ETV Bharat / sports

ಕೆಕೆಆರ್​-ಸಿಎಸ್​ಕೆ ನಡುವೆ ಐಪಿಎಲ್ ಉದ್ಘಾಟನಾ ಪಂದ್ಯ: ಶೇ.25 ರಷ್ಟು ಪ್ರೇಕ್ಷಕರಿಗೆ ಅಸ್ತು ಎಂದ 'ಮಹಾ'ಸರ್ಕಾರ - ಮಾರ್ಚ್​ 26ರಿಂದ ಐಪಿಎಲ್ ಆರಂಭ

ಮಾರ್ಚ್‌ 26ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದೆ. ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ.

IPL 2022: KKR-CSK to play tournament opener
ಕೆಕೆಆರ್​-ಸಿಎಸ್​ಕೆ ನಡುವೆ ಐಪಿಎಲ್ ಉದ್ಘಾಟನಾ ಪಂದ್ಯ
author img

By

Published : Feb 27, 2022, 8:38 PM IST

Updated : Mar 6, 2022, 5:29 PM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಆವೃತ್ತಿ ಮಾರ್ಚ್​ 26ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರನ್ನರ್ ಅಪ್ ಕೋಲ್ಕತ್ತಾ ನೈಟ್​ರೈಡರ್ಸ್ ತಂಡಗಳು ಸೆಣಸಾಡಲಿವೆ.

ಮಾರ್ಚ್‌ 26ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದೆ. ಮೇ 29ರಂದು ಫೈನಲ್ ಪಂದ್ಯ ಜರುಗಲಿದೆ.

ಕೆಕೆಆರ್​ ಮತ್ತು ಸಿಎಸ್​ಕೆ ಮಾರ್ಚ್​ 26ರಂದು ಉದ್ಘಾಟನಾ ಪಂದ್ಯದಲ್ಲಿ ಆಡಲಿವೆ. ಮಹಾರಾಷ್ಟ್ರ ಸರ್ಕಾರ ತಂಡಗಳು ಹೋಟೆಲ್​ನಿಂದ ಮೈದಾನಾಕ್ಕೆ ತೆರಳುವುದಕ್ಕೆ ಟ್ರಾಫಿಕ್​ ನಿಭಾಯಿಸಲು ಗ್ರೀನ್ ಚಾನಲ್​ಗೂ ಅನುಮತಿ ನೀಡಿದೆ. ಜೊತೆಗೆ ಆರಂಭಿಕ ಹಂತದಲ್ಲಿ ​ಶೇ.25 ಮಂದಿಗೆ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸುವುದಕ್ಕೂ ಸರ್ಕಾರ ಅನುಮತಿ ನೀಡಲಾಗಿದೆ" ಎಂದು ತಿಳಿಸಿದೆ.

2022ರ ಐಪಿಎಲ್​ ಟೂರ್ನಿಯ ಎಲ್ಲಾ ಲೀಗ್​ ಪಂದ್ಯಗಳು ಮಹಾರಾಷ್ಟ್ರದಲ್ಲೇ ನಡೆಯಲಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 20 , ಬ್ರಬೋರ್ನ್‌ ಸ್ಟೇಡಿಯಂನಲ್ಲಿ 20 ಹಾಗೂ ಡಿ.ವೈ ಪಾಟಿಲ್‌ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿದೆ. ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ 15 ಪಂದ್ಯಗಳು ನಡೆಯಲಿವೆ.

ಪ್ರತಿಯೊಂದು ತಂಡಗಳು ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ತಲಾ 4 ಪಂದ್ಯಗಳು ಮತ್ತು ಬ್ರಬೋರ್ನ್​ ಹಾಗೂ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ತಲಾ 3 ಪಂದ್ಯಗಳನ್ನಾಡಲಿದೆ.

ಎಲ್ಲ 10 ತಂಡಗಳು ತಲಾ 14 ಲೀಗ್‌ ಪಂದ್ಯಗಳನ್ನಾಡಲಿದ್ದು, ತವರಿನಲ್ಲಿ 7 ಮತ್ತು ಹೊರಗೆ 7 ಪಂದ್ಯಗಳನ್ನಾಡಲಿವೆ. ಒಟ್ಟು 70 ಲೀಗ್‌ ಪಂದ್ಯಗಳು ಮತ್ತು 4 ಪ್ಲೇ ಆಫ್​ ಪಂದ್ಯಗಳು ಇರಲಿವೆ. ಪ್ರತಿಯೊಂದು ತಂಡ 5 ತಂಡಗಳೊಂದಿಗೆ 2 ಪಂದ್ಯ ಮತ್ತು 4 ತಂಡಗಳೊಂದಿಗೆ ಒಂದೊಂದು ಪಂದ್ಯದವನ್ನಾಡಲಿದೆ.

ಇದನ್ನೂ ಓದಿ:ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಕ್ರಿಕೆಟಿಗ : ರೋಹಿತ್ ಶರ್ಮಾ ಹೆಸರಿಗೆ ವಿಶ್ವದಾಖಲೆಯ ಗರಿ

Last Updated : Mar 6, 2022, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.