ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಐಪಿಎಲ್ ಹಾಗೂ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆಂದು ವರದಿಯಾಗಿದೆ. ಹ್ಯಾಮ್ಸ್ಟ್ರಿಂಗ್(ಸ್ನಾಯು ಸೆಳೆತ) ತೊಂದರೆಗೊಳಗಾಗಿರುವ ಈ ಪ್ಲೇಯರ್ ಮುಂದಿನ ಕೆಲ ವಾರಗಳ ಕಾಲ ಬೆಂಗಳೂರು ಎನ್ಸಿಎನಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್ ಮಾಡಿದ್ದ ರಹಾನೆ, ಕ್ಷೇತ್ರರಕ್ಷಣೆ ಮಾಡಲು ಮೈದಾನಕ್ಕಿಳಿದಿರಲಿಲ್ಲ. ಲಭ್ಯವಾಗಿರುವ ಮಾಹಿತಿ ಪ್ರಕಾರ ಗಂಭೀರವಾದ ಸ್ನಾಯುಸೆಳೆತ ತೊಂದರೆಯಿಂದ ರಹಾನೆ ಬಳಲುತ್ತಿದ್ದು, ಈಗಾಗಲೇ ಕೋಲ್ಕತ್ತಾ ತಂಡದ ಬಯೋಬಬಲ್ ತೊರೆದಿರುವುದಾಗಿ ವರದಿಯಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಐಪಿಎಲ್ ಅಥವಾ ಬಿಸಿಸಿಐ ಯಾವುದೇ ರೀತಿಯ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಇದನ್ನೂ ಓದಿ: ಪ್ಲೇ - ಆಫ್ ರೇಸ್ಗಾಗಿ ಹೋರಾಟ.. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್
ಐಪಿಎಲ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ರಹಾನೆ, ಆಡಿರುವ 7 ಪಂದ್ಯಗಳಿಂದ ಕೇವಲ 133 ರನ್ಗಳಿಕೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಅಧಿಕಾರಿ ತಿಳಿಸಿರುವ ಮಾಹಿತಿ ಪ್ರಕಾರ, ಬೆಂಗಳೂರಿನ ಎನ್ಸಿಎನಲ್ಲಿ ತರಬೇತಿಯಲ್ಲಿ ಭಾಗಿಯಾಗಲಿದ್ದು, ನಾಲ್ಕು ವಾರಕ್ಕಿಂತಲೂ ಅಧಿಕ ಸಮಯ ಇಲ್ಲಿ ಇರಲಿದ್ದಾರೆ. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಸರಣಿಯಿಂದಲೂ ಅವರು ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಲೇ ಈಗಾಗಲೇ ಟೀಂ ಇಂಡಿಯಾ ಉಪನಾಯಕತ್ವದ ಜೊತೆಗೆ ಆಡುವ 11ರ ಬಳಗದಿಂದ ರಹಾನೆ ಹೊರಗುಳಿದಿದ್ದಾರೆ. ಇವರ ಜೊತೆಗೆ ಪೂಜಾರಾ ಕೂಡ ಟೆಸ್ಟ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ, ಇವರ ಸ್ಥಾನಕ್ಕೆ ಹನುಮ ವಿಹಾರಿ ಅಥವಾ ಶ್ರೇಯಸ್ ಅಯ್ಯರ್ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
ಜೂನರ್ 16ರಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನಾಡಲಿದ್ದು, ಅದಕ್ಕೂ ಮುಂಚಿತವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿ ನಡೆಯಲಿದೆ. ಈ ಟೂರ್ನಿಗೋಸ್ಕರ ಟೀಂ ಇಂಡಿಯಾ ಮುಂದಿನ ಕೆಳ ದಿನಗಳಲ್ಲಿ ಪ್ರಕಟವಾಗಲಿದೆ.