ಇಂಡಿಯನ್ ಪ್ರೀಮಿಯರ್ ಲೀಗ್ 2023 ಆರಂಭಕ್ಕೆ ಇನ್ನೂ ಆರು ತಿಂಗಳು ಇರುವಾಗಲೇ ತಂಡಗಳ ಲೆಕ್ಕಾಚಾರ ಶುರುವಾಗಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನ ಪೂರ್ವಭಾವಿ ಸಿದ್ಧತೆ ಭರದಿಂದ ಸಾಗಿದೆ. ವಾರ್ಷಿಕ ಪರಿಷ್ಕರಣೆ ಭಾಗವಾಗಿ, ಎಲ್ಲ 10 ಫ್ರಾಂಚೈಸಿಗಳು ಕೆಲ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧರಿಸಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಜೇಸನ್ ಬೆಹ್ರೆಂಡಾರ್ಫ್, ಅನೀಶ್ವರ್ ಗೌತಮ್, ಚಾಮ ಮಿಲಿಂದ್, ಲುವ್ನಿತ್ ಸಿಸೋಡಿಯಾ, ಶೆರ್ಫೇನ್ ರುದರ್‌ಫೋರ್ಡ್ ಅವರನ್ನು ಕೈಬಿಡಲಾಗಿದೆ. ಮುಂಬೈ ಇಂಡಿಯನ್ಸ್ ಒಟ್ಟು 12 ಕ್ರಿಕೆಟಿಗರನ್ನು ಬಿಡುಗಡೆ ಮಾಡಿದ್ದು, ಐಪಿಎಲ್ನಿಂದ ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ. ಈ ಸಲದ ವಿಶೇಷವೆಂದರೆ, ಸನ್‌ರೈಸರ್ಸ್ ಹೈದರಾಬಾದ್‌ನಿಂದ ಕೇನ್ ವಿಲಿಯಮ್ಸನ್, ಪಂಜಾಬ್ ಕಿಂಗ್ಸ್‌ನಿಂದ ಮಯಾಂಕ್ ಅಗರ್ವಾಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಡ್ವೇನ್ ಬ್ರಾವೋ ಅವರನ್ನು ಕೈಬಿಡಲಾಗಿದೆ.
10 ಫ್ರಾಂಚೈಸಿಗಳು ಒಟ್ಟಾರೆ 87 ಆಟಗಾರರನ್ನು ಬಿಡುಗಡೆ ಮಾಡಿವೆ. ತಂಡಗಳ ಮರುಹೊಂದಾಣಿಕೆ ಮತ್ತು ಲಭ್ಯವಿರುವ ಹಣದಿಂದ ಹರಾಜಿನಲ್ಲಿ ಮತ್ತೆ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ಆಯಾ ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಮತ್ತು ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.
- ಚೆನ್ನೈ ಸೂಪರ್ ಕಿಂಗ್ಸ್: ಬಿಡುಗಡೆಯಾದ ಆಟಗಾರರು: ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಆಡಮ್ ಮಿಲ್ನೆ, ಹರಿ ನಿಶಾಂತ್, ಕ್ರಿಸ್ ಜೋರ್ಡನ್, ಭಗತ್ ವರ್ಮಾ, ಕೆಎಂ ಆಸಿಫ್, ನಾರಾಯಣ್ ಜಗದೀಸನ್
ತಂಡದಲ್ಲಿ ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಶಾನ ದೇಶಪಾಂಡೆ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 2, ಉಳಿದಿರುವ ಹಣ: 20.45 ಕೋಟಿ
- ಮುಂಬೈ ಇಂಡಿಯನ್ಸ್: ಬಿಡುಗಡೆಯಾದ ಆಟಗಾರರು: ಕೀರನ್ ಪೊಲಾರ್ಡ್, ಅನ್ಮೋರ್ಪ್ರೀತ್ ಸಿಂಗ್, ಆರ್ಯನ್ ಜುಯಲ್, ಬೇಸಿಲ್ ಥಂಪಿ, ಡೇನಿಯಲ್ ಸಾಮ್ಸ್, ಫ್ಯಾಬಿಯನ್ ಅಲೆನ್, ಜಯದೇವ್ ಉನದ್ಕಟ್, ಮಯಾಂಕ್ ಮಾರ್ಕಾಂಡೆ, ಮುರುಗನ್ ಅಶ್ವಿನ್, ರಾಹುಲ್ ಬುದ್ಧಿ, ರಿಲೆ ಮೆರೆಡಿತ್, ಸಂಜಯ್ ಯಾದವ್, ಟೈಮಲ್ ಮಿಲ್ಸ್
ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಲ್
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 3, ಉಳಿದಿರುವ ಹಣ: 20.55 ಕೋಟಿ
- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಬಿಡುಗಡೆಯಾದ ಆಟಗಾರರು: ಜೇಸನ್ ಬೆಹ್ರೆಂಡಾರ್ಫ್, ಅನೀಶ್ವರ್ ಗೌತಮ್, ಚಾಮ ಮಿಲಿಂದ್, ಲುವ್ನಿತ್ ಸಿಸೋಡಿಯಾ, ಶೆರ್ಫೇನ್ ರುದರ್‌ಫೋರ್ಡ್
-
Believe in the core!
