ETV Bharat / sports

ಶಿಖರ್ ಧವನ್ ಅರ್ಧಶತಕ: ಪಂಜಾಬ್​ ವಿರುದ್ಧ 7 ವಿಕೆಟ್​ಗಳ ಸುಲಭ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ - ಶಿಖರ್ ಧವನ್ ಅರ್ಧಶತಕ

ಒಟ್ಟಾರೆ ಐಪಿಎಲ್​ನಲ್ಲಿ 8 ಪಂದ್ಯಗಳಿಂದ 6 ಗೆಲುವು ಮತ್ತು 2 ಸೋಲಿನೊಂದಿಗೆ 12 ಅಂಕಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಪಂಜಾಬ್​ 8 ಪಂದ್ಯಗಳಲ್ಲಿ 5ನೇ ಸೋಲು ಕಂಡು ನೇ ಸ್ಥಾನದಲ್ಲಿಯೇ ಉಳಿದಿದೆ.

ಪಂಜಾಬ್​ ವಿರುದ್ಧ ಸುಲಭ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
author img

By

Published : May 2, 2021, 11:06 PM IST

ಅಹ್ಮದಾಬಾದ್: ಶಿಖರ್ ಧವನ್ ಮತ್ತು ಪೃಥ್ವಿ ಶಾ ಅವರ ಅಬ್ಬರ ಬ್ಯಾಟಿಂಗ್ ನೆರವಿನಿಂದ ಪಂಜಾಬ್​ ಕಿಂಗ್ಸ್​ ನೀಡಿದ್ದ 167 ರನ್​ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಕೇವಲ 3 ವಿಕೆಟ್​ ಕಳೆದುಕೊಂಡು ಇನ್ನು 14 ಎಸೆತಗಳಿರುವಂತೆ ತಲುಪಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, ಹಂಗಾಮಿ ನಾಯಕ ಮಯಾಂಕ್ ಅಗರ್​ವಾಲ್​ ಅವರ ಅಜೇಯ 99 ರನ್​ಗಳ ನೆರವಿನಿಂದ 6 ವಿಕೆಟ್​ ಕಳೆದುಕೊಂಡು 166 ರನ್​ಗಳಿಸಿತ್ತು.

167 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ್ದ ಡೆಲ್ಲಿ ತಂಡ ಇನ್ನು 14 ಎಸೆತಗಳಿರುವಂತೆಯೇ ತಲುಪಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಶಿಖರ್ ಧವನ್​ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ ಅಜೇಯ 69 ರನ್​ಗಳಿಸಿ ಗೆಲುವಿನ ರೂವಾರಿಯಾದರು. ಇವರಿಗೆ ಸಾಥ್ ನೀಡಿದ ಪೃಥ್ವಿ ಶಾ 22 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್​ಗಳ ನೆರವಿನಿಂದ 39 ರನ್​, ಸ್ಟೀವ್ ಸ್ಮಿತ್ 24, ಪಂತ್ 14 ಮತ್ತು ಹೆಟ್ಮೆಯರ್​ 4 ಎಸೆತಗಳಲ್ಲಿ ಅಜೇಯ 16 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.