ETV Bharat / sports

ಫುಟ್‌ಬಾಲ್‌ನಂತೆ ಕಬ್ಲ್​ಗಳಿಗೆ ಕ್ರಿಕೆಟ್​ ಸೀಮಿತವಾಗಲಿದೆ: ರವಿ ಶಾಸ್ತ್ರಿ - ETV Bharath Kannada news

ಟಿ 20 ಲೀಗ್​ಗಳಿಂದಾಗಿ ಇನ್ನು ವಿಶ್ವಕಪ್​ ಕ್ರಿಕೆಟ್​ ಮಾತ್ರ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಾಗಿ ಉಳಿಯಲಿವೆ. ದ್ವಿಪಕ್ಷೀಯ ಸರಣಿಗಳು ಮಹತ್ವ ಕಳೆದುಕೊಳ್ಳುತ್ತವೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

Cricket going the football way with T20 leagues Ravi Shastri
ಕ್ರಿಕೆಟ್​ ಫುಟ್‌ಬಾಲ್‌ನಂತೆ ಕಬ್ಲ್​ಗಳಿಗೆ ಸೀಮಿತವಾಗಲಿದೆ : ರವಿ ಶಾಸ್ತ್ರಿ
author img

By

Published : May 5, 2023, 8:15 PM IST

ನವದೆಹಲಿ: ಕ್ರಿಕೆಟ್​ನಲ್ಲಿ ಲೀಗ್​ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫುಟ್‌ಬಾಲ್‌ ಕಾರ್ಯವೈಖರಿಯಲ್ಲಿ ಕ್ರಿಕೆಟ್ ಸಾಗುತ್ತಿದೆ ಎಂದು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಆಟಗಾರರು ವಿಶ್ವಕಪ್‌ನಂತಹ ಜಾಗತಿಕ ಪಂದ್ಯಗಳನ್ನು ಆಡಲು ಮಾತ್ರ ಆಸಕ್ತಿ ವಹಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

"ದ್ವಿಪಕ್ಷೀಯ ಕ್ರಿಕೆಟ್‌ಗೆ ತೊಂದರೆಯಾಗುತ್ತದೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೇನೆ, ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಲೀಗ್‌ಗಳು ಪ್ರಪಂಚದಾದ್ಯಂತ ಹರಡುವುದರೊಂದಿಗೆ, ಅದು ಫುಟ್‌ಬಾಲ್ ಹಾದಿಯಲ್ಲಿ ಹೋಗಲಿದೆ. ವಿಶ್ವಕಪ್‌ಗೆ ಮುನ್ನ ತಂಡಗಳು ಒಟ್ಟುಗೂಡುತ್ತವೆ, ಅವರು ಸ್ವಲ್ಪಮಟ್ಟಿಗೆ ಆಡುತ್ತಾರೆ. ದ್ವಿಪಕ್ಷೀಯ, ಕ್ಲಬ್‌ಗಳು ಆಟಗಾರರನ್ನು ಬಿಡುಗಡೆ ಮಾಡುತ್ತವೆ ಮತ್ತು ನೀವು ಮೆಗಾ ವಿಶ್ವಕಪ್ ಅನ್ನು ಆಡುತ್ತೀರಿ. ಆದ್ದರಿಂದ ನೀವು ಇಷ್ಟಪಟ್ಟರೂ ಅಥವಾ ಪಡದಿದ್ದರೂ ದೀರ್ಘಾವಧಿಯಲ್ಲಿ ಫುಟ್​ಬಾಲ್ ರೀತಿಯಲ್ಲಿ ಹೋಗಲಿದೆ” ಎಂದು ಸಂದರ್ಶನವೊಂದರಲ್ಲಿ ಕ್ರಿಕೆಟ್​ನ ಸ್ವರೂಪ ಬದಲಾಗುವ ಬಗ್ಗೆ ಮಾಜಿ ಕ್ರಿಕೆಟಿಗ ಮಾತನಾಡಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ತಮ್ಮ ದೇಶದ ಆಡಳಿತ ಮಂಡಳಿಗಳ ಬದಲಿಗೆ ತಂಡದ ಮಾಲೀಕರು ಒಪ್ಪಂದಗಳಿಗೆ ಸಹಿ ಹಾಕಲು ಆಟಗಾರರನ್ನು ಅನೌಪಚಾರಿಕವಾಗಿ ಫ್ರಾಂಚೈಸಿಗಳು ಸಂಪರ್ಕಿಸುತ್ತಿವೆ ಎಂದು ಹೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸ್ತ್ರಿ ಅವರು, ದೇಶದ ತಂಡದಲ್ಲಿ ಅವಕಾಶ ದೊರೆಯಲು ಕಷ್ಟ ಇದೆ ಎಂದು ತಿಳಿದ ಆಟಗಾರರು ಈ ಒಪ್ಪಂದಗಳಿಗೆ ಬೇಗ ಸಹಿ ಹಾಕುತ್ತಾರೆ. ದೇಶ ಮತ್ತು ಫ್ರಾಂಚೈಸಿಗಳು ಎಂದು ಬಂದಾಗ ಆಟಗಾರರು ಫ್ರಾಂಚೈಸಿಗಳನ್ನೇ ಹೆಚ್ಚು ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

