ETV Bharat / sports

ಐಪಿಎಲ್​ನ ಆರನೇ ಕಪ್​ ಗೆದ್ದ ಖುಷಿಯಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ರಾಯುಡು

author img

By

Published : May 30, 2023, 6:22 PM IST

ಅಂಬಾಟಿ ರಾಯುಡು ಐಪಿಎಲ್​ ಫೈನಲ್​ ನಂತರ ಲೀಗ್​ ಪಂದ್ಯಕ್ಕೆ ನಿವೃತ್ತಿ ಘೋಷಿಸಿದ್ದರು. ಈಗ ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲಾ ಮಾದರಿಗೆ ವಿದಾಯ ಹೇಳಿದ್ದಾರೆ.

Ambati Rayudu announces his retirement from all forms of Indian cricket
ಅಂಬಾಟಿ ರಾಯುಡು

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಫೈನಲ್​ ಪಂದ್ಯಕ್ಕೂ ಮುನ್ನ ಭಾನುವಾರ 28 ರಂದು ಅಂಬಾಟಿ ರಾಯುಡು ಈ ಪಂದ್ಯ ನನ್ನ ಐಪಿಎಲ್​ ವೃತ್ತಿ ಜೀವನದ ಕೊನೆಯದ್ದು ಎಂದು ಘೋಷಿದ್ದರು. ಈ ಮೂಲಕ ದೇಶೀಯ ಚುಟುಕು ಲೀಗ್​ಗೆ ನಿವೃತ್ತಿಯನ್ನು ಹೇಳಿದ್ದರು. ಮಳೆಯಿಂದಾಗಿ ಮೀಸಲು ದಿನವಾದ ನಿನ್ನೆ ನಡೆದ ಗುಜರಾತ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಪೈನಲ್​ನಲ್ಲಿ ಚೆನ್ನೈ ಕಪ್​ ಗೆದ್ದುಕೊಂಡಿತು. ಇದಾದ ನಂತರ ಇಂದು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೂ ನಿವೃತ್ತಿಯನ್ನು ಘೋಷಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಫೀನಿಶರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಯುಡು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಒಂದು ಪತ್ರವನ್ನು ಬರೆದು ವಿದಾಯ ಹೇಳಿದ್ದಾರೆ. ಅದರಲ್ಲಿ 10 ವರ್ಷ ಭಾರತ ತಂಡದಲ್ಲಿ ನಾನಿದ್ದೆ ಸಂತೋಷದ ವಿಷಯ. 2013 ರಂದು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ದಿನ ಎಂದೂ ಮರೆಯಲಾಗದ ಅವಿಸ್ಮರಣೀಯ ಘಟನೆ ಎಂದು ಬಣ್ಣಿಸಿದ್ದಾರೆ.

ಟ್ವಿಟರ್​ನಲ್ಲಿ ಹಂಚಿಕೊಂಡ ಪತ್ರದಲ್ಲಿ, ’’ಈ ವಿಶೇಷ ಐಪಿಎಲ್ ಗೆಲುವಿನಲ್ಲಿ ಸಿಎಸ್​ಕೆ ಮತ್ತು ವೈಯಕ್ತಿಕವಾಗಿ ನನಗೂ ಉತ್ತಮ ರಾತ್ರಿಯಾಗಿದೆ. ನಾನು ಭಾರತೀಯ ಕ್ರಿಕೆಟ್‌ನ ಎಲ್ಲ ಪ್ರಕಾರಗಳಿಗೆ ನನ್ನ ನಿವೃತ್ತಿಯನ್ನು ಘೋಷಿಸಲು ಬಯಸುತ್ತೇನೆ. ಮನೆಯಲ್ಲಿ ಟೆನಿಸ್ ಚೆಂಡಿನೊಂದಿಗೆ ಆಟವಾಡುತ್ತಿದ್ದ ನಾನು ಬಾಲ್ಯದಲ್ಲಿ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡಾಗ, ಮೂರು ದಶಕಗಳ ಕಾಲ ನನ್ನ ಅದ್ಭುತ ಪ್ರಯಾಣವನ್ನು ಊಹಿಸಿರಲಿಲ್ಲ. 15 ವರ್ಷದೊಳಗಿನ ತಂಡದಿಂದ ಹಿರಿಯರ ಟೀಮ್​ವರೆಗೆ ಭಾರತ ದೇಶವನ್ನು ಪ್ರತಿನಿಧಿಸಿರುವುದು ನನ್ನ ದೊಡ್ಡ ಗೌರವ ಎಂದು ನಾನು ಪರಿಗಣಿಸುತ್ತೇನೆ. ನಾನು 2013 ರಲ್ಲಿ ಮೊದಲ ಬಾರಿಗೆ ನನ್ನ ಭಾರತ ತಂಡ ಕ್ಯಾಪ್ ಅನ್ನು ಸ್ವೀಕರಿಸಿದ ದಿನವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ - ಇದು ನಾನು ಶಾಶ್ವತವಾಗಿ ಪಾಲಿಸುವ ನೆನಪಾಗಿದೆ‘‘.

’’ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಆಂಧ್ರ ಕ್ರಿಕೆಟ್ ಸಂಸ್ಥೆ (ಎಸಿಎ), ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ), ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಮತ್ತು ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ನಂಬಿಕೆಯನ್ನು ತೋರಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಸಾಮರ್ಥ್ಯದಲ್ಲಿ ಮತ್ತು ಮೈದಾನದಲ್ಲಿ ನನ್ನನ್ನು ವ್ಯಕ್ತಪಡಿಸಲು ನನಗೆ ಅವಕಾಶವನ್ನು ಒದಗಿಸುತ್ತಿದೆ. ನಾನು ಆಡಿದ ಎರಡೂ ಐಪಿಎಲ್ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆರು ಬಾರಿ ಐಪಿಎಲ್ ವಿಜೇತನಾಗಿ ನನ್ನ ವೃತ್ತಿಜೀವನವನ್ನು ಮುಗಿಸಲು ನಾನು ಹೆಮ್ಮೆಪಡುತ್ತೇನೆ‘‘.

