ಬೆಂಗಳೂರು : 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚಾಣಾಕ್ಷತನ ಪ್ರದರ್ಶನವನ್ನೂ 2ನೇ ದಿನದ ಹರಾಜಿನಲ್ಲೂ ಮುಂದುವರಿಸಿದೆ. ಭಾನುವಾರ ನಡೆದ ಹರಾಜಿನಲ್ಲಿ ಭಾರತದ ಯುವ ವೇಗಿಗಳಾದ ಚೇತನ್ ಸಕಾರಿಯಾ ಮತ್ತು ಖಲೀಲ್ ಅಹ್ಮದ್ ಅವರನ್ನು ಖರೀದಿಸಿದೆ.
ಎರಡನೇ ದಿನದ ಹರಾಜಿನಲ್ಲಿ ಡೆಲ್ಲಿ ಸಕಾರಿಯಾರನ್ನು 4.2 ಕೋಟಿ ರೂ.ಗಳಿಗೆ ಮತ್ತು ಖಲೀಲ್ ಅಹ್ಮದ್ರನ್ನು 5.25 ಕೋಟಿ ರೂ. ನೀಡಿ ಖರೀದಿಸಿತು. ಕಮಲೇಶ್ ನಾಗರಕೋಟಿ 1.1 ಕೋಟಿ ರೂ., ಪಂಜಾಬ್ ಬ್ಯಾಟರ್ ಮಂದೀಪ್ ಸಿಂಗ್ರನ್ನು 1.1 ಕೋಟಿ ರೂ.ಗಳಿಗೆ 2ನೇ ದಿನ ಖರೀದಿಸಿದೆ. ಈ ಮೂಲಕ ತಂಡಕ್ಕೆ ಬೇಕಾದ ಎಲ್ಲಾ ಸ್ಥಾನಗಳಿಗೂ ಆಟಗಾರರನ್ನ ಖರೀದಿಸುವಲ್ಲಿ ಸಫಲವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಷಭ್ ಪಂತ್(16 ಕೋಟಿ), ಪೃಥ್ವಿ ಶಾ(7.5), ಎನ್ರಿಷ್ ನಾರ್ಕಿಯಾ(6.5) ಮತ್ತು ಅಕ್ಷರ್ ಪಟೇಲ್(9)ರನ್ನು ರಿಟೈನ್ ಮಾಡಿಕೊಂಡಿದೆ. ನಿನ್ನೆ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಅವರನ್ನು 6.25 ಕೋಟಿ ರೂ.ಗೆ ಮತ್ತು ಆಲ್ರೌಂಡರ್ ಮಿಚೆಲ್ ಮಾರ್ಷ್ರನ್ನು ₹6.5 ಕೋಟಿಗೆ ಖರೀದಿಸಿತು.
ಆದರೆ, ಶಾರ್ದೂಲ್ ಠಾಕೂರ್ ಅವರನ್ನು ಪೈಪೋಟಿ ನೀಡಿ 10.75 ಕೋಟಿ ರೂ.ಗಳಿಗೆ ಖರೀದಿಸಿತು. ಠಾಕೂರ್ ಅವರ ಖರೀದಿ ವಿಚಾರದಲ್ಲಿ ಮಾತ್ರ ಫ್ರಾಂಚೈಸಿ ಹೆಚ್ಚಿನ ಹಣವನ್ನು ವ್ಯಯಿಸಿದ್ದು ಬಿಟ್ಟರೆ ಉಳಿದೆಲ್ಲಾ ಆಟಗಾರರನ್ನು ಸಸ್ತಾ ಬೆಲೆಗೆ ಖರೀದಿಸುವ ಮೂಲಕ ಈಗಾಗಲೇ ತಂಡವನ್ನು ನಿರ್ಧರಿಸುವಂತಹ ಮಟ್ಟಿಗೆ ತಂದು ನಿಲ್ಲಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿರುವ ಆಟಗಾರರ ಪಟ್ಟಿ
- ಕಮಲೇಶ್ ನಾಗರಕೋಟಿ- ಭಾರತೀಯ ಆಲ್ ರೌಂಡರ್ ₹1,10,00,000
- ಕೆ.ಎಸ್. ಭರತ್ -ಭಾರತೀಯ ವಿಕೆಟ್ ಕೀಪರ್ ₹2,00,00,000
- ಮುಸ್ತಫಿಜುರ್ ರೆಹಮಾನ್- ವಿದೇಶಿ ಬೌಲರ್ ₹2,00,00,000
- ಶಾರ್ದೂಲ್ ಠಾಕೂರ್- ಭಾರತೀಯ ಬೌಲರ್ ₹10,75,00,000
- ಮನದೀಪ್ ಸಿಂಗ್- ಭಾರತೀಯ ಬ್ಯಾಟ್ಸ್‌ಮನ್ ₹1,10,00,000
- ಮಿಚೆಲ್ ಮಾರ್ಷ್- ವಿದೇಶಿ ಆಲ್ ರೌಂಡರ್ ₹6,50,00,000
- ಅಶ್ವಿನ್ ಹೆಬ್ಬಾರ್ -ಭಾರತೀಯ ಬ್ಯಾಟ್ಸ್‌ಮನ್ ₹20,00,000
- ಕುಲದೀಪ್ ಯಾದವ್- ಭಾರತೀಯ ಬೌಲರ್ ₹2,00,00,000
- ಸೈಯದ್ ಖಲೀಲ್ ಅಹಮದ್- ಭಾರತೀಯ ಬೌಲರ್ ₹5,25,00,000
- ಡೇವಿಡ್ ವಾರ್ನರ್ -ವಿದೇಶಿ ಬ್ಯಾಟ್ಸ್‌ಮನ್ ₹6,25,00,000
- ಚೇತನ್ ಸಕರಿಯಾ- ಭಾರತೀಯ ಬೌಲರ್ ₹4,20,00,000
- ಸರ್ಫರಾಜ್ ಖಾನ್- ಭಾರತೀಯ ಆಲ್ ರೌಂಡರ್ ₹20,00,000
ಇದನ್ನೂ ಓದಿ:IPL: 2ನೇ ದಿನ ಲಿವಿಂಗ್ಸ್ಟೋನ್ಗೆ ಜಾಕ್ಪಾಟ್; 11.5 ಕೋಟಿ ರೂಗೆ ಖರೀದಿಸಿದ ಪಂಜಾಬ್