ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ (ಗುರುವಾರ) ನಡೆದ ಸನ್‌ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ರನ್ ಚೇಸ್‌ನಲ್ಲಿ ಅಬ್ಬರದ ಶತಕ ಬಾರಿಸಿದ ಗೇಮ್ ಚೇಂಜರ್ ವಿರಾಟ್ ಕೊಹ್ಲಿ ಭಾರಿ ಮೆಚ್ಚುಗೆ ಗಳಿಸಿದರು. ಪಂದ್ಯದ ಬಳಿಕ ಅವರು ಪತ್ನಿ ಅನುಷ್ಕಾ ಶರ್ಮಾರಿಗೆ ವಿಡಿಯೋ ಕರೆ ಮಾಡಿ ಮಾತನಾಡಿ ಗಮನ ಸೆಳೆದರು.
-
Virat on a Video call with Anushka ❤❤❤ pic.twitter.com/gLUIp7UEUT
— Shreya ❤ (@Shreyaztweets) May 18, 2023 " class="align-text-top noRightClick twitterSection" data="
">Virat on a Video call with Anushka ❤❤❤ pic.twitter.com/gLUIp7UEUT
— Shreya ❤ (@Shreyaztweets) May 18, 2023Virat on a Video call with Anushka ❤❤❤ pic.twitter.com/gLUIp7UEUT
— Shreya ❤ (@Shreyaztweets) May 18, 2023
ಪ್ಲೇ ಆಫ್ ಹಾದಿ ಸುಗಮಗೊಳ್ಳಲು ಬೆಂಗಳೂರು ತಂಡಕ್ಕೆ ಈ ಪಂದ್ಯ ನಿರ್ಣಾಯಕವಾಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಹೆನ್ರಿಕ್ ಕ್ಲಾಸೆನ್ ಅವರ ಸಿಡಿಲಬ್ಬರದ ಶತಕದೊಂದಿಗೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ಗಳನ್ನು ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಪ್ ಡುಪ್ಲೆಸಿಸ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಗೆಲುವಿನ ದಡ ತಲುಪಿತು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಾಲ್ಕು ವರ್ಷಗಳ ಬಳಿಕ ರನ್ ಮಷಿನ್ ಕೊಹ್ಲಿ ಶತಕ ಸಿಡಿಸಿದ್ದಾರೆ. 2019ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಂಚುರಿ ಬಾರಿಸಿದ್ದರು. 2023ರ ಆವೃತ್ತಿಯ ಇದು ಅವರ ಮೊದಲ ಶತಕವಾಗಿದೆ. 62 ಎಸೆತಗಳಲ್ಲಿ 100 ರನ್ ಸಿಡಿಸುವ ಮೂಲಕ ಐಪಿಎಲ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ್ದಾರೆ. ಕ್ರಿಸ್ ಗೇಲ್ 6 ಶತಕ ಬಾರಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 187 ರನ್ಗಳ ಸವಾಲಿನ ಗುರಿಯನ್ನು ಆರ್‌ಸಿಬಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಾಗಲೇ ಪೂರೈಸಿತು. ಹೈದರಾಬಾದ್ ಪರ ಹೆನ್ರಿಕ್ ಕ್ಲಾಸೆನ್ 51 ಎಸೆತದಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಸಮೇತ 104 ರನ್ ಸಿಡಿಸಿ ಸಂಭ್ರಮಿಸಿದರು.
ವಿರಾಟ್ ಕೊಹ್ಲಿಗೆ ಕ್ರಿಕೆಟ್ ಲೋಕದ ದಿಗ್ಗಜರ ಮೆಚ್ಚುಗೆ: ಭಾರತ ತಂಡದ ಮಾಜಿ ಆಟಗಾರರಾದ ಆಲ್ರೌಂಡರ್ ಯುವರಾಜ್ ಸಿಂಗ್, ಸುರೇಶ್ ರೈನಾ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೈದರಾಬಾದ್ನಲ್ಲಿ ವಿಶೇಷ ಇನ್ನಿಂಗ್ಸ್ ಕಟ್ಟಿದ ರನ್ ಮಷಿನ್ ವಿರಾಟ್ ಕೊಹ್ಲಿ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ''ಮೊದಲ ಎಸೆತದಿಂದಲೇ ಕವರ್ ಡ್ರೈವ್ ಆಡಿದಾಗಲೇ ಇದು ವಿರಾಟ್ ದಿನವೆಂದೇ ನಮಗೆ ಸ್ಪಷ್ಟವಾಗಿತ್ತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಇಬ್ಬರೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಭರ್ಜರಿ ಹೊಡೆತಗಳು ಮಾತ್ರವಲ್ಲದೆ ಯಶಸ್ವಿ ಜೊತೆಯಾಟದ ಮೂಲಕವೂ ಸ್ಟ್ರೈಕ್ ಬದಲಾವಣೆ ಮೂಲಕವೂ ಉತ್ತಮ ರನ್ ಪೇರಿಸಿದ್ದಾರೆ. ಇಬ್ಬರ ಬ್ಯಾಟಿಂಗ್ ವೈಭವದ ಎದುರು 186 ರನ್ ದೊಡ್ಡ ಮೊತ್ತವಾಗಿರಲಿಲ್ಲ'' ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: IPL 2023: ಕಿಂಗ್ ಕೊಹ್ಲಿ ಶತಕ, ಡು ಪ್ಲೆಸಿಸ್ ಅರ್ಧಶತಕ... ಆರ್ಸಿಬಿಗೆ ಭರ್ಜರಿ ಗೆಲುವು