ಮುಂಬೈ: ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಸ್ಲೆಡ್ಜಿಂಗ್ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. 2020ರ ಆವೃತ್ತಿಯಲ್ಲಿ ಇವರಿಬ್ಬರ ಮಧ್ಯೆ ನಡೆದಿದ್ದ ಸ್ಲೆಡ್ಜಿಂಗ್ ವದಂತಿಯನ್ನು ಸ್ಮರಿಸಿಕೊಂಡಿರುವ ಸೂರ್ಯಕುಮಾರ್, ಅಂದು ತಾನೂ ಮೇಲು ನೋಟಕ್ಕೆ ಗುರಾಯಿಸಿದಂತೆ ನಟಿಸಿದ್ದೆ, ಅದರೆ ಒಳಗೆ ಹೆದರಿ ಸತ್ತಿದ್ದೆ ಎಂದು ತಿಳಿಸಿದ್ದಾರೆ.
ಅಂದು ನಡೆದಿದ್ದೇನು?: ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುತ್ತಿದ್ದರು. ಆ ಪಂದ್ಯದಲ್ಲಿ ನಿಧಾನವಾಗಿ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿತ್ತು. ಈ ವೇಳೆ ಕೊಹ್ಲಿ ಸೂರ್ಯಕುಮಾರ್ ಹತ್ತಿರಕ್ಕೆ ಸ್ಲೆಡ್ಜ್ ಮಾಡಿದ್ದರು. ಡೇಲ್ ಸ್ಟೇನ್ ಬೌಲಿಂಗ್ನಲ್ಲಿ ಸೂರ್ಯ ಹೊಡೆದ ಚೆಂಡು ಕೊಹ್ಲಿ ಕೈ ಸೇರಿತ್ತು.
ಚೆಂಡನ್ನು ಎತ್ತಿಕೊಂಡ ಕೊಹ್ಲಿ ನೇರವಾಗಿ ಸೂರ್ಯಕುಮಾರ್ ನೋಡುತ್ತಾ ಹತ್ತಿರಕ್ಕೆ ಬಂದು ನಿಂತರು. ಆದರೆ ಸೂರ್ಯಕುಮಾರ್ ಹೆದರದೇ ಅಲ್ಲೆ ನಿಂತಿದ್ದರು. ಒಂದಿಂಚು ಅಲುಗಾಡದ ಅವರು ಕೊಹ್ಲಿಯನ್ನು ಗುರಾಯಿಸುತ್ತಾ ನಿಂತರು. ಈ ಘಟನೆ ಅಂದು ಸಮಾಜಿಕ ಜಾಲಾತಾಣದಲ್ಲಿ ಭಾರಿ ಚರ್ಚೆಯನ್ನುಂಟು ಮಾಡಿತ್ತು. ಈ ಕುರಿತು ಗೌರವ್ ಕಪೂರ್ ಅವರ ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಸೂರ್ಯ ಮಾತನಾಡಿದ್ದು, ಅಂದು ಏನು ನಡೆಯಿತು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
-
🔰Remember 🔰
— Kohlicaptain (@Kohlicaptain_) April 12, 2022 " class="align-text-top noRightClick twitterSection" data="
Runs scored by Surya Kumar Yadav in that match: 70
Kohli's international centuries: 70
Levels. pic.twitter.com/JsXyzpqfZz
">🔰Remember 🔰
— Kohlicaptain (@Kohlicaptain_) April 12, 2022
Runs scored by Surya Kumar Yadav in that match: 70
