ಮುಂಬೈ (ಮಹಾರಾಷ್ಟ್ರ) : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2023ರ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 31ರಂದು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಸೆಣಸಲಿದೆ.
ಟೂರ್ನಿಯ ಎರಡನೇ ದಿನವಾದ ಏಪ್ರಿಲ್ 1ರಂದು ಎರಡು ಪಂದ್ಯವಿದೆ. ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ, ಲಖನೌ ಸೂಪರ್ ಜೈಂಟ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಏಪ್ರಿಲ್ 2ರಂದು ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಪೈಪೋಟಿ ನಡೆಸಲಿವೆ. ಮತ್ತೊಂದು ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ಎದುರಿಸಲಿದೆ.
2022ರ ಐಪಿಎಲ್ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ವರ್ಷ 12 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಹತ್ತು ತಂಡಗಳ ತವರು ನೆಲಗಳ ಜೊತೆಗೆ ಧರ್ಮಶಾಲಾ ಮತ್ತು ಗುವಾಹಟಿಯಲ್ಲೂ ಪಂದ್ಯಗಳು ನಿಗದಿಯಾಗಿವೆ.
-
That's how excited we are! 🫂
— Chennai Super Kings (@ChennaiIPL) February 17, 2023 " class="align-text-top noRightClick twitterSection" data="
🚁 Liftoff - March 3️⃣1️⃣#TATAIPL #WhistlePodu 🦁💛 pic.twitter.com/Vf7yfQkA7b
">That's how excited we are! 🫂
— Chennai Super Kings (@ChennaiIPL) February 17, 2023
🚁 Liftoff - March 3️⃣1️⃣#TATAIPL #WhistlePodu 🦁💛 pic.twitter.com/Vf7yfQkA7bThat's how excited we are! 🫂
— Chennai Super Kings (@ChennaiIPL) February 17, 2023
🚁 Liftoff - March 3️⃣1️⃣#TATAIPL #WhistlePodu 🦁💛 pic.twitter.com/Vf7yfQkA7b
ಐಪಿಲ್ ವೇಳಾಪಟ್ಟಿಯನ್ನು ಪ್ರಕಟಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ, 12 ಸ್ಥಳಗಳಲ್ಲಿ 52 ದಿನಗಳ ಕಾಲ ಒಟ್ಟು 70 ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 16ನೇ ಆವೃತ್ತಿಯು ಗುಜರಾತ್ ಟೈಟಾನ್ಸ್- ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
-
🚨 NEWS 🚨: BCCI announces schedule for TATA IPL 2023. #TATAIPL
— IndianPremierLeague (@IPL) February 17, 2023 " class="align-text-top noRightClick twitterSection" data="
Find All The Details 🔽https://t.co/hxk1gGZd8I
">🚨 NEWS 🚨: BCCI announces schedule for TATA IPL 2023. #TATAIPL
— IndianPremierLeague (@IPL) February 17, 2023
Find All The Details 🔽https://t.co/hxk1gGZd8I🚨 NEWS 🚨: BCCI announces schedule for TATA IPL 2023. #TATAIPL
— IndianPremierLeague (@IPL) February 17, 2023
Find All The Details 🔽https://t.co/hxk1gGZd8I
ನಂತರದಲ್ಲಿ ಒಂದೇ ದಿನದಲ್ಲಿ ಎರಡು ಪಂದ್ಯಗಳು ಜರುಗಲಿದೆ. ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ ನಡೆದರೆ, ಸಂಜೆ 07.30ಕ್ಕೆ ಎರಡನೇ ಪಂದ್ಯ ಆರಂಭವಾಗಲಿದೆ. ರಾಜಸ್ಥಾನ ರಾಯಲ್ಸ್ ತಮ್ಮ ಮೊದಲ ಎರಡು ಪಂದ್ಯಗಳನ್ನು ಗುವಾಹಟಿಯಲ್ಲಿ ಆಡಲಿದೆ. ಉಳಿದ ಪಂದ್ಯಗಳು ತವರು ನೆಲ ಜೈಪುರದಲ್ಲಿ ನಡೆಯಲಿವೆ.
-
𝐑𝐂𝐁’𝐬 𝐈𝐏𝐋 𝟐𝟎𝟐𝟑 𝐅𝐢𝐱𝐭𝐮𝐫𝐞𝐬:
— Royal Challengers Bangalore (@RCBTweets) February 17, 2023 " class="align-text-top noRightClick twitterSection" data="
The moment we've all been waiting for. The summer of '23 is officially a go! 🙌 🔥#PlayBold #WeAreChallengers #IPL2023 pic.twitter.com/QOGEusHIYK
">𝐑𝐂𝐁’𝐬 𝐈𝐏𝐋 𝟐𝟎𝟐𝟑 𝐅𝐢𝐱𝐭𝐮𝐫𝐞𝐬:
— Royal Challengers Bangalore (@RCBTweets) February 17, 2023
The moment we've all been waiting for. The summer of '23 is officially a go! 🙌 🔥#PlayBold #WeAreChallengers #IPL2023 pic.twitter.com/QOGEusHIYK𝐑𝐂𝐁’𝐬 𝐈𝐏𝐋 𝟐𝟎𝟐𝟑 𝐅𝐢𝐱𝐭𝐮𝐫𝐞𝐬:
— Royal Challengers Bangalore (@RCBTweets) February 17, 2023
The moment we've all been waiting for. The summer of '23 is officially a go! 🙌 🔥#PlayBold #WeAreChallengers #IPL2023 pic.twitter.com/QOGEusHIYK
ಪಂಜಾಬ್ ಕಿಂಗ್ಸ್ ತಂಡದ ತನ್ನ ಐದು ಐದು ಪಂದ್ಯಗಳನ್ನು ತವರು ಮೊಹಾಲಿಯಲ್ಲಿ ಆಡಲಿದೆ. ನಂತರದ ಎರಡು ಪಂದ್ಯಗಳನ್ನು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಎದುರಿಸಲಿದೆ. ಪ್ಲೇಆಫ್‌ಗಳು ಮತ್ತು ಫೈನಲ್‌ನ ವೇಳಾಪಟ್ಟಿ ಮತ್ತು ಸ್ಥಳಗಳನ್ನು ನಂತರದಲ್ಲಿ ಪ್ರಕಟಿಸಲಾಗುವುದು. ಆದರೆ, ಮೇ 28ರಂದು ಐಪಿಎಲ್ನ ಫೈನಲ್ ಪಂದ್ಯ ಜರುಗಲಿದೆ ಎಂದು ಜಯ್ ಶಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಅಶ್ವಿನ್ ವಿಕೆಟ್‌ಗಳ 'ಸೆಂಚುರಿ'; ಜಡೇಜಾ 250 ವಿಕೆಟ್ ಪಾರಮ್ಯ!