ETV Bharat / sports

ಮಯಾಂಕ್-ಶಿಖರ್​ ಧವನ್​ ಆರ್ಭಟ: ಮುಂಬೈ ಇಂಡಿಯನ್ಸ್​ಗೆ 199ರನ್​ಗಳ ಬೃಹತ್ ಗುರಿ ನೀಡಿದ ಪಂಜಾಬ್

author img

By

Published : Apr 13, 2022, 7:16 PM IST

Updated : Apr 13, 2022, 9:38 PM IST

ನಾಯಕ ಮಯಾಂಕ್ ಅಗರ್ವಾಲ್ ಮತ್ತು ಶಿಖರ್​ ಧವನ್​ ಅವರ ಅಬ್ಬರದ ಅರ್ಧಶತಕ ಮತ್ತು ಕೊನೆಯಲ್ಲಿ ಜಿತೇಶ್ ಶರ್ಮಾ ಹಾಗೂ ಶಾರುಖ್ ಖಾನ್ ಅವರ ಉಪಯುಕ್ತ ರನ್​ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 198ರನ್​ಗಳಿಸಿದೆ.

Mumbai Indians vs Punjab Kings
Mumbai Indians vs Punjab Kings

ಪುಣೆ: 5 ಬಾರಿಯ ಮುಂಬೈ ಇಂಡಿಯನ್ಸ್​ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಶಿಖರ್​ ಧವನ್ 70, ಮಯಾಂಕ್ ಅಗರ್ವಾಲ್ 52 ಹಾಗೂ ಜಿತೇಶ್ ಶರ್ಮಾರ 30 ರನ್​ಗಳ ನೆರವಿನಿಂದ ಮುಂಬೈ ಇಂಡಿಯನ್ಸ್​ಗೆ 199ರನ್​ಗಳ ಸವಾಲಿನ ಗುರಿ ನೀಡಿದೆ.

ಅರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್​ ಮೊದಲ ವಿಕೆಟ್​ಗೆ ಅನುಭವಿ ಶಿಖರ್ ಧವನ್​ ಜೊತೆಯಾಗಿ ಮೊದಲ ವಿಕೆಟ್​ಗೆ 97 ರನ್​ಗಳ ಜೊತೆಯಾಟ ನೀಡಿದರು. ಕಳೆದ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಮಯಾಂಕ್ ಈ ಪಂದ್ಯದಲ್ಲಿ ಆರಂಭದಿಂದಲೇ ಅಬ್ಬರಿಸಿದರು. ಅವರು 32 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 52 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಟಿ20 ಸ್ಪೆಷಲಿಸ್ಟ್​ಗಳಾದ ಜಾನಿ ಬೈರ್​ಸ್ಟೋವ್​(12) ಮತ್ತು ಲಿಯಾಮ್ ಲಿವಿಂಗ್​ಸ್ಟೋನ್(2) ವಿಫಲರಾದರು.

ಆದರೆ ದಿಢೀರ್ 3 ವಿಕೆಟ್ ಕಳೆದುಕೊಂಡರು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಶಿಖರ್​ ಧವನ್​ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 70 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿ ಥಂಪಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 15 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ಗಳ ಸಹಿತ ಅಜೇಯ 30 ರನ್​ಗಳಿಸಿದರು. ಇವರಿಗೆ ಸಾಥ್ ನೀಡಿದ ಶಾರುಕ್ 6 ಎಸೆತಗಳಲ್ಲಿ 2 ಸಿಕ್ಸರ್​ಗಳ ಸಹಿತ 15 ರನ್​ ಗಳಿಸಿ ತಂಡದ ಮೊತ್ತವನ್ನು 200ರ ಸನಿಹಕ್ಕೆ ತಂದರು.

ಮುಂಬೈ ಇಂಡಿಯನ್ಸ್ ಪರ ಬೇಸಿಲ್ ತಂಪಿ 47ಕ್ಕೆ2, ಜಸ್ಪ್ರೀತ್ ಬುಮ್ರಾ 28ಕ್ಕೆ1, ಮುರುಗನ್ ಅಶ್ವಿನ್ 34ಕ್ಕೆ1, ಜಯದೇವ್ ಉನಾದ್ಕಟ್ 44ಕ್ಕೆ 1 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಕೇವಲ ಒಂದು ಬದಲಾವಣೆ ಮಾಡಿಕೊಂಡಿದ್ದು, ರಮಣದೀಪ್ ಸಿಂಗ್ ಬದಲಿಗೆ ಇಂಗ್ಲೆಂಡ್ ವೇಗಿ ತೈಮಲ್ ಮಿಲ್ಸ್​ಗೆ ಅವಕಾಶ ನೀಡಿದೆ. ಇತ್ತ ಪಂಜಾಬ್ ಕಿಂಗ್ಸ್ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿದಿದೆ.

ಮುಖಾಮುಖಿ: ಇತ್ತಂಡಗಳು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಮುಂಬೈ 15-13ರಲ್ಲಿ ಮುನ್ನಡೆ ಸಾಧಿಸಿದೆ. 2019ರಿಂದ ಆಡಿರುವ 6 ಪಂದ್ಯಗಳಲ್ಲಿ 3-3ರಲ್ಲಿ ಸಮಬಲ ಸಾಧಿಸಿವೆ.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ಸಿ), ಶಿಖರ್ ಧವನ್, ಜಾನಿ ಬೈರ್‌ಸ್ಟೋ (ವಿಕೀ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಒಡಿಯನ್ ಸ್ಮಿತ್, ಶಾರುಖ್ ಖಾನ್, ಕಗಿಸೊ ರಬಾಡ, ರಾಹುಲ್ ಚಾಹರ್, ವೈಭವ್ ಅರೋರಾ, ಅರ್ಷ್‌ದೀಪ್ ಸಿಂಗ್

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೀ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರನ್ ಪೊಲಾರ್ಡ್, ಜಯದೇವ್ ಉನದ್ಕತ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಬೇಸಿಲ್ ತಂಪಿ

Last Updated : Apr 13, 2022, 9:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.