ವಿಶ್ವ ಕ್ರಿಕೆಟ್ಗೆ ಸದ್ಯದ ಬಾಸ್ ಅಂದ್ರೆ ಅದು ವಿರಾಟ್ ಕೊಹ್ಲಿ. ವಿರಾಟ್ ವೀರಾವೇಶ ತೋರಿದರೆ ಅಲ್ಲಿ ದಾಖಲೆಗಳು ಉಡೀಸ್ ಆಗೋದು ಪಕ್ಕಾ. ಅದು ಯಾವುದೇ ಮಾದರಿಯ ಕ್ರಿಕೆಟ್ ಆದರೂ ಸರಿ, ತಾನು ಹಿಂದೆ ಬೀಳಲ್ಲ ಅನ್ನೋದನ್ನು ರನ್ ಮಶಿನ್ ಮತ್ತೆ ಮತ್ತೆ ಸಾಬೀತು ಮಾಡಿದ್ದಾರೆ. ಸಾಗುತ್ತಿರುವ 16 ನೇ ಐಪಿಎಲ್ನಲ್ಲಿ ಚೇಸಿಂಗ್ ಮಾಸ್ಟರ್ ಬ್ಯಾಟಿಂಗ್ ಖದರ್ನಿಂದಾಗಿ ಕ್ರಿಸ್ಗೇಲ್ ಹೆಸರಲ್ಲಿದ್ದ ದಾಖಲೆ ಪುಡಿಯಾಗಿದೆ. ಇದು ಕಂಡ ಟಿ20 ಮಾಸ್ಟರ್ ಗೇಲ್ "ನಿವೃತ್ತಿಯಿಂದ ಮತ್ತೆ ಕ್ರಿಕೆಟ್ಗೆ ವಾಪಸ್ ಬರುವೆ" ಅಂತಾ ಹೇಳಿದ್ದಾರೆ.
ನೀವು ಓದ್ತಿರೋದು ನಿಜ. ಐಪಿಎಲ್ನಲ್ಲಿ ಕ್ರಿಸ್ ಗೇಲ್ ಹೆಸರಲ್ಲಿದ್ದ ಸರ್ವಾಧಿಕ ಶತಕಗಳ ದಾಖಲೆಯನ್ನು ವಿರಾಟ್ ಮೊನ್ನೆಯಷ್ಟೇ ಮುರಿದಿದ್ದಾರೆ. ಇದು ವೆಸ್ಟ್ ಇಂಡೀಸ್ ದೈತ್ಯ ಬ್ಯಾಟರ್ನನ್ನು ಕೆರಳಿಸಿದೆ. ಹೀಗಾಗಿ ತಾನು ಕ್ರಿಕೆಟ್ಗೆ ಹೇಳಿರುವ ಗುಡ್ಬೈನಿಂದ ಹೊರಬಂದು ಮತ್ತೆ ಕ್ರಿಕೆಟ್ ಅಖಾಡಕ್ಕೆ ಇಳಿಯುವೆ. ಮುಂದಿನ ವರ್ಷ ವಿರಾಟ್ರನ್ನು ಎದುರಿಸುವೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಗುಜರಾತ್ ಮತ್ತು ಆರ್ಸಿಬಿ ಪಂದ್ಯದ ವೇಳೆ ವಿರಾಟ್ ಶತಕ ಬಾರಿಸಿದ ಬಳಿಕ ಜಿಯೋ ಸಿನಿಮಾದಲ್ಲಿ ಮಾತನಾಡಿದ ಕ್ರಿಸ್ಗೇಲ್, ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. "ಆತನ ಆಟವನ್ನು ಎಂದಿಗೂ ಅನುಮಾನಿಸಬೇಡಿ. ಇದೊಂದು ಅದ್ಭುತ ಇನ್ನಿಂಗ್ಸ್, ಅಮೋಘ ಪ್ರದರ್ಶನ ನೀಡಿದರು. ನಿಮಗೆ ಗೊತ್ತಾ, ಅವರು ತಮ್ಮ ತಂಡವನ್ನು ಗೆಲುವಿನ ಯಾವಾಗಲೂ ಸ್ಥಾನದಲ್ಲಿಯೇ ಇಟ್ಟಿರುತ್ತಾರೆ" ಎಂದು ಇನ್ನಿಂಗ್ಸ್ ಬ್ರೇಕ್ ವೇಳೆ ಹೇಳಿದ್ದಾರೆ.
