ಹೈದರಾಬಾದ್: ಕೊರೊನಾ ಮಹಾಮಾರಿ ಕಾರಣ ಅರ್ಧಕ್ಕೆ ಸ್ಥಗಿತಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಪುನಾರಂಭಗೊಳ್ಳಲಿದ್ದು, ಅದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಎಲ್ಲರ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಟೂರ್ನಿ ಆರಂಭಗೊಳ್ಳಲು ಕೇವಲ ಒಂದೂವರೆ ತಿಂಗಳ ಮಾತ್ರ ಬಾಕಿ ಉಳಿದಿರುವ ಕಾರಣ ಫ್ರಾಂಚೈಸಿಗಳು ಸಿದ್ದಗೊಳ್ಳುತ್ತಿವೆ.
ಆಗಸ್ಟ್ 10ರ ನಂತರ ಎಲ್ಲ ಫ್ರಾಂಚೈಸಿಗಳು ದುಬೈಗೆ ತೆರಬಹುದು ಎಂದು ಬಿಸಿಸಿಐ ಈಗಾಗಲೇ ಅನುಮತಿ ನೀಡಿರುವ ಕಾರಣ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ವಾರಾಂತ್ಯದ ವೇಳೆಗೆ ಅಲ್ಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ದಟ್ಟವಾಗಿದೆ.
14ನೇ ಆವೃತ್ತಿ ಐಪಿಎಲ್ನ ಉಳಿದ ಪಂದ್ಯಗಳು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ತಂಡ ಆಗಸ್ಟ್ 14 ಅಥವಾ 15ರಂದು ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎಂದಿದ್ದಾರೆ.
ಐಪಿಎಲ್ ಯುಎಇನಲ್ಲಿ ನಡೆಯುತ್ತಿರುವ ಕಾರಣ ವಿದೇಶಿ ಆಟಗಾರರ ಲಭ್ಯತೆ ಬಗ್ಗೆ ಬಿಸಿಸಿಐ ಹಾಗೂ ಫ್ರಾಂಚೈಸಿಗಳಿಗೆ ಯಾವುದೇ ರೀತಿಯ ಲಭ್ಯತೆ ಸಿಕ್ಕಿಲ್ಲ. ಇಂಗ್ಲೆಂಡ್ ತಂಡ ಬಾಂಗ್ಲಾ ಪ್ರವಾಸ ಕೈಗೊಳ್ಳುತ್ತಿರುವ ಕಾರಣ ಯಾರೆಲ್ಲ ಟೂರ್ನಿಯಲ್ಲಿ ಆಡಲಿದ್ದಾರೆ ಎಂಬುದು ಖಚಿತಗೊಂಡಿಲ್ಲ. ಇದರ ಜೊತೆಗೆ ಯುಎಇನಲ್ಲೇ ಟಿ-20 ವಿಶ್ವಕಪ್ ಆರಂಭಗೊಳ್ಳಲಿರುವ ಕಾರಣ ಕೆಲ ಪ್ಲೇಯರ್ಸ್ ಐಪಿಎಲ್ನಿಂದ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.