ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇಂದು ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಆಡುವ ಮುನ್ನ ವಿಘ್ನ ಎದುರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ಬೌಲರ್‌ಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ತಂಡದ ಎಲ್ಲಾ ಆಟಗಾರರನ್ನು ಐಸೋಲೇಷನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಓರ್ವ ನೆಟ್ ಬೌಲರ್‌ಗೆ ಕೋವಿಡ್ ಕಂಡುಬಂದಿದ್ದು, ಉಳಿದ ಆಟಗಾರರನ್ನು ಕೊಠಡಿಗಳಲ್ಲಿ ಉಳಿಯಲು ತಿಳಿಸಲಾಗಿದೆ ಎಂದು ಐಪಿಎಲ್ ಮೂಲಗಳು ಮಾಹಿತಿ ನೀಡಿವೆ. ಎಲ್ಲಾ ಆಟಗಾರರು ತಮ್ಮ ತಮ್ಮ ಕೋಣೆಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಐಪಿಎಲ್ 2022ರ ಆವೃತ್ತಿಯಲ್ಲಿ ದೆಹಲಿ ತಂಡವು ಎರಡನೇ ಬಾರಿ ಈ ರೀತಿ ಐಸೋಲೇಷನ್ಗೆ ಒಳಗಾಗಿದೆ. ಇದಕ್ಕೂ ಮುನ್ನ ಫಿಸಿಯೋ ಪ್ಯಾಟ್ರಿಕ್ ಫಾರ್ಹಾರ್ಟ್, ಆಲ್-ರೌಂಡರ್ ಮಿಚೆಲ್ ಮಾರ್ಷ್, ಕೀಪರ್-ಬ್ಯಾಟರ್ ಟಿಮ್ ಸೀಫರ್ಟ್ ಮತ್ತು ಇತರ ಮೂವರು ಸೇರಿದಂತೆ ಫ್ರಾಂಚೈಸಿಯ ಆರು ಮಂದಿಗೆ ಕೋವಿಡ್ ಕಾಣಿಸಿಕೊಂಡಾಗ ಐಸೋಲೇಷನ್ಗೆ ಆಟಗಾರರನ್ನು ಒಳಪಡಿಸಲಾಗಿತ್ತು.
ಐಪಿಎಲ್ ಪ್ರೋಟೋಕಾಲ್ ಪ್ರಕಾರ, ದೆಹಲಿ ಕ್ಯಾಪಿಟಲ್ಸ್ ಮತ್ತೊಂದು ಸುತ್ತಿನ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು ಅಲ್ಲಿಯವರೆಗೆ ಎಲ್ಲಾ ಸದಸ್ಯರು ತಮ್ಮ ಕೊಠಡಿಗಳಲ್ಲಿ ಪ್ರತ್ಯೇಕವಾಗಿರಬೇಕಾಗುತ್ತದೆ.
ಇದನ್ನೂ ಓದಿ: ದಿಢೀರ್ ಸ್ವದೇಶಕ್ಕೆ ತೆರಳಿದ ರಾಜಸ್ಥಾನ್ ತಂಡದ ಶಿಮ್ರಾನ್ ಹೆಟ್ಮೆಯರ್: ಇಲ್ಲಿದೆ ಕಾರಣ..