— Royal Challengers Bangalore (@RCBTweets) November 15, 2022 " class="align-text-top noRightClick twitterSection" data="
12th Man Army, here are our 𝗿𝗲𝘁𝗮𝗶𝗻𝗲𝗱 𝗥𝗼𝘆𝗮𝗹 𝗖𝗵𝗮𝗹𝗹𝗲𝗻𝗴𝗲𝗿𝘀 who will be a part of RCB’s #Classof2023!#PlayBold #WeAreChallengers pic.twitter.com/aQCnh2K66E
">Believe in the core!
— Royal Challengers Bangalore (@RCBTweets) November 15, 2022
12th Man Army, here are our 𝗿𝗲𝘁𝗮𝗶𝗻𝗲𝗱 𝗥𝗼𝘆𝗮𝗹 𝗖𝗵𝗮𝗹𝗹𝗲𝗻𝗴𝗲𝗿𝘀 who will be a part of RCB’s #Classof2023!#PlayBold #WeAreChallengers pic.twitter.com/aQCnh2K66EBelieve in the core!
— Royal Challengers Bangalore (@RCBTweets) November 15, 2022
12th Man Army, here are our 𝗿𝗲𝘁𝗮𝗶𝗻𝗲𝗱 𝗥𝗼𝘆𝗮𝗹 𝗖𝗵𝗮𝗹𝗹𝗲𝗻𝗴𝗲𝗿𝘀 who will be a part of RCB’s #Classof2023!#PlayBold #WeAreChallengers pic.twitter.com/aQCnh2K66E
-
ತಂಡದಲ್ಲಿ ಉಳಿಸಿಕೊಂಡ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಮಹಿ ಕರ್ನ್ ಲೋಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 2, ಉಳಿದಿರುವ ಹಣ: 8.75 ಕೋಟಿ
- ಸನ್ ರೈಸರ್ಸ್ ಹೈದರಾಬಾದ್: ಬಿಡುಗಡೆಯಾದ ಆಟಗಾರರು: ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಪ್ರಿಯಂ ಗರ್ಗ್, ರವಿಕುಮಾರ್ ಸಮರ್ಥ್, ರೊಮಾರಿಯೋ ಶೆಫರ್ಡ್, ಸೌರಭ್ ದುಬೆ, ಸೀನ್ ಅಬಾಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್
ಉಳಿಸಿಕೊಂಡ ಆಟಗಾರರು: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 4, ಉಳಿದಿರುವ ಹಣ: 42.25 ಕೋಟಿ
- ದೆಹಲಿ ಕ್ಯಾಪಿಟಲ್ಸ್: ಬಿಡುಗಡೆಯಾದ ಆಟಗಾರರು: ಶಾರ್ದೂಲ್ ಠಾಕೂರ್, ಟಿಮ್ ಸೀಫರ್ಟ್, ಅಶ್ವಿನ್ ಹೆಬ್ಬಾರ್, ಕೆಎಸ್ ಭರತ್, ಮನದೀಪ್ ಸಿಂಗ್
ಉಳಿಸಿಕೊಂಡ ಆಟಗಾರರು: ರಿಷಬ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಚ್ ನೋಕಿಯಾ, ಚೇತನ್ ಸಕಾರಿಯಾ, ಕಮಲೇಶ್ ನಾಗರಕೋಟಿ, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಒಸ್ತ್ವಾಲ್
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 2, ಉಳಿದಿರುವ ಹಣ: 19.45 ಕೋಟಿ
- ರಾಜಸ್ಥಾನ್ ರಾಯಲ್ಸ್: ಬಿಡುಗಡೆಯಾದ ಆಟಗಾರರು: ಅನುನಯ್ ಸಿಂಗ್, ಕಾರ್ಬಿನ್ ಬಾಷ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಕರುಣ್ ನಾಯರ್, ನಾಥನ್ ಕೌಲ್ಟರ್ ನೈಲ್, ರಸ್ಸಿ ವ್ಯಾನ್ ಡೆರ್ ಡುಸ್ಸೆನ್, ಶುಭಂ ಗರ್ವಾಲ್, ತೇಜಸ್ ಬರೋಕಾ
