ETV Bharat / sports

ಟಿ20 ವಿಶ್ವಕಪ್​ಗೆ ಫಿನಿಶರ್ ಹುಡುಕಾಟ: ಭಾರತ ತಂಡಕ್ಕೆ 'ಡಿಕೆ' ಪರಿಹಾರವಾಗಬಲ್ಲರೇ? - ಭಾರತ ತಂಡದ ಫಿನಿಶರ್ ದಿನೇಶ್ ಕಾರ್ತಿಕ್

2022ರ ಐಪಿಎಲ್​ನಲ್ಲಿ ದಿನೇಶ್ ಕಾರ್ತಿಕ್​ ಕ್ರಮವಾಗಿ 32(14), 14(7), 44(23), 7(2) ಹಾಗೂ 34(14) ರನ್​ಗಳಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಮಾತ್ರ ಅವರು ವಿಕೆಟ್ ಒಪ್ಪಿಸಿದ್ದರೆ, ಉಳಿದೆಲ್ಲಾ ಪಂದ್ಯಗಳಲ್ಲೂ ಅಜೇಯರಾಗುಳಿದಿದ್ದಾರೆ. ಒಟ್ಟಾರೆ 218ರ ಸ್ಟ್ರೈಕ್​ ರೇಟ್​​ನಲ್ಲಿ 131 ರನ್​ ಅವರ ಬ್ಯಾಟ್‌ನಿಂದ ಹರಿದುಬಂದಿದೆ.

Dinesh Karthik
ದಿನೇಶ್ ಕಾರ್ತಿಕ್ ಫಿನಿಶರ್
author img

By

Published : Apr 14, 2022, 5:29 PM IST

ಮುಂಬೈ: ದಿನೇಶ್​ ಕಾರ್ತಿಕ್(ಡಿಕೆ) 15ನೇ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇದೇ ವರ್ಷ ರೋಹಿತ್ ಶರ್ಮಾ ನೇತೃತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಪುನರ್​ ನಿರ್ಮಾಣಗೊಳ್ಳುವ ತಂಡದಲ್ಲಿ ಅವಕಾಶ ಪಡೆಯಲು ಈ ತಮಿಳುನಾಡು ಕ್ರಿಕೆಟಿಗ ಸಮರ್ಥರು ಎಂಬ ಚರ್ಚೆಗಳು ನಡೆಯಲಾರಂಭಿಸಿವೆ.

2022ರ ಐಪಿಎಲ್​ನಲ್ಲಿ ದಿನೇಶ್ ಕಾರ್ತಿಕ್​ ಕ್ರಮವಾಗಿ 32(14), 14(7), 44(23), 7(2) ಹಾಗೂ 34(14) ರನ್​ಗಳಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಮಾತ್ರ ಅವರು ವಿಕೆಟ್ ಒಪ್ಪಿಸಿದ್ದರೆ, ಉಳಿದೆಲ್ಲಾ ಪಂದ್ಯಗಳಲ್ಲೂ ಅವರದ್ದು ಅಜೇಯ ಆಟ. ಡಿಕೆ, ಒಟ್ಟಾರೆ 5 ಪಂದ್ಯಗಳಿಂದ 218ರ ಸ್ಟ್ರೈಕ್​ ರೇಟ್​​ನಲ್ಲಿ 131 ರನ್​ಗಳಿಸಿದ್ದಾರೆ.

ಸಿಎಸ್​ಕೆ ವಿರುದ್ಧ ಒಂದು ಕಡೆ ವಿಕೆಟ್​ ಉರುಳುತ್ತಿದ್ದರೂ ಅವರು 242ರ ಸ್ಟ್ರೈಕ್​ರೇಟ್​​ನಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಮಾಡಿದ್ದರು. ತಂಡ 8 ವಿಕೆಟ್ ಕಳೆದುಕೊಂಡಿದ್ದರೂ ಕೂಡಾ ಅಭಿಮಾನಿಗಳು ಗೆಲುವಿನ ಆಸೆ ಇಟ್ಟುಕೊಳ್ಳುವಂತೆ ಮಾಡಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧವೂ 170 ರನ್​ ಚೇಸ್​ ಮಾಡುವಾಗ ತಂಡ 80ಕ್ಕೆ 5 ವಿಕೆಟ್ ಕಳೆದುಕೊಂಡಿದ್ದರೂ ಯುವ ಆಟಗಾರರ ಜೊತೆಯಾಗಿ ಆಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ಈ ಅದ್ಭುತ ಪ್ರದರ್ಶನವೇ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಫಿನಿಶರ್ ಆಗಿ ಆಡುವುದಕ್ಕೆ ಅರ್ಹರು ಎನ್ನುವುದನ್ನು ತೋರಿಸುತ್ತಿದೆ.

2006ರಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತದ ಪರ 32 ಟಿ20 ಪಂದ್ಯಗಳನ್ನಾಡಿದ್ದಾರೆ. 218 ಐಪಿಎಲ್ ಪಂದ್ಯಗಳನ್ನಾಡಿರುವ ಅವರು ನಾಯಕತ್ವದ ಅನುಭವವನ್ನು ಹೊಂದಿದ್ದಾರೆ.

ಪ್ರಸ್ತುತ ಭಾರತ ತಂಡದಲ್ಲಿ ಎಂ.ಎಸ್.ಧೋನಿಯ ನಂತರ ಒಳ್ಳೆಯ ಫಿನಿಶರ್ ದೊರೆಯುತ್ತಿಲ್ಲ ಎಂದು ನಾಯಕ ರೋಹಿತ್ ಶರ್ಮಾ ಈಗಾಗಲೇ ಹೇಳಿದ್ದಾರೆ. ಹಾಗಾಗಿ ವಿಶ್ವಕಪ್​ನಂತಹ ಟೂರ್ನಿಗೆ ಹೋಗುವಾಗ ಅನನುಭವಿ ಆಟಗಾರರಿಗೆ ಮಣೆ ಹಾಕುವುದಕ್ಕಿಂತ ಅನುಭವಿ ಮತ್ತು ಫಿನಿಶಿಂಗ್ ಕಲೆ ಮತ್ತು ಸಾಮರ್ಥ್ಯ ಹೊಂದಿರುವ ದಿನೇಶ್ ಕಾರ್ತಿಕ್​ಗೆ ಮತ್ತೊಂದು ಅವಕಾಶ ನೀಡಿದರೆ ತಂಡಕ್ಕೆ ಹೆಚ್ಚು ಅನುಕೂಲ ಎನ್ನುವುದು ಕೂಡ ಕ್ರಿಕೆಟ್ ತಜ್ಞರ ಅಭಿಪ್ರಾಯ.

ಇದನ್ನೂ ಓದಿ:₹8 ಕೋಟಿ ಕೊಟ್ಟು ಆತನನ್ನು ಬೆಂಚ್‌ ಕಾಯಿಸುತ್ತಿರುವುದೇ ಅಚ್ಚರಿ: ಮುಂಬೈ ನಡೆಗೆ ವಸೀಂ ಜಾಫರ್‌ ಬೇಸರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.