ನವದೆಹಲಿ: ಐಪಿಎಲ್-13ರ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬಲಿಷ್ಟ ತಂಡ ಚೆನ್ನೈ ಸೂಪರ್ ಕಿಂಗ್ಸ್(CSK) ಈಗಾಗಲೇ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ. ಈ ಮೂಲಕ ಧೋನಿ ನಾಯಕತ್ವದಲ್ಲಿ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿದೆ.
ಈ ನಡುವೆ ಮುಂದಿನ ಐಪಿಎಲ್ನಲ್ಲಿ ಧೋನಿ ಆಡಲಿದ್ದಾರಾ? ಅಥವಾ ಈ ಟೂರ್ನಿ ಅವರ ಕೊನೆಯ ಐಪಿಎಲ್ ಆಗಲಿದ್ಯಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿತ್ತು. ಬಹುತೇಕ, ಈ ಬಾರಿಯ ಐಪಿಎಲ್ ಅವರ ಕೊನೆಯ ಟೂರ್ನಿಯಾಗಲಿದೆ ಎಂದೇ ಹೇಳಲಾಗಿತ್ತು. ಆದ್ರೆ ಇದಕ್ಕೆ ಉತ್ತರಿಸಿರುವ ಧೋನಿ, ತಮ್ಮ ವಿದಾಯದ ಟೂರ್ನಿಯನ್ನು ಚೆನ್ನೈನಲ್ಲೇ ಆಡುವ ಬಗ್ಗೆ ತಿಳಿಸಿದ್ದಾರೆ.
2022ರ ಸೀಸನ್ 14 ಭಾರತದಲ್ಲೇ ನಡೆಯುವ ಎಲ್ಲಾ ಸಾಧ್ಯತೆ ಇದ್ದು, 40 ವರ್ಷದ ಮಹೇಂದ್ರ ಸಿಂಗ್ ಧೋನಿ ತಮ್ಮ ಕೊನೆಯ ಟೂರ್ನಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಸಿಮೆಂಟ್ನ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಕೊನೆಯ ಪಂದ್ಯ ಚೆನ್ನೈನಲ್ಲೇ ಆಡುವ ಆಶಯವಿದೆ ಎಂದರು.
'ವಿದಾಯದ ವಿಷಯಕ್ಕೆ ಬಂದಾಗ, ನಾನು ಸಿಎಸ್ಕೆ ಪರವಾಗಿ ಆಡುವುದನ್ನು ನೋಡಬಹುದು. ಅದು ನನ್ನ ವಿದಾಯದ ಪಂದ್ಯ ಆಗಿರಬಹುದು. ನನಗೆ ವಿದಾಯ ಹೇಳಲು ನಿಮಗೂ ಅವಕಾಶ ಸಿಗಲಿದೆ' ಎಂದು ಅಭಿಮಾನಿಗಳ ಜೊತೆಗಿನ ವರ್ಚುವಲ್ ಸಂವಾದದಲ್ಲಿ ಧೋನಿ ಹೇಳಿದ್ದಾರೆ.
ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಕುರಿತು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ಆಗಸ್ಟ್ 15ಕ್ಕಿಂತ ಉತ್ತಮ ದಿನ ಇರಲಾರದು ಎಂದು ಉತ್ತರಿಸಿದರು.
ಇದನ್ನೂ ಓದಿ: ಮಿಥಾಲಿ ಉತ್ತರಾಧಿಕಾರಿ ಸ್ಥಾನಕ್ಕೆ ಸ್ಮೃತಿ ಮಂಧಾನ ಅತ್ಯುತ್ತಮ ಆಯ್ಕೆ: ಡಬ್ಲ್ಯೂವಿ ರಾಮನ್