ETV Bharat / sports

ವಿದೇಶಿ ಆಟಗಾರರ ಮೇಲೆ ಹೆಚ್ಚು ಹೂಡಿಕೆ; ಅಗ್ರಸ್ಥಾನದಲ್ಲಿ SRH, RCB, ಅತ್ಯಂತ ಕಡಿಮೆ ವ್ಯಯಿಸಿದ CSK - ಇಂಡಿಯನ್ ಪ್ರೀಮಿಯರ್ ಲೀಗ್

ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ 21, ಡೆಲ್ಲಿ ಕ್ಯಾಪಿಟಲ್ಸ್​ 20, ಗುಜರಾತ್​ ಟೈಟನ್ಸ್​ 20, ಕೆಕೆಆರ್​ 21, ಲಖನೌ 18, ಮುಂಬೈ ಇಂಡಿಯನ್ಸ್ 21, ಪಂಜಾಬ್​​ ಕಿಂಗ್ಸ್​ 23, ರಾಜಸ್ಥಾನ ರಾಯಲ್ಸ್​ 21, ಆರ್​ಸಿಬಿ 19 ಮತ್ತು ಸನ್​ರೈಸರ್ಸ್​ ಹೈದರಾಬಾದ್​ 20 ಆಟಗಾರರನ್ನು ಖರೀದಿಸಿದೆ.

ipl mega auction
ಐಪಿಎಲ್ ಹರಾಜು
author img

By

Published : Feb 16, 2022, 10:23 PM IST

ಹೈದರಾಬಾದ್​: ಎರಡು ದಿನಗಳ ಐಪಿಎಲ್ ಮೆಗಾ ಹರಾಜು ಮುಗಿದಿದ್ದು, 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿವೆ. ಮುಂಬೈ ಇಂಡಿಯನ್ಸ್​ ಯುವ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ಇಶಾನ್​ ಕಿಶನ್​ರನ್ನು 15.5 ಕೋಟಿ ರೂ.ಗೆ ಖರೀದಿಸಿದ್ದು, ಐಪಿಎಲ್ 2022ರ ಹರಾಜಿನ ಗರಿಷ್ಠ ಖರೀದಿಯಾಯಿತು.

ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ 21, ಡೆಲ್ಲಿ ಕ್ಯಾಪಿಟಲ್ಸ್​ 20, ಗುಜರಾತ್​ ಟೈಟನ್ಸ್​ 20, ಕೆಕೆಆರ್​ 21, ಲಖನೌ 18, ಮುಂಬೈ ಇಂಡಿಯನ್ಸ್ 21, ಪಂಜಾಬ್​​ ಕಿಂಗ್ಸ್​ 23, ರಾಜಸ್ಥಾನ ರಾಯಲ್ಸ್​ 21, ಆರ್​ಸಿಬಿ 19 ಮತ್ತು ಸನ್​ರೈಸರ್ಸ್​ ಹೈದರಾಬಾದ್​ 20 ಆಟಗಾರರನ್ನು ಖರೀದಿಸಿದೆ.

ಇನ್ನು ವಿದೇಶಿ ಆಟಗಾರರಿಗೆ ಹೆಚ್ಚು ಹಣ ಹೂಡಿಕೆ ಮಾಡಿರುವ ಫ್ರಾಂಚೈಸಿಯಲ್ಲಿ ಸನ್​ರೈಸರ್ಸ್​ ಹೈದಾಬಾದ್​ ಮತ್ತು ರಾಯಲ್ಸ್​ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಗ್ರಸ್ಥಾನದಲ್ಲಿವೆ. ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿ ತನ್ನ 90 ಕೋಟಿ ರೂ ಪರ್ಸ್​​ನಲ್ಲಿ 8 ವಿದೇಶಿಯರಿಗೆ 43.70 ಕೋಟಿ ರೂಗಳನ್ನು ವಿನಿಯೋಗಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್​ ಈ ಲಿಸ್ಟ್​ನಲ್ಲಿ ಕೊನೆಯ ಸ್ಥಾನದಲ್ಲಿದ್ದು, ಫ್ರಾಂಚೈಸಿ 8 ಆಟಗಾರರಿಗೆ ಕೇವಲ 22 ಕೋಟಿ ರೂ ವೆಚ್ಚಮಾಡಿದೆ.

ಐಪಿಎಲ್​ನಲ್ಲಿ ವಿದೇಶಿ ಆಟಗಾರರಿಗೆ ಫ್ರಾಂಚೈಸಿ ವ್ಯಯಸಿದ ಹಣದ ವಿವರ

  • ಸನ್​ರೈಸರ್ಸ್ ಹೈದರಾಬಾದ್ - 8 ಆಟಗಾರರಿಗೆ 43.70 ಕೋಟಿರ ರೂ
  • ರಾಯಲ್​ ಚಾಲೆಂಜರ್ಸ್ ಬೆಂಗಳೂರು -7 ಆಟಗಾರರಿಗೆ 41.05 ಕೋಟಿ ರೂ
  • ಲಖನೌ ಸೂಪರ್ ಜೈಂಟ್ಸ್ - 8 ಆಟಗಾರರಿಗೆ 36.70 ಕೋಟಿ ರೂ
  • ಗುಜರಾತ್ ಟೈಟನ್ಸ್​-- 8 ಆಟಗಾರರಿಗೆ 31,20 ಕೋಟಿ ರೂ
  • ಪಂಜಾಬ್​ ಕಿಂಗ್ಸ್​------7 ಆಟಗಾರರಿಗೆ 35.15 ಕೋಟಿ ರೂ
  • ರಾಜಸ್ಥಾನ್​ ರಾಯಲ್ಸ್​-- 8 ಆಟಗಾರರಿಗೆ 31.50 ಕೋಟಿ ರೂ
  • ಕೋಲ್ಕತ್ತಾ ನೈಟ್​ ರೈಡರ್ಸ್​- 8 ಆಟಗಾರರಿಗೆ 31.75 ಕೋಟಿ ರೂ
  • ಮುಂಬೈ ಇಂಡಿಯನ್ಸ್​- 8 ಆಟಗಾರರಿಗೆ 31.10 ಕೋಟಿ ರೂ
  • ಡೆಲ್ಲಿ ಕ್ಯಾಪಿಟಲ್ಸ್​------- 7 ಆಟಗಾರರಿಗೆ 25 ಕೋಟಿ ರೂ
  • ಚೆನ್ನೈ ಸೂಪರ್ ಕಿಂಗ್ಸ್​---- 8 ಆಟಗಾರರಿಗೆ 22 ಕೋಟಿ

ಇದನ್ನೂ ಓದಿ:ಆರ್​ಸಿಬಿಯಲ್ಲಿ ಸಿಕ್ಕಿದ ಈ ಪಾತ್ರ ನನ್ನ ವೃತ್ತಿಜೀವನವನ್ನೇ ಬದಲಾಯಿಸಿತು: ಹರ್ಷಲ್ ಪಟೇಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.