರ್ ಪ್ಲೇನಲ್ಲೇ ಆರ್ಸಿಬಿ 40 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಬಂದ ಮ್ಯಾಕ್ಸ್ವೆಲ್ ಅವರು ರಜತ್ ಪಟಿದಾರ್ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಇಬ್ಬರು ಆಟಗಾರ ಅಬ್ಬರಿಸಿ 64 ರನ್ಗಳ ಜೊತೆಯಾಟವಾಡಿದರು. ಆದ್ರೆ ರನ್ ಗಳಿಸುವ ಭರದಲ್ಲಿ ಪಟಿದಾರ್ 26ಕ್ಕೆ ಔಟಾದರು. ಇದರ ಬೆನ್ನಲ್ಲೇ 35 ರನ್ ಗಳಿಸಿ ಅಬ್ಬರಿಸುತ್ತಿದ್ದ ಮ್ಯಾಕ್ಸ್ವೆಲ್ ಸಹ ಪೆವಿಲಿಯನ್ ದಾರಿ ಹಿಡಿದರು.
ಮ್ಯಾಕ್ಸ್ವೆಲ್ ಔಟಾದ ಬಳಿಕ ಉಳಿದ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ದಿನೇಶ್ ಕಾರ್ತಿಕ್ 11 ರನ್, ಅಹ್ಮದ್ 9 ರನ್, ವನಿಂದು ಹಸರಂಗ 1 ರನ್, ಹರ್ಷಲ್ ಪಟೇಲ್ 11 ರನ್, ಮೊಹಮ್ಮದ್ ಸಿರಾಜ್ 9 ಮತ್ತು ಜೋಸ್ ಹ್ಯಾಜಲ್ವುಡ್ 7 ರನ್ ಗಳಿಸಿ ಅಜಯರಾಗಿ ಉಳಿದರು. ಒಟ್ಟಿನಲ್ಲಿ ಆರ್ಸಿಬಿ ತಂಡ ನಿಗದಿತ 20 ಓವರ್ಗಳಿಗೆ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಲು ಮಾತ್ರ ಶಸಕ್ತವಾಯಿತು.
155 ರನ್ಗಳನ್ನು ಕಲೆ ಹಾಕುವ ಮೂಲಕ ಆರ್ಸಿಬಿ ತಂಡ ಪಂಜಾಬ್ ವಿರುದ್ಧ 54 ರನ್ಗಳ ಹೀನಾಯ ಸೋಲು ಕಂಡಿತು. ಪಂಜಾಬ್ ಪರ ಕಾಗಿಸೋ ರಬಾಡಾ 3 ವಿಕೆಟ್ ಪಡೆದ್ರೆ, ಧವನ್ ಮತ್ತು ರಾಹುಲ್ ಚಹರ್ ತಲಾ ಎರಡು ವಿಕೆಟ್ ಕಬಳಿಸಿದ್ರು. ಹರ್ಪ್ರಿತ್ ಬ್ರಾರ್ ಮತ್ತು ಹರ್ಷದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಆಸರೆಯಾದರು.
ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಪಂಜಾಬ್ ತಂಡಕ್ಕೆ ನಿನ್ನೆಯ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅತಿ ಅವಶ್ಯವಾಗಿತ್ತು. ಅದರಂತೆ ತಂಡ 54 ರನ್ಗಳಿಂದ ಆರ್ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಪ್ಲೇ ಆಫ್ ಕನಸು ಇನ್ನು ಜೀವಂತವಾಗಿದೆ. ಆರ್ಸಿಬಿಗೂ ಪ್ಲೇ ಆಫ್ ಕನಸು ಜೀವಂತವಾಗಿದ್ದು, ಬಲಿಷ್ಠ ಲಖನೌ ತಂದ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಎದುರಾಗಿದ್ದ ಈ ಉಭಯ ತಂಡಗಳು ಪ್ಲೇ-ಆಫ್ ರೇಸ್ನಲ್ಲಿದ್ದಾವೆ. ಈ ಎರಡು ತಂಡಗಳಿಗೂ ನಿನ್ನೆಯ ಪಂದ್ಯ ಅತಿ ಮುಖ್ಯವಾಗಿತ್ತು. ಐಪಿಎಲ್ನಲ್ಲಿ ಆರ್ಸಿಬಿ ಇಲ್ಲಿಯವರೆಗೆ 13 ಪಂದ್ಯಗಳ ಪೈಕಿ 7ರಲ್ಲಿ ಜಯ, 6ರಲ್ಲಿ ಸೋಲು ಕಂಡಿದ್ದು, 14 ಪಾಯಿಂಟ್ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆರ್ಸಿಬಿ ವಿರುದ್ಧ ಗೆದ್ದ ಪಂಜಾಬ್ ಸದ್ಯ 6ನೇ ಸ್ಥಾನಕ್ಕೇರಿದೆ.
ಇಂದು ಸಂಜೆ 7.30ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದ್ದು, ಹೈದರಾಬಾದ್ ತಂಡಕ್ಕೆ ಪ್ಲೇ ಆಫ್ ಕನಸು ಜೀವಂತವಾಗಿರಿಸಲು ಗೆಲುವು ಅವಶ್ಯಕವಾಗಿದೆ.