ETV Bharat / sports

ಮಿಂಚಿದ ನರೈನ್, ವೆಂಕಟೇಶ್​ : ಡೆಲ್ಲಿ ತಂಡವನ್ನು 127 ರನ್​ಗಳಿಗೆ ಕಟ್ಟಿಹಾಕಿದ ಕೆಕೆಆರ್​ - ರಿಷಭ್ ಪಂತ್

ಸ್ಟೀವ್ ಸ್ಮಿತ್​ 34 ಎಸೆತಗಳಲ್ಲಿ 39 ಮತ್ತು ರಿಷಭ್ ಪಂತ್ 36 ಎಸೆತಗಳಲ್ಲಿ 39 ರನ್​ಗಳಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಲು ನೆರವಾದರು.

Kolkata Knight Riders vs Delhi Capitals
ಡೆಲ್ಲಿ ತಂಡವನ್ನು 127 ರನ್​ಗಳಿಗೆ ಕಟ್ಟಿಹಾಕಿದ ಕೆಕೆಆರ್​
author img

By

Published : Sep 28, 2021, 5:31 PM IST

ಶಾರ್ಜಾ: ಕೋಲ್ಕತ್ತಾ ನೈಟ್​ ರೈಡರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್​ಗಳಿಸಲಷ್ಟೇ ಶಕ್ತವಾಗಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಆರಂಭದಿಂದಲೂ ರನ್​ಗಳಿಸಲು ಪರದಾಟ ನಡೆಸಿತಲ್ಲದೆ, ನಿರಂತರ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತ್ತು. ಸ್ಟೀವ್ ಸ್ಮಿತ್​ 34 ಎಸೆತಗಳಲ್ಲಿ 39 ಮತ್ತು ರಿಷಭ್ ಪಂತ್ 36 ಎಸೆತಗಳಲ್ಲಿ 39 ರನ್​ಗಳಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಲು ನೆರವಾದರು.

ಕೆಕೆಆರ್​ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾಗದೆ ಶಿಖರ್ ಧವನ್ 24, ಅಶ್ವಿನ್ 9 ಶ್ರೇಯಸ್ ಅಯ್ಯರ್​ 1, ಶಿಮ್ರಾನ್ ಹೆಟ್ಮಾಯರ್​ 4, ಲಲಿತ್ ಯಾದವ್ ಮತ್ತು ಅಕ್ಷರ್​ ಪಟೇಲ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಇನ್ನು ಸ್ಮಿತ್​ ಮತ್ತು ಪಂತ್ ಕೂಡ ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದರಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಡೆಲ್ಲಿ ತಂಡ ವಿಫಲವಾಯಿತು.

ಕೆಆರ್ ಪರ ಸುನೀಲ್ ನರೈನ್ 18ಕ್ಕೆ 2, ವೆಂಕಟೇಶ್ ಅಯ್ಯರ್​ 29ಕ್ಕೆ2, ಲಾಕಿ ಫರ್ಗುಸನ್​ 10ಕ್ಕೆ2 ಮತ್ತು ಟಿಮ್ ಸೌಥಿ 29ಕ್ಕೆ1 ರನ್​ ನೀಡಿದ ವಿಕೆಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.