ಮುಂಬೈ: ಸನ್ರೈಸರ್ಸ್ ಬೌಲರ್ಗಳ ದಾಳಿಗೆ ಸಿಲುಕಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಸನ್ರೈಸಸರ್ಸ್ ಹೈದರಾಬಾದ್ ತಂಡ ಸಿಎಸ್ಕೆಗೆ ಬ್ಯಾಟಿಂಗ್ ಆಹ್ವಾನಿಸಿತು. ಆದರೆ ಇಂದಿನ ಪಂದ್ಯದಲ್ಲೂ ಸಿಎಸ್ಕೆ ತನ್ನ ಚಾಂಪಿಯನ್ ಆಟವನ್ನು ಪ್ರದರ್ಶಿಸುವಲ್ಲಿ ವಿಫಲವಾಯಿತು.
ಆರಂಭಿಕರಾದ ರಾಬಿನ್ ಉತ್ತಪ್ಪ 15 ಮತ್ತು ಋತುರಾಜ್ ಗಾಯಕ್ವಾಡ್ 16 ರನ್ಗಳಿಸಿ ಪವರ್ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್ಗೆ ಮರಳಿದರು. ಆದರೆ 3ನೇ ವಿಕೆಟ್ಗೆ ಅಂಬಾಟಿ ರಾಯುಡು ಮತ್ತು ಮೊಯೀನ್ ಅಲಿ 54 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಚೇತರಿಸಿಕೊಳ್ಳುವಂತೆ ಮಾಡಿದರಾದರೂ, ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಈ ಜೋಡಿ ವಿಫಲವಾಯಿತು. ಜಡೇಜಾ 27 ಎಸೆತಗಳಲ್ಲಿ 27 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಅಲಿ 35 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 48 ರನ್ಗಳಿಸಿದರು.
-
Innings Break!
— IndianPremierLeague (@IPL) April 9, 2022 " class="align-text-top noRightClick twitterSection" data="
After being put to bat first, #CSK post a total of 154/7 on the board.#SRH chase coming up shortly.
Scorecard - https://t.co/8pocfkHpDe #CSKvSRH #TATAIPL pic.twitter.com/arrfmQkuYm
">Innings Break!
— IndianPremierLeague (@IPL) April 9, 2022
After being put to bat first, #CSK post a total of 154/7 on the board.#SRH chase coming up shortly.
Scorecard - https://t.co/8pocfkHpDe #CSKvSRH #TATAIPL pic.twitter.com/arrfmQkuYmInnings Break!
— IndianPremierLeague (@IPL) April 9, 2022
After being put to bat first, #CSK post a total of 154/7 on the board.#SRH chase coming up shortly.
Scorecard - https://t.co/8pocfkHpDe #CSKvSRH #TATAIPL pic.twitter.com/arrfmQkuYm
ನಂತರ ಬಂದ ದುಬೆ ಮತ್ತು ಧೋನಿ ತಲಾ 3 ರನ್ಗಳಿಸಿ ಔಟಾದರು. ಆದರೆ ನಾಯಕ ಜಡೇಜಾ ಕೊನೆಯಲ್ಲಿ ಒಂದೆರಡು ಅದ್ಭುತ ಬೌಂಡರಿಗಳ ಸಹಿತ 15 ಎಸೆತಗಳಲ್ಲಿ 23 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಸನ್ರೈಸರ್ಸ್ ಹೈದರಾಬಾದ್ ಪರ ವಾಷಿಂಗ್ಟನ್ ಸುಂದರ್ 21ಕ್ಕೆ 2, ಟಿ. ನಟರಾಜನ್ 30ಕ್ಕೆ2, ಐಡೆನ್ ಮಾರ್ಕ್ರಮ್ 8ಕ್ಕೆ1, ಭುವನೇಶ್ವರ್ ಕುಮಾರ್ 36ಕ್ಕೆ1, ಮತ್ತು ಮಾರ್ಕೊ ಜಾನ್ಸನ್ 30ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ಐಪಿಎಲ್ನಲ್ಲಿ ಯುವ ಆಟಗಾರರ ದರ್ಬಾರ್.. ಭೀತಿಯಿಲ್ಲದೆ ಬ್ಯಾಟ್ ಬೀಸುವ ಉದಯೋನ್ಮುಖ ಕ್ರಿಕೆಟಿಗರು..