ETV Bharat / sports

ದಾಖಲೆಯ ಶತಕ ಸಿಡಿಸಿದ ಕೊಹ್ಲಿ; ಫ್ಲೈಯಿಂಗ್ ಕಿಸ್‌ ನೀಡಿ ಸಂಭ್ರಮಿಸಿದ ಪತ್ನಿ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು.

Virat Kohli and  Anushka Sharma
ವಿರಾಟ್​ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ
author img

By

Published : May 22, 2023, 8:41 AM IST

IPL 2023: ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಅಮೋಘ ಫಾರ್ಮ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಭಾನುವಾರ ಹೊಸ ದಾಖಲೆ ನಿರ್ಮಿಸಿದರು. ಚಿನ್ನಸ್ವಾಮಿ ಮೈದಾನದಲ್ಲಿ ಅಬ್ಬರಿಸಿದ 'ರನ್ ಮಶಿನ್' ಆಕರ್ಷಕ ಶತಕ ಬಾರಿಸಿ ಸಂಭ್ರಮಿಸಿದರು. ಈ ರೋಮಾಂಚಕ ಕ್ಷಣವನ್ನು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಣ್ತುಂಬಿಕೊಂಡ ಪತ್ನಿ ಹಾಗು ನಟಿ ಅನುಷ್ಕಾ ಶರ್ಮಾ ಪತಿಯ ಸಾಧನೆಗೆ ಹೆಮ್ಮೆ ಪಟ್ಟು ಫ್ಲೈಯಿಂಗ್ ಕಿಸ್‌​ ಮೂಲಕ ಖುಷಿಪಟ್ಟರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದ್ದರು. ಇದೀಗ ಗುಜರಾತ್ ವಿರುದ್ಧವೂ ಸಂಚುರಿ ಸಾಧನೆ ತೋರಿದ್ದಾರೆ. 61 ಎಸೆತಗಳನ್ನು ಎದುರಿಸಿ 101 ರನ್‌ ಗಳಿಸಿದ ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ, 1 ಸಿಕ್ಸರ್ ಸೇರಿತ್ತು. ಫಾಫ್ ಡು ಪ್ಲೆಸಿಸ್ (28) ಮತ್ತು ಬ್ರೇಸ್ ವೆಲ್ (26) ರನ್​ ಗಳಿಸಿದರು.

ಈ ಶತಕದೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿತ್ತು. ಗೇಲ್ ಐಪಿಎಲ್‌ನಲ್ಲಿ ಒಟ್ಟು 6 ಶತಕ ಬಾರಿಸಿದ್ದಾರೆ. ಒಟ್ಟು ಏಳು ಶತಕದೊಂದಿಗೆ ಕೊಹ್ಲಿ, ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಧಿಕ ಬಾರಿ ಮೂರಂಕಿ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೇ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಶತಕ ಬಾರಿಸಿದ ಆರ್​ಸಿಬಿ ತಂಡದ ಮೊದಲ ಬ್ಯಾಟರ್​ ಕೂಡಾ ಹೌದು.

ನಿನ್ನೆ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಇಡೀ ತಂಡದ ಜವಾಬ್ದಾರಿಯನ್ನು ತನ್ನ ಹೆಗಲೇರಿಸಿಕೊಂಡು ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಆರಂಭದಲ್ಲಿ ಫಾಫ್ ಡುಪ್ಲೆಸಿಸ್ ಜತೆಗೂಡಿ ಮೊದಲ ವಿಕೆಟ್​ಗೆ 67 ರನ್​ಗಳ ಜೊತೆಯಾಟವಾಡಿದರು. ಆದರೆ ಡು ಪ್ಲೆಸಿಸ್ 28 ರನ್‌ ಗಳಿಸಿ ಔಟಾಗುವುದರೊಂದಿಗೆ ಆರ್​ಸಿಬಿ ದಿಢೀರ್ ಕುಸಿತಕ್ಕೊಳಗಾಯಿತು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ತಂಡಕ್ಕೆ ಆಸರೆಯಾದರು. ಡೆತ್ ಓವರ್​ಗಳಲ್ಲಿ ಮತ್ತೆ ಅಬ್ಬರಿಸಲಾರಂಭಿಸಿದ ಕೊಹ್ಲಿ ಗುಜರಾತ್ ಟೈಟಾನ್ಸ್ ಬೌಲರ್​ಗಳನ್ನು ಬೆಂಡೆತ್ತಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದ ಗುಜರಾತ್​ ಟೈಟನ್ಸ್ ನಾಯಕ ಹಾರ್ದಿಕ್​ ಪಾಂಡ್ಯ ಮೊದಲು ಬೌಲಿಂಗ್​ ಆಯ್ಕೆ ಮಾಡಿದರು. ಹೀಗಾಗಿ ಬ್ಯಾಟಿಂಗ್​ ಶುರು ಮಾಡಿದ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 197 ರನ್ ಗಳಿಸಿತು. ನಾಯಕ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ಆರ್​ಸಿಬಿ ಬೃಹತ್​ ಸ್ಕೋರ್​ ಕಲೆ ಹಾಕುವಲ್ಲಿ ನೆರವಾಯಿತು.

ಪ್ಲೇಆಪ್​ನಿಂದ ಹೊರಬಿದ್ದ ಆರ್‌ಸಿಬಿ: ಗುಜರಾತ್​ ಟೈಟನ್ಸ್ ತಂಡ ನಿಗದಿತ 19.1 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 198 ರನ್​ ಗಳಿಸುವ ಮೂಲಕ 6 ವಿಕೆಟ್​ಗಳ ಜಯ ದಾಖಲಿಸಿತು. ಈ ಮೂಲಕ ಆರ್​ಸಿಬಿ ಪ್ಲೇಆಫ್​ನಿಂದ ಹೊರಬಿದ್ದರೆ, ಇನ್ನೊಂದೆಡೆ, ಮುಂಬೈ ಇಂಡಿಯನ್ಸ್ ಪ್ಲೇಆಫ್​ಗೆ ಎಂಟ್ರಿ ಪಡೆಯಿತು.

ಇದನ್ನೂ ಓದಿ: ಕಿಂಗ್​ ಕೊಹ್ಲಿ ಶತಕ ವ್ಯರ್ಥ... ಗಿಲ್​ ಸೆಂಚುರಿಗೆ ಒಲಿದ ಗೆಲುವು... ಐಪಿಎಲ್​ನಿಂದ ಹೊರ ಬಿದ್ದ ಆರ್​ಸಿಬಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.