2013 ರಲ್ಲಿ ಮುಂಬೈ ಇಂಡಿಯನ್ಸ್‌ನ ಮೊಟ್ಟಮೊದಲ ಐಪಿಎಲ್​ ಗೆಲುವಿನ ಭಾಗವಾಗಿರುವುದರಿಂದ ಮತ್ತು 2018, 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಐಪಿಎಲ್​ ಪ್ರಶಸ್ತಿಯನ್ನು ಗೆದ್ದಿರುವುದು ಮತ್ತು 2023 ನನ್ನೊಂದಿಗೆ ಶಾಶ್ವತವಾಗಿ ಉಳಿಯುವ ನೆನಪುಗಳು. ಸಿಎಸ್‌ಕೆ ಮತ್ತು ಟೀಮ್ ಇಂಡಿಯಾ ಎರಡರಲ್ಲೂ ನಾಯಕ ಧೋನಿ ಭಾಯ್ ಅವರೊಂದಿಗೆ ಆಡುವುದು ದೊಡ್ಡ ಭಾಗ್ಯವಾಗಿದೆ. ಕಳೆದ ಎರಡು ದಶಕಗಳಲ್ಲಿ ನಾವು ಮೈದಾನದ ಒಳಗೆ ಮತ್ತು ಹೊರಗೆ ಕೆಲವು ಉತ್ತಮ ನೆನಪುಗಳನ್ನು ಹೊಂದಿದ್ದೇವೆ, ಅದು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ.

ನನ್ನ ಆತ್ಮೀಯ ಕುಟುಂಬದ, ವಿಶೇಷವಾಗಿ ನನ್ನ ತಂದೆ ಸಾಂಬಶಿವ ರಾವ್ ಅವರ ಬೆಂಬಲವಿಲ್ಲದೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ನನ್ನ ಆರಂಭಿಕ ದಿನಗಳಲ್ಲಿ ನನ್ನ ಎಲ್ಲ ಸಹ ಆಟಗಾರರು, ಸಹಾಯಕ ಸಿಬ್ಬಂದಿ, ಅಭಿಮಾನಿಗಳು ಮತ್ತು ಎಲ್ಲಾ ತರಬೇತುದಾರರಿಗೆ ಧನ್ಯವಾದಗಳು. ನೀವೆಲ್ಲರೂ ಇಲ್ಲದೆ ನನ್ನ ಈ ಸ್ಮರಣೀಯ ಪ್ರಯಾಣವು ನೆರವೇರುತ್ತಿರಲಿಲ್ಲ. ಏರಿಳಿತಗಳ ಮೂಲಕ ನನ್ನ ಪಕ್ಕದಲ್ಲಿದ್ದಕ್ಕಾಗಿ ಧನ್ಯವಾದಗಳು. ಅಭಿಮಾನಿಗಳು ನಿಡಿದ ಪ್ರೋತ್ಸಾಹ ಎಲ್ಲಕ್ಕಿಂತ ದೊಡ್ಡದು". ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟ್​ ವೃತ್ತಿ ಜೀವನ: ಭಾರತ ತಂಡದಲ್ಲಿ 55 ಏಕದಿನ ಪಂದ್ಯಗಳಲ್ಲಿ 50 ಇನ್ನಿಂಗ್ಸ್​ ಆಡಿರುವ ರಾಯುಡು 79.05 ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿ 47.06 ರ ಸರಾಸರಿಯಲ್ಲಿ 1694 ರನ್ ಕಲೆಹಾಕಿದ್ದಾರೆ. ಇದರಲ್ಲಿ 3 ಶತಕ ಮತ್ತು 10 ಅರ್ಧಶತಕ ಒಳಗೊಂಡಿದೆ. ಅವರ ಏಕದಿನದ ಅತ್ಯುತ್ತಮ ಸ್ಕೋರ್​ 124 ಆಗಿದೆ. 7 ಟಿ -20ಯಲ್ಲಿ 6 ಇನ್ನಿಂಗ್ಸ್​ ಆಡಿರುವ ಅವರು 105 ಸ್ಟ್ರೈಕ್​ ರೇಟ್​ನಲ್ಲಿ 61 ರನ್​ ಗಳಿಸಿದ್ದಾರೆ. ಐಪಿಎಲ್​ನಲ್ಲಿ 203 ಪಂದ್ಯದ್ಲಲಿ 187 ಇನ್ನಿಂಗ್ಸ್​ ಆಡಿದ್ದು 1 ಶತಕ 22 ಅರ್ಧಶತಕದಿಂದ 4348 ರನ್​ ಕಲೆಹಾಕಿದ್ದಾರೆ.

ಏಕದಿನಕ್ಕೆ ರಾಯುಡು 2013ರಲ್ಲಿ ಜಿಂಬಾಬ್ವೆ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡಿದ್ದರು. 2014 ರಲ್ಲಿ ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ಟಿ20 ತಂಡಕ್ಕೆ ಸೇರಿಕೊಂಡಿದ್ದರು.

ಇದನ್ನೂ ಓದಿ: IPL 2023 Final: ಇದೇ ನನ್ನ ಕೊನೆಯ ಪಂದ್ಯ... ಐಪಿಎಲ್​ಗೆ ಅಂಬಟಿ ರಾಯಡು ನಿವೃತ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.