ಹೈದರಾಬಾದ್: 2022ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಎಲ್ಲ ಫ್ರಾಂಚೈಸಿಗಳು ಗರಿಷ್ಠ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕೆ ಇಂದು ಕೊನೆಯ ದಿನವಾಗಿರುವ ಕಾರಣ ಎಲ್ಲ ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಮಾಹಿತಿ ರಿಲೀಸ್ ಮಾಡ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉದಯೋನ್ಮುಖ ವೇಗಿ ಮೊಹಮ್ಮದ್ ಸಿರಾಜ್, ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಅವರನ್ನು ರಿಟೈನ್ ಮಾಡಿಕೊಂಡಿದೆ.
-
RCB Player Retention Announcement: Virat Kohli, Glenn Maxwell and Mohammed Siraj are retained for the Vivo IPL 2022 season. #PlayBold #WeAreChallengers #IPLRetentions pic.twitter.com/NMKMyd24xb
— Royal Challengers Bangalore (@RCBTweets) November 30, 2021 " class="align-text-top noRightClick twitterSection" data="
">RCB Player Retention Announcement: Virat Kohli, Glenn Maxwell and Mohammed Siraj are retained for the Vivo IPL 2022 season. #PlayBold #WeAreChallengers #IPLRetentions pic.twitter.com/NMKMyd24xb
— Royal Challengers Bangalore (@RCBTweets) November 30, 2021RCB Player Retention Announcement: Virat Kohli, Glenn Maxwell and Mohammed Siraj are retained for the Vivo IPL 2022 season. #PlayBold #WeAreChallengers #IPLRetentions pic.twitter.com/NMKMyd24xb
— Royal Challengers Bangalore (@RCBTweets) November 30, 2021
ವಿರಾಟ್ ಕೊಹ್ಲಿಗೆ 15 ಕೋಟಿ ರೂ. ಗ್ಲೇನ್ ಮ್ಯಾಕ್ಸ್ವೆಲ್ಗೆ 11 ಕೋಟಿ ರೂ. ನೀಡಿರುವ ಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್ಗೋಸ್ಕರ 7 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಕರ್ನಾಟಕದ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಆರ್ಸಿಬಿಯಿಂದ ಹೊರ ಬಿದ್ದಿದ್ದಾರೆ.
ಇದನ್ನೂ ಓದಿರಿ: ಐಪಿಎಲ್ ರಿಟೆನ್ಷನ್ : ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು, ಪಡೆದ ಹಣದ ಸಂಪೂರ್ಣ ವಿವರ ಇಲ್ಲಿದೆ
ಸಿರಾಜ್ ಕಳೆದ ಮೂರು ವರ್ಷಗಳಿಂದ ಆರ್ಸಿಬಿಯಲ್ಲಿ ಆಡುತ್ತಿದ್ದಾರೆ. ಮೊದಲ ಆವೃತ್ತಿಯಲ್ಲಿ ದುಬಾರಿಯಾದರೂ ಕಳೆದ 2 ಆವೃತ್ತಿಗಳಲ್ಲಿ ಸಿರಾಜ್ ಆರ್ಸಿಬಿಯ ಅಗ್ರ ಹಾಗೂ ಎಕನಾಮಿಕಲ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 2021ರ ಆವೃತ್ತಿಯಲ್ಲಿ 6.78ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದರು. 2021ರ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಗಮನ ಸೆಳೆದಿದ್ದ ಹರ್ಷಲ್ ಪಟೇಲ್ ಅವರನ್ನೂ ಆರ್ಸಿಬಿ ಕೈಬಿಟ್ಟಿದೆ.