"ಈ ದೇಶದ ಜನರ ಪ್ರಮಾಣವನ್ನು ನೋಡಿ, ನಾವು 1.4 ಶತಕೋಟಿ ಜನರಿದ್ದೇವೆ ಮತ್ತು ಕೇವಲ 11 ಜನರು ಮಾತ್ರ ಭಾರತಕ್ಕಾಗಿ ಆಡಬಹುದು. ಇತರರು ಏನು ಮಾಡುತ್ತಾರೆ? ಅವರಿಗೆ ಬಿಳಿ-ಬಾಲ್ ಕ್ರಿಕೆಟ್ ಆಡಲು ಅವಕಾಶವಿದೆ. ಈ ಸಾಧ್ಯತೆಯನ್ನು ಫ್ರಾಂಚೈಸಿಗಳು ಲಾಭವಾಗಿ ಬಳಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ವಿವಿಧ ಫ್ರಾಂಚೈಸಿಗಳಿದ್ದು ಆಟಗಾರರನ್ನು ಖರೀದಿಸಿ ಆಡಿಸುತ್ತವೆ. ಇದು ಅವರ ಆದಾಯ, ಇದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಟಗಾರರು ಬಿಸಿಸಿಐನಿಂದ ಒಪ್ಪಂದ ಮಾಡಿಕೊಂಡಿಲ್ಲ ಎಂದಾದಾಗ ಅವರು ಹೋಗುವುದನ್ನು ತಡೆಯಲು ಆಗುವುದಿಲ್ಲ" ಎಂದಿದ್ದಾರೆ.

"ಆಟಗಾರರು ಎಕ್ಸ್‌ಪೋಶರ್ ಪಡೆಯಲು ಲೀಗ್​ಗಳನ್ನು ಆಡಬೆಕೆಂದೇನಿಲ್ಲ. ಆದರೆ ಅವರು ಆಡುವ ಲೀಗ್​ನ ಪ್ರಾಮುಖ್ಯತೆಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದು ಪ್ರಶ್ನೆಯಾಗುತ್ತದೆ. ಆಟಗಾರರು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ನಾವು ನೋಡಬೇಕಾಗುತ್ತದೆ. ಇದು ನಮ್ಮ ಲೀಗ್ ಮತ್ತು ಈ ಲೀಗ್ ಅನ್ನು ರಕ್ಷಿಸುವುದು ನಮ್ಮ ಆಸಕ್ತಿಯ ಮಟ್ಟಿಗೆ ಅತ್ಯಂತ ಮುಖ್ಯವಾಗಿದೆ. ಆದರೆ ಕೆಲವು ಆಟಗಾರರನ್ನು ಹೋಗಲು ಬಿಡುವುದರಿಂದ, ನಮ್ಮ ಲೀಗ್‌ನ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ" ಎಂದು ಅವರು ಹೇಳಿದರು.

ಇದರ ಜೊತೆಗೆ ಏಕದಿನ ಕ್ರಿಕೆಟ್​ನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಲೀಗ್​ ಕ್ರಿಕೆಟ್​ಗಳಿಂದಾಗಿ 50 ಓವರ್​ನ ಏಕದಿನ ಪಂದ್ಯಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಇದು ಬೇಸರದ ಸಂಗತಿ ಎಂದು ಅವರು ತಮ್ಮ ಸಂದರ್ಶನ ಅಂತ್ಯದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಟಿ20ಯಲ್ಲಿ ತ್ರಿವಳಿ ಸ್ಪಿನ್ನರ್ ಬಳಸುವ ಸಂಜು: ಸ್ಯಾಮ್ಸನ್​ ನಾಯಕತ್ವ ಮೆಚ್ಚಿದ ಮಾಜಿ ಕೋಚ್​ ರವಿ ಶಾಸ್ತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.