ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸೂಪರ್ ಓವರ್‌ನಲ್ಲಿ ಬೈರ್‌ಸ್ಟೋವ್ ಅವರನ್ನು ಬಿಟ್ಟು ವಾರ್ನರ್ ಅರ್ಧಶತಕ ಸಿಡಿಸಿದ ದಣಿದಿದ್ದ ಕೇನ್ ವಿಲಿಯಮ್ಸನ್ ಜೊತೆಗೆ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿತ್ತು. ಎರಡೂ ತಂಡಗಳು 159 ರನ್ಗಳಿಸಿದ್ದವು. ನಂತರ ನಡೆದ ಸೂಪರ್ ಓವರ್‌ನಲ್ಲಿ ಎಸ್ಆರ್ಹೆಚ್ ನೀಡಿದ 8 ರನ್ಗಳ ಗುರಿ ಯಶಸ್ವಿಯಾಗಿ ಬೆನ್ನಟ್ಟಿ ಡೆಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
-
Unless Bairstow was in toilet, can't get why would he not be your first choice in a #SuperOver when he scored 38 of 18 in the main innings and looked the cleanest hitter. Baffling, Hyderabad fought well but have only themselves to blame for strange decisions. #SRHvsDC
— Virender Sehwag (@virendersehwag) April 25, 2021 " class="align-text-top noRightClick twitterSection" data="
">Unless Bairstow was in toilet, can't get why would he not be your first choice in a #SuperOver when he scored 38 of 18 in the main innings and looked the cleanest hitter. Baffling, Hyderabad fought well but have only themselves to blame for strange decisions. #SRHvsDC
— Virender Sehwag (@virendersehwag) April 25, 2021Unless Bairstow was in toilet, can't get why would he not be your first choice in a #SuperOver when he scored 38 of 18 in the main innings and looked the cleanest hitter. Baffling, Hyderabad fought well but have only themselves to blame for strange decisions. #SRHvsDC
— Virender Sehwag (@virendersehwag) April 25, 2021
ಆದರೆ, ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೋಲಿಗೆ ಸೂಪರ್ ಓವರ್‌ನಲ್ಲಿ ಬೈರ್‌ಸ್ಟೋವ್ ಕಡೆಗಣಿಸಿದ್ದೇ ಕಾರಣ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟೀಕಿಸಿದ್ದಾರೆ.
" ಬೈರ್‌ಸ್ಟೋವ್ ಟಾಯ್ಲೆಟ್‌ನಲ್ಲಿ ಇರುವುದನ್ನು ಹೊರತು ಪಡಿಸಿದರೆ, 18 ಎಸೆತಗಳಲ್ಲಿ ಆತ 38 ರನ್‌ಗಳಿಸಿದ್ದರೂ ಅವರೇಕೆ ನಿಮ್ಮ ಸೂಪರ್ ಓವರ್‌ನ ಮೊದಲ ಆಯ್ಕೆಯಾಗಲಿಲ್ಲ . ಅವರೊಬ್ಬರ ಕ್ಲೀನ್ ಹಿಟ್ಟರ್ ಆಗಿದ್ದರು. ಹೈದರಾಬಾದ್ ಅದ್ಭುತವಾಗಿ ಹೋರಾಡಿತು. ಆದರೆ, ತಮ್ಮ ವಿಚಿತ್ರ ನಿರ್ಧಾರಕ್ಕೆ ತಮ್ಮನ್ನು ತಾವೇ ದೂಕ್ಷಿಸಿಕೊಳ್ಳಬೇಕು" ಎಂದು ಸೆಹ್ವಾಗ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂಗ್ಲೀಷ್ ಬ್ಯಾಟ್ಸ್ಮನ್ ಚೇಸಿಂಗ್ ವೇಳೆ 211.11 ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೂ ವಾರ್ನರ್ ಸೆಟ್ ಬ್ಯಾಟ್ಸ್ಮನ್ ವಿಲಿಯಮ್ಸನ್ ಜೊತೆಗೆ ಸೂಪರ್ ಓವರ್ ಆಟಿ ಕೇವಲ 7 ರನ್ಗಳಿಸಿದ್ದರು. ಶಿಖರ್ ಧವನ್ ಮತ್ತು ಪಂತ್ 8 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ತಂಡಕ್ಕೆ 4ನೇ ಜಯ ತಂದುಕೊಟ್ಟರು.
ಇದನ್ನು ಓದಿ:ಪಾಂಡೆ ಅವರನ್ನು ತಂಡದಿಂದ ಕೈಬಿಟ್ಟಿದ್ದು ನಾನಲ್ಲ, ಅವರು: ಡೇವಿಡ್ ವಾರ್ನರ್