ಇದೇ ವೇಳೆ ತಮ್ಮ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿಯನ್ನು ಎದುರಿಸಲು ತಾವು ಮುಂದಿನ ವರ್ಷ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯುವೆ. ವಿರಾಟ್ ನಿಮ್ಮನ್ನು ಅಂಗಳದಲ್ಲಿ ಭೇಟಿಯಾಗುವೆ ಎಂದು ತಮಾಷೆಯಾಗಿ ಹೇಳಿದ್ದಲ್ಲದೇ, ಫಾಫ್ ಡು ಪ್ಲೆಸಿಸ್ ಕೂಡ ಉತ್ತಮವಾಗಿ ಬ್ಯಾಟ್ ಮಾಡಿದರು ಎಂದಿದ್ದಾರೆ.
-
Virat is there when we need him!
— AB de Villiers (@ABdeVilliers17) May 21, 2023 " class="align-text-top noRightClick twitterSection" data="
">Virat is there when we need him!
— AB de Villiers (@ABdeVilliers17) May 21, 2023Virat is there when we need him!
— AB de Villiers (@ABdeVilliers17) May 21, 2023
ಎಬಿಡಿ ಟ್ವೀಟ್: ಆರ್ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ವಿರಾಟ್ ಸಾಹಸವನ್ನು ಬಹುವಾಗಿ ಮೆಚ್ಚಿದ್ದಾರೆ. ಕೊಹ್ಲಿಯ ಶತಕದ ನಂತರ ಟ್ವೀಟ್ ಮಾಡಿರುವ ಎಬಿಡಿ, 'ಆರ್‌ಸಿಬಿಗೆ ಹೆಚ್ಚು ಅಗತ್ಯವಿರುವಾಗ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದೇ ಇರ್ತಾರೆ' ಎಂದು ಹೇಳಿರುವುದು ವೈರಲ್ ಆಗಿದೆ.
ವಿರಾಟ್ ದಾಖಲೆಯ ಶತಕ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದಾಖಲೆಯ 7 ನೇ ಶತಕವನ್ನು ಗಳಿಸಿದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೆಂಚುರಿ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡರು.
ಅಲ್ಲದೇ, ಅತಿ ಹೆಚ್ಚು ಹಂಡ್ರೆಡ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಅತಿ ಹೆಚ್ಚು ಶತಕ ಗಳಿಸಿದ ಪಟ್ಟಿಯಲ್ಲಿ ಈವರೆಗೂ ಕ್ರಿಸ್ ಗೇಲ್(6) ಅಗ್ರಸ್ಥಾನದಲ್ಲಿದ್ದರು. ಇದನ್ನೀಗ ಕೊಹ್ಲಿ ಮುರಿದರು. ಐಪಿಎಲ್ 2023 ರ ಸೀಸನ್‌ನಲ್ಲಿ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಆರ್ಸಿಬಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತು. ಪಾಯಿಂಟ್ ಪಟ್ಟಿಯಲ್ಲಿ ತಂಡ 6 ನೇ ಸ್ಥಾನಕ್ಕೆ ಕುಸಿಯಿತು.
ಇದನ್ನೂ ಓದಿ: ಇಂದು IPL ಕ್ವಾಲಿಫೈಯರ್: ಹಾರ್ದಿಕ್ vs ದೋನಿ- ಯಾರಿಗೆ ಸಿಗಲಿದೆ ಫೈನಲ್ ಟಿಕೆಟ್?