ಪುಣೆ : ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿವೆ. ಟಾಸ್ ಗೆದ್ದಿರುವ ಹೈದರಾಬಾದ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಉಭಯ ತಂಡಗಳಿಗೂ ಇದು ಮೊದಲ ಪಂದ್ಯವಾಗಿರುವ ಕಾರಣ ಗೆಲುವಿನೊಂದಿಗೆ ಶುಭಾರಂಭ ಮಾಡುವ ಇರಾದೆ ಇಟ್ಟುಕೊಂಡಿವೆ.
ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನ ಅನುಭವಿ ಕೇನ್ ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ. ರಾಜಸ್ಥಾನ ತಂಡಕ್ಕೆ ಯಂಗ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ನಾಯಕತ್ವವಿದೆ. ಉಭಯ ತಂಡಗಳ ನಡುವೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಯುವ ಪಡೆಗಳಿಂದ ಕೂಡಿರುವ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಏಳು ಪ್ಲೇಯರ್ಸ್ ಇಂದಿನ ಪಂದ್ಯದಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ.
-
#SRH have won the toss and they will bowl first against #RR
— IndianPremierLeague (@IPL) March 29, 2022 " class="align-text-top noRightClick twitterSection" data="
Live - https://t.co/WOQ4HjEaOT #SRHvRR #TATAIPL pic.twitter.com/IIh4oEmeQT
">#SRH have won the toss and they will bowl first against #RR
— IndianPremierLeague (@IPL) March 29, 2022
Live - https://t.co/WOQ4HjEaOT #SRHvRR #TATAIPL pic.twitter.com/IIh4oEmeQT#SRH have won the toss and they will bowl first against #RR
— IndianPremierLeague (@IPL) March 29, 2022
Live - https://t.co/WOQ4HjEaOT #SRHvRR #TATAIPL pic.twitter.com/IIh4oEmeQT
ರಾಜಸ್ಥಾನ ರಾಯಲ್ಸ್ ತಂಡ : ಯಶಸ್ವಿ ಜೈಸ್ವಾಲ್, ಜೋಶ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಶಿಮ್ರಾನ್ ಹೆಟ್ಮಾಯರ್, ರಿಯಾನ್ ಪರಾಗ್, ಆರ್. ಅಶ್ವಿನ್, ನೆಥಾನ್ ಕೌಲ್ಟರ್ ನೆಲ್,ಯುಜುವೇಂದ್ರ ಚಹಾಲ್, ಬೌಲ್ಟ್, ಪ್ರಸಿದ್ಧ ಕೃಷ್ಣ
ಸನ್‌ರೈಸರ್ಸ್ ಹೈದರಾಬಾದ್ : ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್(ಕ್ಯಾಪ್ಟನ್), ನಿಕೂಲಸ್ ಪೂರನ್(ವಿ.ಕೀ), ಮಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಸೆಪಾರ್ಡ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಉಮ್ರಾನ್ ಮಲಿಕ್
ಈವರೆಗೆ ಉಭಯ ತಂಡಗಳು ಒಟ್ಟು 15 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಸನ್‌ರೈಸರ್ಸ್ ಹೈದ್ರಾಬಾದ್ 8 ಪಂದ್ಯಗಳಲ್ಲೂ ಹಾಗೂ ರಾಜಾಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.
ಬಲಿಷ್ಠ ಆರ್‌ಆರ್ : ರಾಜಸ್ಥಾನ್ ರಾಯಲ್ಸ್ ಬಲಿಷ್ಠ ತಂಡವನ್ನೇ ಖರೀದಿಸಿದೆ. ಹೊಸ ಹುಮ್ಮಸ್ಸಿನಲ್ಲಿ ಇಂದು ಕಣಕ್ಕಿಳಿಯಲು ಅದು ಸಜ್ಜಾಗಿದೆ. ರಾಯಲ್ಸ್ ಬಲ ಎಂದರೆ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಜಾಸ್ ಬಟ್ಲರ್. ಕಳೆದ ಆವೃತ್ತಿಯಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದ ಈ ಆಟಗಾರ ಹೊಸ ಆವೃತ್ತಿಯಲ್ಲೂ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಇವರಿಗೆ ಮಾಜಿ ಆರ್‌ಸಿಬಿ ಆಟಗಾರ ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್ ಪವರ್ ಹಿಟ್ಟರ್‌ಗಳಾದ ಸಂಜು ಸ್ಯಾಮ್ಸನ್, ಶಿಮ್ರೊನ್ ಹೆಟ್‌ಮೈರ್, ರಿಯಾನ್ ಪರಾಗ್ ಬೆಂಬಲ ನೀಡಲಿದ್ದಾರೆ. ಆರ್‌ಆರ್ ತಂಡದ ಬೌಲಿಂಗ್ ವಿಭಾಗ ಕೂಡ ಶಕ್ತಿಯುತವಾಗಿದೆ. ಪ್ರಮುಖವಾಗಿ ಆರ್.ಅಶ್ವಿನ್ ಮತ್ತು ಯಜ್ವೇಂದ್ರ ಚಾಹಲ್ ಸ್ಪಿನ್ ಅಸ್ತ್ರಗಳಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ, ನಥನ್ ಕೋಲ್ಟರ್ ನೈಲ್ ಇದ್ದಾರೆ.
ಸನ್‌ರೈಸರ್ಸ್‌ನಲ್ಲಿ ಅಸಮತೋಲನ : ಈ ಬಾರಿ ಸನ್‌ರೈಸರ್ಸ್ ತಂಡದಲ್ಲಿ ಹೆಚ್ಚಿನ ಸಮತೋಲನ ಕಾಣುತ್ತಿಲ್ಲ. ಫ್ರಾಂಚೈಸಿ ಯುವ ಆಟಗಾರರ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದು, ತಂಡ ಕಪ್ ಗೆಲ್ಲುವುದಕ್ಕೆ ಪೂರಕವಾಗುತ್ತಾ ಅಥವಾ ಮಾರಕವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.