ETV Bharat / sports

ಕೇನ್ ವಿಲಿಯಮ್ಸನ್ ಬದಲಿಗೆ ಗುಜರಾತ್​ ಸೇರಿದ ದಸುನ್ ಶನಕಾ

ಕಿವೀಸ್​ ಆಟಗಾರ ಕೇನ್ ವಿಲಿಯಮ್ಸನ್ ಗಾಯದಿಂದಾಗಿ 2023ರ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

Dasun Shanaka has replaced Kane Williamson in Gujarat Titans for IPL 2023
ಕೇನ್ ವಿಲಿಯಮ್ಸನ್ ಬದಲಿಗೆ ಗುಜರಾತ್​ ಸೇರಿದ ಶ್ರೀಲಂಕಾದ ದಸುನ್ ಶನಕಾ
author img

By

Published : Apr 4, 2023, 10:50 PM IST

ಮುಂಬೈ: ಗಾಯದ ಸಮಸ್ಯೆಯಿಂದಾಗಿ ಐಪಿಎಲ್ 2023 ರಿಂದ ಹೊರಗುಳಿದಿರುವ ಕೇನ್ ವಿಲಿಯಮ್ಸನ್ ಸ್ಥಾನವನ್ನು ಗುಜರಾತ್ ಟೈಟಾನ್ಸ್ ಪ್ರಕಟಿಸಿದೆ. ಮೊದಲ ಪಂದ್ಯದಲ್ಲಿ ಫೀಲ್ಡಿಂಗ್​ ಮಾಡುವಾಗ ಬಲಗಾಲಿಗೆ ಗಾಯ ಮಾಡಿಕೊಂಡ ಕೇನ್ ಬದಲಿಗೆ ಶ್ರೀಲಂಕಾದ ದಸುನ್ ಶನಕಾ ಅವರನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಸೇರಿಸಿಕೊಂಡಿದೆ. ಮಾರ್ಚ್​ 31ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ವಿಲಿಯನ್ಸ್​ ಗಾಯಕ್ಕೆ ತುತ್ತಾಗಿದ್ದರು.

ಶ್ರೀಲಂಕಾದ ವೈಟ್-ಬಾಲ್ ಕ್ರಿಕೆಟ್​ ನಾಯಕ ಶನಕ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಆಗಿದ್ದು, ಬಲಗೈ ಸೀಮ್ ಬೌಲಿಂಗ್ ಮಾಡಬಲ್ಲರು. ಭಾರತದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಶನಕ 62.00 ಸರಾಸರಿಯಲ್ಲಿ 187 ಸ್ಟ್ರೈಕ್ ರೇಟ್‌ನಲ್ಲಿ ಮೂರು ಇನ್ನಿಂಗ್ಸ್‌ ಮೂಲಕ 124 ರನ್‌ ಸಿಡಿಸಿದ್ದರು. ಮೂಲ ಬೆಲೆ 50 ಲಕ್ಷ ರೂಪಾಯಿಗೆ ಖರೀದಿಸಲಾಗಿತ್ತು. ಶನಕ ಅವರಿಗೆ ಇದು ಮೊದಲ ಐಪಿಎಲ್​ ಆವೃತ್ತಿ. ಈ ವರ್ಷದ ಮಿನಿ ಹರಾಜಿನಲ್ಲಿ ಯಾವುದೇ ತಂಡ ಬಿಡ್​ ಮಾಡಿರಲಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೇನ್ ವಿಲಿಯಮ್ಸನ್ ಗಾಯಗೊಂಡಿದ್ದರು. ಸಿಎಸ್‌ಕೆ ಇನ್ನಿಂಗ್ಸ್‌ನ 13 ನೇ ಓವರ್‌ನಲ್ಲಿ ವಿಲಿಯಮ್ಸನ್ ಬೌಂಡರಿ ಗೆರೆಯಲ್ಲಿ ಋತುರಾಜ್ ಗಾಯಕ್ವಾಡ್ ಹೊಡೆದ ಏರಿಯಲ್ ಶಾಟ್ ಅನ್ನು ಕ್ಯಾಚ್​ ಆಗಿ ಪರಿವರ್ತಿಸಲು ಪ್ರಯತ್ನಿಸಿದ್ದರು.

ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಕುಳಿತು ಡೆಲ್ಲಿ-ಗುಜರಾತ್‌ IPL ಪಂದ್ಯ ವೀಕ್ಷಿಸುತ್ತಿರುವ ರಿಷಭ್ ಪಂತ್!

ಈ ಸಂದರ್ಭದಲ್ಲಿ ವಿಲಿಯಮ್ಸನ್ ಸಮತೋಲನ ನಿಭಾಯಿಸಲು ಸಾಧ್ಯವಾಗದೇ ಕೆಳಗೆ ಬಿದ್ದಿದ್ದರು. ಬಲಗಾಲಿನ ಮೊಣಕಾಲಿಗೆ ಒತ್ತಡ ಹೆಚ್ಚಾದ್ದರಿಂದ ಗಾಯವಾಗಿತ್ತು. ಮೈದಾನದಲ್ಲಿ ನಡೆಯಲೂ ಸಾಧ್ಯವಾಗದೇ ಎತ್ತಿಕೊಂಡು ಹೋಗಲಾಗಿತ್ತು. ಇದೀಗ ಲೀಗ್​ನಿಂದಲೇ ಹೊರಬಿದ್ದಿದ್ದಾರೆ. ಮೊದಲ ಪಂದ್ಯದಲ್ಲಿ ಅವರ ಬದಲಿಯಾಗಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿದ್ದ ಸಾಯಿ ಸುದರ್ಶನ್​ ಅವರನ್ನು ಆಡಿಸಲಾಗಿತ್ತು. ಸುದರ್ಶನ್​ ಗುಜರಾತ್​ ಟೈಟಾನ್ಸ್​ನ ಮೊದಲ ಪ್ರಭಾವಿ ಆಟಗಾರ ಆಗಿದ್ದಾರೆ.

ಗುಜರಾತ್ ಗೆಲುವಿನೊಂದಿಗೆ ಶುಭಾರಂಭ: ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ 2023ರನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ತಂಡದ ಪರ ಶುಭಮನ್ ಗಿಲ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರೆ, ರಶೀದ್ ಮತ್ತು ಮೊಹಮ್ಮದ್ ಶಮಿ ತಲಾ ಎರಡು ವಿಕೆಟ್ ಪಡೆದಿದ್ದರು. ಇಂದು ಡೆಲ್ಲಿ ವಿರುದ್ಧ ಎರಡನೇ ಪಂದ್ಯ ನಡೆಯುತ್ತಿದ್ದು, ಸಾಧಾರಣ ಮೊತ್ತಕ್ಕೆ ಕ್ಯಾಪಿಟಲ್ಸ್ ಅ​ನ್ನು ಕಟ್ಟಿಹಾಕಿದೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆಗಾಗಿ ಶ್ರೇಯಸ್ ಅಯ್ಯರ್ ವಿದೇಶಕ್ಕೆ​​: 5 ತಿಂಗಳು ಕ್ರಿಕೆಟ್​ನಿಂದ ದೂರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.