ಉಳಿಸಿಕೊಂಡ ಆಟಗಾರರು: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಓಬೇದ್ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲ್ದೀಪ್ ಯಾದವ್, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್, ಕೆಸಿ ಕಾರಿಯಪ್ಪ
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 4, ಉಳಿದಿರುವ ಹಣ: 13.2 ಕೋಟಿ
- ಲಕ್ನೋ ಸೂಪರ್ ಜೈಂಟ್ಸ್: ಬಿಡುಗಡೆಯಾದ ಆಟಗಾರರು: ಆಂಡ್ರ್ಯೂ ಟೈ, ಅಂಕಿತ್ ರಾಜ್‌ಪೂತ್, ದುಷ್ಮಂತ ಚಮೀರಾ, ಎವಿನ್ ಲೂಯಿಸ್, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಶಹಬಾಜ್ ನದೀಮ್
ಉಳಿಸಿಕೊಂಡಿರುವ ಆಟಗಾರರು: ಕೆಎಲ್ ರಾಹುಲ್ (ನಾಯಕ), ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 4, ಉಳಿದ ಹಣ: 23.35 ಕೋಟಿ
- ಗುಜರಾತ್ ಟೈಟಾನ್ಸ್: ಬಿಡುಗಡೆಯಾದ ಆಟಗಾರರು: ರಹಮಾನುಲ್ಲಾ ಗುರ್ಬಾಜ್, ಲಾಕಿ ಫರ್ಗುಸನ್, ಡೊಮಿನಿಕ್ ಡ್ರೇಕ್ಸ್, ಗುರುಕೀರತ್ ಸಿಂಗ್, ಜೇಸನ್ ರಾಯ್, ವರುಣ್ ಆರನ್
ಉಳಿಸಿಕೊಂಡ ಆಟಗಾರರು: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಲ್, ಪ್ರದೀಪ್ ದಯಾಲ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 3, ಉಳಿದ ಹಣ: 19.25 ಕೋಟಿ
- ಕೋಲ್ಕತ್ತಾ ನೈಟ್ ರೈಡರ್ಸ್: ಬಿಡುಗಡೆಯಾದ ಆಟಗಾರರು: ಪ್ಯಾಟ್ ಕಮಿನ್ಸ್, ಸ್ಯಾಮ್ ಬಿಲ್ಲಿಂಗ್ಸ್, ಅಮನ್ ಖಾನ್, ಶಿವಂ ಮಾವಿ, ಮೊಹಮ್ಮದ್ ನಬಿ, ಚಾಮಿಕಾ ಕರುಣರತ್ನೆ, ಆರೋನ್ ಫಿಂಚ್, ಅಲೆಕ್ಸ್ ಹೇಲ್ಸ್, ಅಭಿಜೀತ್ ತೋಮರ್, ಅಜಿಂಕ್ಯ ರಹಾನೆ, ಅಶೋಕ್ ಶರ್ಮಾ, ಬಾಬಾ ಇಂದ್ರಜಿತ್, ಪ್ರಥಮ್ ಸಿಂಗ್, ರಮೇಶ್ ಕುಮಾರ್, ರಸಿಖ್ ಸಲಾಮ್, ಶೆಲ್ಡನ್
ತಂಡದಲ್ಲಿ ಉಳಿದ ಆಟಗಾರರು: ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನೀಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ಸಿಂಗ್ ರಾಣಾ, ಆರ್ ವರುಣ್ ಚಕ್ರವರ್ತಿ, ಅನುಕುಲ್ ರಾಯ್, ರಿಂಕು ಸಿಂಗ್
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 3, ಉಳಿದ ಹಣ: 7.05 ಕೋಟಿ
- ಪಂಜಾಬ್ ಕಿಂಗ್ಸ್: ಬಿಡುಗಡೆಯಾದ ಆಟಗಾರರು: ಮಯಾಂಕ್ ಅಗರ್ವಾಲ್, ಓಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ರಿಟಿಕ್ ಚಟರ್ಜಿ
ಉಳಿಸಿಕೊಂಡ ಆಟಗಾರರು: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ಬಾಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೋ ರಬಾಡ, ರಾಹುಲ್ ಚಹರ್, ಹರ್ಪ್ರೀತ್ ಬ್ರಾರ್
ಸಾಗರೋತ್ತರ ಆಟಗಾರರಿಗೆ ಉಳಿದ ಅವಕಾಶ: 3, ಉಳಿದ ಹಣ: 32.2 ಕೋಟಿ
ಇದನ್ನೂ ಓದಿ: ಭರತ್, ನೀರಜ್ ಅಬ್ಬರ: ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಬೃಹತ್ ಗೆಲುವು