Kohli's international centuries: 70
Levels. pic.twitter.com/JsXyzpqfZz🔰Remember 🔰
— Kohlicaptain (@Kohlicaptain_) April 12, 2022
Runs scored by Surya Kumar Yadav in that match: 70
Kohli's international centuries: 70
Levels. pic.twitter.com/JsXyzpqfZz
"ಕೊಹ್ಲಿ ಅವರದ್ದು ವಿಭಿನ್ನವಾದ ವ್ಯಕ್ತಿತ್ವ. ಮೈದಾನದಲ್ಲಿ ಇದ್ದಾಗ ಅವರ ಸ್ಟೈಲ್, ಎನರ್ಜಿ ಬೇರೆ ಲೆವೆಲ್ಗೆ ಇರುತ್ತೆ. ಅಂದು ಎರಡು ತಂಡಗಳಿಗೆ ಆ ಪಂದ್ಯ ಬಹಳ ಮುಖ್ಯವಾಗಿತ್ತು. ಆ ಪಂದ್ಯದಲ್ಲಿ ಕೊಹ್ಲಿ ಸ್ಲೆಡ್ಜಿಂಗ್ ಬೇರೆ ಹಂತದಲ್ಲಿ ಇತ್ತು. ನಾನು ಏನೇ ಆದರೂ ಪಂದ್ಯವನ್ನು ಗೆಲ್ಲಿಸಲೇಬೇಕೆಂದುಕೊಂಡಿದ್ದೆ. ಕೊಹ್ಲಿ ನನ್ನ ಹತ್ತಿರಕ್ಕೆ ಬರುತ್ತಿದ್ದಾಗ ನಾನು ಚುಯಿಂಗ್ ಗಮ್ ಜಗಿಯುತ್ತಿದ್ದೆ. ಒಂದು ಮಾತು ಸಹಾ ಆಡಬೇಡ, ಹತ್ತು ಸೆಕೆಂಡ್ ಆದ್ರೆ , ಬೇರೆ ಓವರ್ ಆರಂಭವಾಗುತ್ತದೆ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದೆ. ಆಗ ನನ್ನ ಬ್ಯಾಟ್ ಕೆಳಗೆ ಬಿದ್ದೋಯ್ತು. ಅದು ನನಗೆ ಅನುಕೂಲವಾಯಿತು. ಕೊಹ್ಲಿ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡಲು ನಿಂತರು. ಆ ನಂತರ ಪಂದ್ಯ ಮುಗಿಯುವವರೆಗೆ ನಾನು ಕೊಹ್ಲಿಯನ್ನು ನೋಡಲಿಲ್ಲ. ತಲೆತಗ್ಗಿಸಿ ಬ್ಯಾಟಿಂಗ್ ಮುಂದುವರಿಸಿದೆ. ಈ ವಿಚಾರವನ್ನು ಇಲ್ಲಿಯವರೆಗೆ ಯಾರ ಜೊತೆಗೂ ಚರ್ಚಿಸಿರಲಿಲ್ಲ" ಎಂದು ಸೂರ್ಯ ಹೇಳಿದ್ದಾರೆ.
ಆ ಪಂದ್ಯದಲ್ಲಿ ಆರ್ಸಿಬಿ ನೀಡಿದ 165 ರನ್ಗಳ ಗುರಿಯನ್ನ ಬೆನ್ನಟ್ಟಿದ ಮುಂಬೈ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಸೂರ್ಯಕುಮಾರ್ ಯಾದವ್ ಮಾತ್ರ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿ ಪಂದ್ಯ ಗೆಲ್ಲಿಸಿಕೊಟ್ಟರು. ಏಕಾಂಗಿಯಾಗಿ ಹೋರಾಡಿದ ಯಾದವ್ 49 ಎಸೆತಗಳಲ್ಲಿ 79 ರನ್ಗಳಿಸಿ ಗೆಲುವಿನ ರೂವಾರಿಯಾಗಿದ್ದರು.
ಇದನ್ನೂ ಓದಿ:ಲಖನೌ ವಿರುದ್ಧ ಗೋಲ್ಡನ್ ಡಕ್ ಆದ ಕೊಹ್ಲಿ: ಐಪಿಎಲ್ನಲ್ಲಿ ಎಷ್ಟನೇ ಬಾರಿ ಗೊತ್ತಾ?