ದುಬೈ: ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ವರ್ಷದಿಂದ ವರ್ಷಕ್ಕೆ ತನ್ನ ವೀಕ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. 14ನೇ ಆವೃತ್ತಿಯಲ್ಲೂ ನಿರೀಕ್ಷೆಯಂತೆ ಐಪಿಎಲ್ ವೀಕ್ಷಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.12 ರಷ್ಟು ಹೆಚ್ಚಳವಾಗಿದೆ. ಈ ವಿಚಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
-
I am delighted to share that #IPL2021 continues to register significant growth in viewership
— Jay Shah (@JayShah) September 30, 2021 " class="align-text-top noRightClick twitterSection" data="
📈
380 million TV viewers (till match 35)
12 million more than 2020 at the same stage🙌🏾
Thank you, everyone. It will only get more exciting from here on @IPL @StarSportsIndia @BCCI
">I am delighted to share that #IPL2021 continues to register significant growth in viewership
— Jay Shah (@JayShah) September 30, 2021
📈
380 million TV viewers (till match 35)
12 million more than 2020 at the same stage🙌🏾
Thank you, everyone. It will only get more exciting from here on @IPL @StarSportsIndia @BCCII am delighted to share that #IPL2021 continues to register significant growth in viewership
— Jay Shah (@JayShah) September 30, 2021
📈
380 million TV viewers (till match 35)
12 million more than 2020 at the same stage🙌🏾
Thank you, everyone. It will only get more exciting from here on @IPL @StarSportsIndia @BCCI
ಯುಎಇಯಲ್ಲಿ ನಡೆಯುತ್ತಿರುವ ವಿವೋ ಐಪಿಎಲ್ 2021, ಸತತ ನಾಲ್ಕನೇ ವರ್ಷವೂ ಟಿವಿಯಲ್ಲಿ 400 ಮಿಲಿಯನ್ ವೀಕ್ಷಕರ ಮೈಲುಗಲ್ಲನ್ನು ಮುರಿಯುವ ಹಾದಿಯಲ್ಲಿದೆ ಎಂದು ಸ್ಟಾರ್ ಇಂಡಿಯಾ ನೆಟ್‌ವರ್ಕ್ ತಿಳಿಸಿದೆ. ಟೂರ್ನಮೆಂಟ್ 35ನೇ ಪಂದ್ಯದವರೆಗೆ 380 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡಿದೆ. ವೀಕ್ಷಕರ ಪ್ರಮಾಣ ಐಪಿಎಲ್ 2020 ಗಿಂತ ಶೇ.12 ರಷ್ಟು ಹೆಚ್ಚಳವಾಗಿದೆ. ಟಿವಿ ವೀಕ್ಷಕರ ಸಂಖ್ಯೆ 2018 ರಿಂದ ಕೊನೆಯ ಮೂರು ಆವೃತ್ತಿಗಳಿಗಿಂತ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
2021ರ ಇಂಡಿಯನ್ ಪ್ರೀಮಿಯರ್ ಲೀಗ್ ವೀಕ್ಷಣೆಯಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದೆ ಎಂಬುದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. 35ನೇ ಪಂದ್ಯದವರೆಗೆ 380 ಮಿಲಿಯನ್ ವೀಕ್ಷಕರನ್ನು ಹೊಂದಿದೆ. ಇದು ಕಳೆದ ವರ್ಷದ ಆವೃತ್ತಿಗಿಂತ ಶೇ.12 ರಷ್ಟು ಹೆಚ್ಚಿದೆ. ಎಲ್ಲರಿಗೂ ಧನ್ಯವಾದಗಳು. 2021ರ ಐಪಿಎಲ್ ಇಲ್ಲಿಂದ ಮತ್ತಷ್ಟು ರೋಚಕವಾಗಿರಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: SRH vs CSK: ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ ಅಧಿಕೃತ ಪ್ರವೇಶಕ್ಕೆ ಧೋನಿ ಪಡೆ ಸಜ್ಜು