ಬೆಂಗಳೂರು: ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ 2ನೇ ದಿನದ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್, ಗುಜರಾತ್ ಲಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಭಾರಿ ಪೈಪೋಟಿ ನಡೆಸಿದವು. ಕೊನೆಗೆ ಪಂಜಾಬ್ ಕಿಂಗ್ಸ್ ಸ್ಫೋಟಕ ಆಟಗಾರನನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
1 ಕೋಟಿ ರೂ ಮೂಲಬೆಲೆ ಹೊಂದಿದ್ದ ಲಿವಿಂಗ್ಸ್ಟೋನ್ ಅವರನ್ನು ಕಿಂಗ್ಸ್ 11.50 ಕೋಟಿ ರೂ ನೀಡಿ ಖರೀದಿಸಿತು. ಲಿವಿಂಗ್ಸ್ಟೋನ್ ಕಳೆದ ವರ್ಷ ಕೇವಲ 75 ಲಕ್ಷ ರೂ.ಗಳಿಗೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಸಂಪೂರ್ಣ ಲೀಗ್ಗೆ ಲಭ್ಯರಿರುವುದರಿಂದ ಅವರನ್ನು ಕೊಳ್ಳುವುದಕ್ಕೆ ಭರ್ಜರಿ ಪೈಪೋಟಿ ನಡೆಯಿತು.
ಲಿವಿಂಗ್ಸ್ಟೋನ್ 164 ಟಿ20 ಪಂದ್ಯಗಳನ್ನಾಡಿದ್ದು 2 ಶತಕ ಮತ್ತು 23 ಅರ್ಧಶತಕಗಳ ಸಹಿತ 4095 ರನ್ ಮತ್ತು 67 ವಿಕೆಟ್ ಪಡೆದಿದ್ದಾರೆ. ಪಂಜಾಬ್ ಫ್ರಾಂಚೈಸಿ ಕನ್ನಡಿಗ ಮಯಾಂಕ್ ಅಗರ್ವಾಲ್ರನ್ನು 14 ಕೋಟಿ ರೂ ಮತ್ತು ಅರ್ಶ್ದೀಪ್ ಸಿಂಗ್ರನ್ನು 4 ಕೋಟಿ ರೂಗಳಿಗೆ ರಿಟೈನ್ ಮಾಡಿಕೊಂಡಿದೆ.
ಪಂಜಾಬ್ ಕಿಂಗ್ಸ್ ಖರೀದಿಸಿರುವ ಆಟಗಾರರ ಪಟ್ಟಿ:
- ರಾಹುಲ್ ಚಹಾರ್ -ಭಾರತೀಯ ಬೌಲರ್- ₹5,25,00,000
- ಪ್ರಭಾಸಿಮ್ರಾನ್ -ಸಿಂಗ್ ಭಾರತೀಯ ವಿಕೆಟ್ ಕೀಪರ್ -₹60,00,000
- ಜಿತೇಶ್ ಶರ್ಮಾ- ಭಾರತೀಯ ವಿಕೆಟ್ ಕೀಪರ್- ₹20,00,000
- ಶಾರುಖ್ ಖಾನ್ -ಭಾರತೀಯ ಆಲ್ ರೌಂಡರ್- ₹9,00,00,000
- ಕಗಿಸೊ ರಬಾಡ- ವಿದೇಶಿ ಬೌಲರ್- ₹9,25,00,000
- ಹರ್ಪ್ರೀತ್ ಬ್ರಾರ್- ಭಾರತೀಯ ಆಲ್ರೌಂಡರ್- ₹3,80,00,000
- ಇಶಾನ್ ಪೊರೆಲ್- ಭಾರತೀಯ ಬೌಲರ್- ₹25,00,000
- ಶಿಖರ್ ಧವನ್- ಭಾರತೀಯ ಬ್ಯಾಟ್ಸ್ಮನ್ -₹8,25,00,000
- ಲಿಯಾಮ್ ಲಿವಿಂಗ್ಸ್ಟೋನ್- ವಿದೇಶಿ ಆಲ್ ರೌಂಡರ್- ₹11,50,00,000
- ಜಾನಿ ಬೈರ್ಸ್ಟೋವ್- ವಿದೇಶಿ ವಿಕೆಟ್ ಕೀಪರ್- ₹6,75,00,000
ಇದನ್ನೂ ಓದಿ:
ಮೂಲ ಬೆಲೆಗಿಂತಲೂ 22 ಪಟ್ಟು ಅಧಿಕ ಮೊತ್ತಕ್ಕೆ ಬಿಕರಿಯಾದ ಅನ್ಕ್ಯಾಪ್ಡ್ ಶಾರುಖ್ ಖಾನ್!
ಐಪಿಎಲ್ ಮೆಗಾ ಹರಾಜು: ಯಾವ ತಂಡಕ್ಕೆ ಯಾವ ಪ್ಲೇಯರ್... ಇಲ್ಲಿದೆ ಸಂಪೂರ್ಣ ಲಿಸ್ಟ್