ETV Bharat / sports

ಎಂ.ಎಸ್.ಧೋನಿ 'ಮಾಸ್ಟರ್': ಸಿಎಸ್​ಕೆ ಬಗ್ಗೆ ನಮಗೆ ಗೌರವವಿದೆ

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ 'ಮಾಸ್ಟರ್'. ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖ್ಯ ಕೋಚ್ ಸೈಮನ್ ಕಾಟಿಚ್ ಹೇಳಿದ್ದಾರೆ.

ಎಂಎಸ್ ಧೋನಿ
ಎಂಎಸ್ ಧೋನಿ
author img

By

Published : Apr 25, 2021, 10:56 AM IST

ಮುಂಬೈ: ಇಂದು ವಾಖೆಂಡೆ ಕ್ರಿಡಾಂಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಬಿಗ್​ ಫೈಟ್​ ನಡೆಯಲಿದೆ.

"ಧೋನಿ ಒಬ್ಬ ಮಾಸ್ಟರ್. ಅವರು ಮೂರು ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಅದ್ಭುತ ಆರಂಭವನ್ನು ಹೊಂದಿದ್ದು, ಅವರಲ್ಲಿ ಉತ್ತಮ ಆಟಗಾರರಿದ್ದಾರೆ. ನಮಗೆ ಸಿಎಸ್​ಕೆ ತಂಡದ ಬಗ್ಗೆ ಅಪಾರ ಗೌರವವಿದೆ. ಇಂದು ಒಂದು ಉತ್ತಮ ಪಂದ್ಯ ನಡೆಯಲಿದೆ. ನಾವು ಈಗಾಗಲೇ ಮುಂಬೈನಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದೇವೆ. ಸಿಎಸ್​ಕೆ ಬಹಳ ಬಲಿಷ್ಠ ಬ್ಯಾಟಿಂಗ್ ಲೈನ್​​ ಅಪ್​ ಹೊಂದಿರುವ ತಂಡ. ಆದರೆ ನಮ್ಮ ಬೌಲಿಂಗ್ ಉತ್ತಮವಾಗಿದ್ದು, ಅವರನ್ನು ಕಟ್ಟಿಹಾಕುವ ಭರವಸೆ ಇದೆ" ಎಂದು ಕಾಟಿಚ್ ಹೇಳಿದ್ದಾರೆ.

"ವಾಂಖೆಡೆ ಪಿಚ್​ ಪರಿಸ್ಥಿತಿಗಳ ಮೇಲೆ ಪಂದ್ಯ ಅವಲಂಬಿತವಾಗಿರುತ್ತದೆ. ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಎಲ್ಲಾ ಪಂದ್ಯಗಳಲ್ಲಿ ಈ ಜೋಡಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ. ಆದ್ದರಿಂದ ನಾವು ಅವರನ್ನು ಬಹು ಬೇಗ ಬೇರ್ಪಡಿಸಲು ಕೆಲವು ಯೋಜನೆಗಳನ್ನು ರೂಪಿಸುತ್ತೇವೆ. ಅವರ ತಂಡದಾದ್ಯಂತ ಅನುಭವಿಗಳಿದ್ದಾರೆ. ಇಂದು ನಡೆಯುವ ಪಂದ್ಯ ಬಲು ರೋಚಕವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.

ಆರ್‌ಸಿಬಿ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್​​ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮತ್ತೊಂದೆಡೆ ಸಿಎಸ್​​ಕೆ 4ರಲ್ಲಿ ಮೂರು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ : ಆರ್​ಸಿಬಿ vs ಸಿಎಸ್​​ಕೆ: ವಾಂಖೆಡೆಯಲ್ಲಿಂದು ಕೊಹ್ಲಿ-ಧೋನಿ ಟೀಂ ಬಲ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.