ETV Bharat / sports

ಆರ್​ಸಿಬಿಯ ಈ ಆಟಗಾರ 'ಪ್ಲೇಯರ್ ಆಫ್​ ದ ಟೂರ್ನಮೆಂಟ್​' ಆಗ್ತಾರೆ: ಮೈಕಲ್ ವಾನ್​ - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮ್ಯಾಕ್ಸ್​ವೆಲ್ ಕಳೆದ ಐಪಿಎಲ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಆದರೆ 2021ರಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿದ್ದು, ಮೂರು ಪಂದ್ಯಗಳಲ್ಲಿ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರು ಪ್ರಸ್ತುತ ಟೂರ್ನಿಯಲ್ಲೇ 176 ರನ್​ ಗಳಿಸಿ ಆರೆಂಜ್​ ಕ್ಯಾಪ್​ ಪಡೆದಿದ್ದಾರೆ.

ಗ್ಲೇನ್ ಮ್ಯಾಕ್ಸ್​ವೆಲ್​
ಗ್ಲೇನ್ ಮ್ಯಾಕ್ಸ್​ವೆಲ್​
author img

By

Published : Apr 18, 2021, 10:36 PM IST

ಚೆನ್ನೈ: ಅರ್​ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್​ ಗ್ಲೇನ್ ಮ್ಯಾಕ್ಸ್​ವೆಲ್ ಈ ಆವೃತ್ತಿಯಲ್ಲಿ ಟೂರ್ನಿಯ ಶ್ರೇಷ್ಠ ಆಟಗಾರನಾಗುತ್ತಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

ಮ್ಯಾಕ್ಸ್​ವೆಲ್ ಕಳೆದ ಐಪಿಎಲ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಆದರೆ 2021ರಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿದ್ದು, ಮೂರು ಪಂದ್ಯಗಳಲ್ಲಿ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರು ಪ್ರಸ್ತುತ ಟೂರ್ನಿಯಲ್ಲೇ 176 ರನ್ ​ಗಳಿಸಿ ಆರೆಂಜ್​ ಕ್ಯಾಪ್​ ಪಡೆದಿದ್ದಾರೆ.

"ಮ್ಯಾಕ್ಸ್​ವೆಲ್ ಆಟವನ್ನು ನೋಡುವುದಕ್ಕೆ ಇಷ್ಟವಾಗುತ್ತಿದೆ. ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್​ ಜೊತೆಯಲ್ಲಿ ಆಡುತ್ತಿರುವ ಅವರು, ನನ್ನ ಪ್ರಕಾರ ಅವರು ಟೂರ್ನಿ ಶ್ರೇಷ್ಠ ಆಟಗಾರನಾಗಬಹುದು. ಆರ್​ಸಿಬಿ ನಾನು ಹಿಂದೆ ನೋಡಿದ ತಂಡಕ್ಕಿಂತಲೂ ಈಗ ತುಂಬಾ ಬಲಿಷ್ಠವಾಗಿ ಕಾಣುತ್ತಿದೆ" ಎಂದು ವಾನ್ ಟ್ವೀಟ್ ಮಾಡಿದ್ದಾರೆ.

ಇಂದಿನ ಪಂದ್ಯದಲ್ಲಿ ಮ್ಯಾಕ್ಸ್​ವೆಲ್ 49 ಎಸೆತಗಳಲ್ಲಿ 78 ರನ್​ ಗಳಿಸಿದ್ದರು. ಸಹ ಆಟಗಾರ ವಿಲಿಯರ್ಸ್​ 34 ಎಸೆತಗಳಲ್ಲಿ ಅಜೇಯ 76 ರನ್ ​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನು ಓದಿ: ಆರ್​ಸಿಬಿ ಆಟಗಾರರ ಮುಡಿಗೆ ಸೇರಿದ ಆರೆಂಜ್, ಪರ್ಪಲ್ ಕ್ಯಾಪ್... ಪಾಯಿಂಟ್ ಪಟ್ಟಿಯಲ್ಲಿ ಕೊಹ್ಲಿ ಪಡೆ ದರ್ಬಾರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.