ETV Bharat / sports

ವಿಂಡೀಸ್​ ಸ್ಟಾರ್​ ​​ಒಡಿಯನ್​ ಸ್ಮಿತ್​​ಗೆ ಬಂಪರ್ ಲಾಟರಿ: ₹6 ಕೋಟಿಗೆ ಪಂಜಾಬ್ ಪಾಲು - ಪಂಜಾಬ್ ಕಿಂಗ್ಸ್ ಒಡಿಯನ್ ಸ್ಮಿತ್​

25 ವರ್ಷದ ಒಡಿಯನ್​ ಸ್ಮಿತ್​ 33 ಟಿ20 ಪಂದ್ಯಗಳನ್ನಾಡಿದ್ದು 8.9ರ ಎಕಾನಮಿಯಲ್ಲಿ 36 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿ 124ರ ಸ್ಟ್ರೈಕ್​ರೇಟ್​ನಲ್ಲಿ 542 ರನ್​ಗಳಿಸಿದ್ದಾರೆ.

west Indies star Odean Smith joins Punjab Kings for Rs 6 crore
ವೆಸ್ಟ್​ ಇಂಡೀಸ್ ತಂಡದ ಒಡಿಯನ್ ಸ್ಮಿತ್ ಪಂಜಾಬ್​ ಕಿಂಗ್ಸ್
author img

By

Published : Feb 13, 2022, 1:19 PM IST

ಬೆಂಗಳೂರು: ಇತ್ತೀಚೆಗೆ ಮುಗಿದ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಆಲ್​ರೌಂಡರ್​ ಪ್ರದರ್ಶನ ತೋರಿದ್ದ ವಿಂಡೀಸ್​ ಬೌಲರ್‌ನನ್ನು ಪಂಜಾಬ್​ ಕಿಂಗ್ಸ್​ ತಂಡ ಬರೋಬ್ಬರಿ 6 ಕೋಟಿ ರೂ ನೀಡಿ ಖರೀದಿಸಿದೆ.

ವೇಗದ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬೌಂಡರಿ ಮತ್ತು ಸಿಕ್ಸರ್​ಗಳ ಮೂಲಕ ವೇಗವಾಗಿ ರನ್‌ ಗಳಿಸುವ ಸಾಮರ್ಥ್ಯ ಹೊಂದಿರುವ ಸ್ಮಿತ್, ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿ ಮತ್ತು ಇತ್ತೀಚಿಗೆ ಭಾರತ ಪ್ರವಾಸದಲ್ಲಿ ಆಲ್​ರೌಂಡರ್​ ಆಟದ ಮೂಲಕ ಗಮನ ಸೆಳೆದಿದ್ದರು. ಈ ವಿಂಡೀಸ್ ದೈತ್ಯನ ಖರೀದಿಗಾಗಿ ಪಂಜಾಬ್ ಕಿಂಗ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿಗಳು ಪೈಪೋಟಿ ನಡೆಸಿದವಾದರೂ ಕೊನೆಗೆ ಬಿಡ್​ನಲ್ಲಿ ಪಂಜಾಬ್ ಜಯಶಾಲಿಯಾಯಿತು. ಈಗಾಗಲೇ ಇಂಗ್ಲೆಂಡ್​ ಆಲ್​ರೌಂಡರ್​ ಲಿಯಾಮ್ ಲಿವಿಂಗ್​ಸ್ಟೋನ್​ರನ್ನು ಕೂಡ ಭಾರಿ ಪೈಪೋಟಿ ನೀಡಿ 11.50 ಕೋಟಿ ರೂಗಳಿಗೆ ಖರೀದಿಸಿದೆ.

25 ವರ್ಷದ ಒಡಿಯನ್​ ಸ್ಮಿತ್​ 33 ಟಿ20 ಪಂದ್ಯಗಳನ್ನಾಡಿದ್ದು 8.9ರ ಎಕಾನಮಿಯಲ್ಲಿ 36 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿ 124ರ ಸ್ಟ್ರೈಕ್​ರೇಟ್​ನಲ್ಲಿ 542 ರನ್​ಗಳಿಸಿದ್ದಾರೆ.

ಪಂಜಾಬ್ ಕಿಂಗ್ಸ್​ ಖರೀದಿಸಿರುವ ಆಟಗಾರರ ಪಟ್ಟಿ:

  • ರಾಹುಲ್ ಚಹಾರ್ -ಭಾರತೀಯ ಬೌಲರ್- ₹5,25,00,000
  • ಪ್ರಭಾಸಿಮ್ರಾನ್ -ಸಿಂಗ್ ಭಾರತೀಯ ವಿಕೆಟ್ ಕೀಪರ್ -₹60,00,000
  • ಜಿತೇಶ್ ಶರ್ಮಾ- ಭಾರತೀಯ ವಿಕೆಟ್ ಕೀಪರ್- ₹20,00,000
  • ಶಾರುಖ್ ಖಾನ್ -ಭಾರತೀಯ ಆಲ್ ರೌಂಡರ್- ₹9,00,00,000
  • ಕಗಿಸೊ ರಬಾಡ- ವಿದೇಶಿ ಬೌಲರ್- ₹9,25,00,000
  • ಹರ್‌ಪ್ರೀತ್ ಬ್ರಾರ್- ಭಾರತೀಯ ಆಲ್‌ರೌಂಡರ್- ₹3,80,00,000
  • ಇಶಾನ್ ಪೊರೆಲ್- ಭಾರತೀಯ ಬೌಲರ್- ₹25,00,000
  • ಶಿಖರ್ ಧವನ್- ಭಾರತೀಯ ಬ್ಯಾಟ್ಸ್‌ಮನ್ -₹8,25,00,000
  • ಲಿಯಾಮ್ ಲಿವಿಂಗ್‌ಸ್ಟೋನ್- ವಿದೇಶಿ ಆಲ್ ರೌಂಡರ್- ₹11,50,00,000
  • ಜಾನಿ ಬೈರ್‌ಸ್ಟೋವ್- ವಿದೇಶಿ ವಿಕೆಟ್ ಕೀಪರ್- ₹6,75,00,000
  • ಒಡಿಯನ್ ಸ್ಮಿತ್​- ವಿದೇಶಿ ಬೌಲರ್​- ₹6,00,00,000

ಇದನ್ನೂ ಓದಿ:

IPL: 2ನೇ ದಿನ ಲಿವಿಂಗ್​ಸ್ಟೋನ್​ಗೆ ಜಾಕ್​ಪಾಟ್; 11.5 ಕೋಟಿ ರೂಗೆ ಖರೀದಿಸಿದ ಪಂಜಾಬ್​

ಪಾದರಕ್ಷೆ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯ ಮಗನ ಅದೃಷ್ಟ; IPLನಲ್ಲಿ ₹2.60 ಕೋಟಿಗೆ ಹರಾಜಾದ ಕನ್ನಡಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.